ಗ್ನು/ಲಿನಕ್ಸ್ ಹಬ್ಬದ ಚಿಗುರು - ಡೆಬಿಯನ್ ಆಧಾರಿತ ಗ್ನು/ಲಿನಕ್ಸ್ ಡೌನ್ಲೋಡ್ ಮಾಡ್ಕೊಳ್ಳಿ

ಗ್ನು/ಲಿನಕ್ಸ್ ಹಬ್ಬದ ಚಿಗುರು - ಡೆಬಿಯನ್ ಆಧಾರಿತ ಗ್ನು/ಲಿನಕ್ಸ್ ಡೌನ್ಲೋಡ್ ಮಾಡ್ಕೊಳ್ಳಿ

ಕನ್ನಡಿಗರಿಗೆ, ಯಾವುದೇ ತೊಂದರಯಿಲ್ಲದೆ ಕಂಪ್ಯೂಟರಿನಲ್ಲಿ ಕನ್ನಡ ಓದಲು ಮತ್ತು ಬರೆಯಲು ಸಾಧ್ಯವಾಗಬೇಕು ಅನ್ನೋ ಉದ್ದೇಶದಿಂದ ಸಿದ್ದಪಡಿಸಿದ ಗ್ನು/ಲಿನಕ್ಸ್ ಡಿಸ್ಟ್ರಿಬ್ಯೂಷನ್ -ಚಿಗುರು (ಡೆಬಿಯನ್ ಲೆನ್ನಿ ಆಧಾರಿತ). ಗ್ನು/ಲಿನಕ್ಸ್ ಹಬ್ಬವನ್ನ ನೆಡೆಸ್ಕೋತ ಬಂದಿರೋ ಸಂಪದ ತಂಡದ ಈ ಒಂದು ತಂತ್ರಾಂಶ ಈಗ ಎಲ್ಲರಿಗೆ ಲಭ್ಯ.

ನಿಮ್ಮ ಕಂಪ್ಯೂಟರಿನ ಸಿ.ಡಿ ರಾಂ ನಲ್ಲಿ ಲೈವ್ ಸಿ.ಡಿ ರೀತಿಯಲ್ಲೂ (ಅಂದ್ರೆ ಹಾರ್ಡಿಸ್ಕ್ ಗೆ ಇನ್ಸ್ಟಾಲ್ ಮಾಡದೇ ಉಪಯೋಗಿಸಬಹುದು), ನಿಮಗೆ ಇಷ್ಟವಾದಲ್ಲಿ ಇದನ್ನ ನಿಮ್ಮ ಕಂಪ್ಯೂಟರ್ನಲ್ಲಿ ಸ್ಥಾಪಿಸಿಕೊಳ್ಳಲೂ ಈ ಸಿ.ಡಿ ನಿಮಗೆ ಆಯ್ಕೆಗಳನ್ನು ನೀಡುತ್ತದೆ. 

ಚಿಗುರು ನಿಮಗೆ ಇಲ್ಲಿ ದೊರೆಯುತ್ತದೆ.

 

 

ಸಂಪದದ ಟೆಕ್ ತಂಡದ ಗ್ನು/ಲಿನಕ್ಸ್ ಹಬ್ಬದ ಕೊಡುಗೆ - ಡೆಬಿಯನ್ ಚಿಗುರು ಸಿ.ಡಿ ಈಗ ಸೋರ್ಸ್ ಫೋರ್ಜ್ ನಲ್ಲಿ ಲಭ್ಯವಿದೆ. ಅದನ್ನು ನೀವು ಈ ಕೊಂಡಿಯ ಮೂಲಕ ಡೌನ್ಲೋಡ್ ಮಾಡ್ಕೊಳ್ಳಿ.

ನಿಮಗೆ ಈ ಆಪರೇಟಿಂಗ್ ಸಿಸ್ಟಂ ಉಪಯೋಗಿಸುವಾಗ ಆಗುವ ತೊಂದರೆಗಳ ನಿವಾರಣೆಗೆ ನಮಗೊಂದು ಮೈಲಾಯಿಸಿ. tech-volunteers at sampada.net ಇದು ನಮ್ಮ ಈ-ಮೈಲ್ ವಿಳಾಸ.

ಹೆಚ್ಚಿನ ಟೆಕ್ ಲೇಖನಗಳಿಗಾಗಿ http://tech.sampada.net ನೋಡಿ. ಸಂಪದ ಟೆಕ್ ಗೆಳೆಯರ ಬ್ಲಾಗ್ ತಾಣ.

 

Rating
No votes yet

Comments