ಗೆಳತಿ
ಗೆಳತಿಯೊಬ್ಬಳಿದ್ದಳು
ಬೀಳ್ಕೊಟ್ಟು ಬಂದೆ
ತುಂಬು ಕೊಡ ಬಾವಿಗಿಳಿಸಿದಂತೆ
ಬಿಟ್ಟು ಬಿಟ್ಟು..
ಎಲ್ಲಿ ಸಿಕ್ಕಿದಳೆಂದು
ಯಾರು ಕೇಳಿದರೆ ಗೊತ್ತಿಲ್ಲ
ಎಲ್ಲಿ ಹೋದರೂ ಬರುತ್ತಿದ್ದಳು
ನೆರಳಂತೆ
ಮುಂಜಾವೊ ಮುಸ್ಸಂಜೆಯೊ
ಜೊತೆಯಲ್ಲೆ ಇದ್ದಳು
ಮೌನವೊ ಮಾತೋ ಬೇಧವಿಲ್ಲದೆ
ಕುಳಿತಿದ್ದಳು
ಅತ್ತು ಕರೆದಾಗ ಬಿಗಿದಪ್ಪಿ
ಕಣ್ಣ ನೀರೊರೆಸಿದ್ದಳು
ನಕ್ಕಾಗ ಚಿವುಟಿದ್ದಳು
ಕೆನ್ನೆ ಹಿಂಡಿ
ಅರಿವಾದದ್ದು ಈಗಷ್ಟೆ ನನಗೆ
ಹೋಗಿ ಬರುತ್ತೇನೆಂದಾಗ
ಗೆಳತಿಯೊಬ್ಬಳು ಇದ್ದಳು
ನನಗೆ ನನ್ನೊಳಗೆ !
ಅಳಲೂ ಬಿಡಲಿಲ್ಲ
ಹೊರಟಾಗ,ಜಾಣೆ ಆಕೆ
ನೋಡುತ್ತಲೆ ಮರೆಯಾದಳು
ನಸುಕಿನ ಬೆಳದಿಂಗಳು
ಗೆಳತಿಯೊಬ್ಬಳಿದ್ದಳು
ಹಸಿ ಹಾಲ ಕೆನೆಯಂತೆ
ಬೀಳ್ಕೊಟ್ಟು ಬಂದೆ
ನಿಂತು ನಿಂತು !
Rating
Comments
ಉ: ಗೆಳತಿ
ಉ: ಗೆಳತಿ
ಉ: ಗೆಳತಿ
ಉ: ಗೆಳತಿ