ಗ್ಲಾಡಿಯೇಟರ್ -2000 -ಚಿತ್ರ ನೋಡಿರುವಿರ?
ಚಿತ್ರ
ಪೌರಾಣಿಕ ,ಐತಿಹಾಸಿಕ,ಆಯಾಯ ಕಾಲ ಘಟ್ಟದಲ್ಲಿ ಬಂದ ಸಾಮಾಜಿಕ ಪರಿವರ್ತನೆ , ಸಂಘರ್ಷ , ಹೋರಾಟದ ಚಲನ ಚಿತ್ರಗಳ ಕುರಿತು ನನಗೆ ಅತೀವ ಆಸಕ್ತಿ.. ಅದು ಕುದುರಿದ್ದು ಹೀಗೆ:
ಅದೊಮ್ಮೆ ಪೀ ಯೂ ಸಿಯಲ್ಲಿ ಜಿಲ್ಲ ಕೇಂದ್ರದಲ್ಲಿ ಓದುವಾಗ,ಬಂದ ಹಿಂದಿಗೆ ಡಬ್ ಮಾಡಿದ್ದ 'ಗ್ಲಾಡಿಯೇಟರ್' (2000) ಚಿತ್ರ ನೋಡುವ ಮೂಲಕ ಶುರು ಆಯ್ತು..
ರಸ್ಸೆಲ್ ಕ್ರೌ ಅದ್ಭುತ ನಟನೆ -ಯುದ್ಧದ ಸನ್ನಿವೇಶಗಳು, ಗ್ರಾಫಿಕ್ಸ್ ಎಲ್ಲವೂ ಮನ ಸೂರೆಗೊಂಡಿದ್ದವು ಅದಕಿಂತ ಹೆಚ್ಚಾಗಿ ನಾವು ಶಾಲಾ ಪಟ್ಯ ಪುಸ್ತಕದಲ್ಲಿ ಇತಿಹಾಸದಲ್ಲಿ ಓದಿದ ಗ್ರೀಕ್ ಮತ್ತು ರೋಮನ್ ರಾಜರ ಬಗ್ಗೆ ಅವರ ಆಳ್ವಿಕೆ ಅವರ ಕುಟುಂಬದಲ್ಲಿನ ವೈಮನಸ್ಯ , ಅಧಿಕಾರ ದಾಹ,ಹಗೆತನ ತಣ್ಣಗಿನ ಕ್ರೌರ್ಯ ಎಲ್ಲವೂ ಆ ಚಿತ್ರದಲಿ ಕಣ್ಣಿಗೆ ಕಟ್ಟುವಂತೆ ತೋರಿಸಿದ್ದರು ಅದ್ಕೆ ತಕ್ಕಂತೆ ಆಯ್ದುಕೊಂಡ ನಟವರ್ಗ ...
ಆಸ್ಕರ್ ಪ್ರಶಸ್ತಿ ವಿಜೇತ ಪ್ರಖ್ಯಾತ ನಿರ್ದೇಶಕ 'ರಿಡ್ಲೆ ಸ್ಕಾಟ್' ಈ ಚಿತ್ರದ ರೂವಾರಿ (ತೀರ ಇತ್ತೀಚಿಗೆ ಮೇಲು ಸೇತುವೆ ಮೇಲಿಂದ ದುಮುಕಿ ಆತ್ಮಹತ್ಯೆ ಮಾಡಿಕೊಂಡ ಟೋನಿ ಸ್ಕಾಟ್(ಮತ್ತೊಬ್ಬ ಖ್ಯಾತ ನಿರ್ದೇಶಕ ) ಇವರ ತಮ್ಮ )..
ಕಥಾ ಹಂದರ:
ರೋಮನ್ ಸಾಮ್ರಾಜ್ಯದ ಜನರ ಅಭಿಮಾನ ಗಳಿಸಿದ ನ್ಯಾಯಪರ ದಯಪರನಾದ ಜೆನರಲ್ 'ಮ್ಯಾಕ್ಸಿಮಸ್' ನನ್ನು ತನ್ನ ಉತ್ತರಾಧಿಕಾರಿಯಾಗಿಸಿ ತೀರ್ಮಾನ ತೆಗೆದುಕೊಳ್ಳುವ ವಯಸ್ಸಾದ ರಾಜನ ತೀರ್ಮಾನ ಅವನ ಮಗನನ್ನು ರೊಚ್ಚಿಗೆಬ್ಬಿಸಿ ಅನಾರೋಗ್ಯಪೀಡಿತನಾದ ತನ್ನ ತಂದೆ (ಮುದಿ ರಾಜ )ಯನ್ನು ಈ ಬಗ್ಗೆ ಪ್ರಶ್ನಿಸಿ ಕ್ರೋಧದಿಂದ ಅಪ್ಪಿಕೊಂಡು ಅಪ್ಪುಗೆಯಲ್ಲೇ ಹಿಸುಕಿ ಕೊಲ್ಲುವನು..ಆ ಸನ್ನಿವೇಶದ ತಣ್ಣಗಿನ ಕ್ರೌರ್ಯ ನಟರ ನಟನೆ ಮೈನಲಿ ಚಳುಕು ಮೂಡಿಸುವದು..
ತಂದೆಯ ಮರಣಾ ನಂತರ ತಾನೇ ರಾಜ ಎಂದು ಪುರ ಪ್ರಮುಖರ- ಆಸ್ಥಾನ ಪ್ರಮುಖರ ವಿರೋಧದ ಮದ್ಯೆಯೂ ಘೋಷಿಸಿಕೊಂಡು ಜೆನರಲ್ ಮ್ಯಾಕ್ಸಿಮಸ್ ನನ್ನು ಜೈಲಿಗೆ ತಳ್ಳುವನು , ಮುಂದೊಮ್ಮೆ ಅವನನ್ನು ಸಾವಕಾಶವಾಗಿ ಮುಗಿಸುವುದು ಯುವರಾಜನ ಗುರಿ,ಜೈಲಿನಲ್ಲೇ ಈ ದುರುಳ ಯುವರಾಜನ ವಿರುದ್ಧ ಆಕ್ರೋಶ ಹೆಚ್ಚಾಗಿ ಸಮಾನ ಮನಸ್ಕ ವಿರೋಧಿಗಳು ಒಟ್ಟಾಗಿ ಮ್ಯಾಕ್ಸಿಮಸ್ ನೇತೃತ್ವದಲ್ಲಿ ಯುವರಾಜನ ವಿರುದ್ಧ ಹೋರಾಟಕ್ಕೆ ಅಣಿ ಆಗುವರು..
ಅಪಾರ ಜನಪ್ರಿಯತೆ ಗಳಿಸಿದ ನ್ಯಾಯಯುತವಾಗಿ ರಾಜನಿಂದಲೇ ಉತ್ತರಾದಿಕಾರಿ ಎಂದು ಘೋಷಿಸಲ್ಪಟ್ಟ ಜೆನರಲ್ ಒಬ್ಬ ಸೆರೆಗೆ ಈಡಾಗಿ ತೀರ ಕೆಳಮಟ್ಟದಲ್ಲಿ ಕೀಳಾಗಿ ಸಾಮನ್ಯ ಕೈದಿಯಂತೆ ಕಾಲ ತಳ್ಳುವ ಮುಂದೊಮ್ಮೆ 'ಗ್ಲಾಡಿಯೇಟರ್' ಹೆಸರಿನ ರೋಚಕ ಕ್ರೂರ ಆಟದಲ್ಲಿ ಕ್ರೂರ ಪ್ರಾಣಿಗಳು-ಸ್ಪರ್ಧಿಗಳೊಡನೆ ಮಾಡು ಇಲ್ಲವೇ ಮಡಿ ರೀತಿಯ ಹೋರಾಟದಲ್ಲಿ ವಿಜಯಿಯಾಗಿ ಮತ್ತೆ ರಾಜನಾಗುವ ಅವಕಾಶ..ಆ ದಾರಿಯಲಿ ನಡೆವ ತಂತ್ರ ಕುತಂತ್ರ -ಆಶೆ ದುರಾಶೆ-ಸಂಚು-ವಶೀಲಿ -ಗಳ ಸಶಕ್ತ ಅನಾವರಣ...
ಯುವರಾಜನ ಸಹೋದರಿ ಮತ್ತು ಕೆಲ ಪುರ ಪ್ರಮುಖರು ಆಸ್ಥಾನ ಸಲಹೆಗಾರರು ಮ್ಯಾಕ್ಸಿಮಸ್ನ್ನನ್ನು ರಹಸ್ಯವಾಗಿ ಬೆಂಬಲಿಸುವರು ..ಯುವರಾಜನ ಸಹೋದರಿಗೆ ಜೆನರಲ್ ಮ್ಯಾಕ್ಸಿಮಸ್ ಮೇಲೆ ಅನುರಾಗ ಇದು ಸಹೋದರಿ ಮತ್ತು ಸಹೋದರ (ಯುವರಾಜ)ರ ನಡುವೆ ಈ ಬಗ್ಗೆ ವಾಗ್ಯುದ್ಧ ನಡೆವದು ಅಣ್ಣನ ಬೆದರಿಕೆ ಹೊಡೆತಕ್ಕೂ ಬಗ್ಗದ ತಂಗಿಯ ಹಠ ..
ಜೆನರಲ್ ನನ್ನು ಒಮ್ಮೆಗೆ ಸಾಯ್ಸಿದರೆ ಸಮಸ್ತ ಸಾಮ್ರಾಜ್ಯದ ಜನತೆ ಮತ್ತು ವಿರೋಧಿಗಳ ವಿರೋಧಕ್ಕೆ ಒಳಗಾಗಬೇಕಾದೀತು ಅಧಿಕಾರ ಹೋದೀತು ಎಂಬ ಯೋಚನೆ ಮೂಡಿ ತನ್ನ ಸಾಮ್ರಾಜ್ಯದಲ್ಲಿ ನಡೆವ 'ಗ್ಲಾಡಿಯೇಟರ್' ಹೆಸರಿನ ಕ್ರೂರ ಪ್ರಾಣಗಳು ಅದಕಿಂತ ಕ್ರೂರ ಮನುಜರ ಜೊತೆಗಿನ ಅಪಾಯಕಾರಿ ಹೊಡೆದಾಟದ ಕಾಳಗದಲ್ಲಿ ಜೆನರಲ್ನನ್ನು ಅನ್ಯಾಯವಾಗಿ ಕೊಳುವ ಸ್ಕೆಚ್ ಹಾಕಿ ಆ ಪಂಧ್ಯ ಏರ್ಪಾಟು ಮಾಡುವನು ..
ತನ್ನ ಅನ್ತ್ಯಕ್ಕಾಗಿಯೇ ಈ ಪಂಧ್ಯ ಎಂದೂ ಗೊತ್ತಿದ್ದೂ ಜೆನರಲ್ ಮ್ಯಾಕ್ಸಿಮಸ್ ಎದೆಗುಂದದೆ ರಾಜಕುಮಾರಿ -ಪುರ ಪ್ರಮುಖರು-ಆಸ್ಥಾನ ಸಲಹೆಗಾರರು ಹಾಗೂ ಸಹ ಜೈಲು ಖೈದಿಗಳ ಪ್ರೋತ್ಸಾಹ ಬೆಂಬಲದೊಡನೆ ಈ ಕಾಳಗಕ್ಕೆ ಸಜ್ಜಾಗುವನು ..
ಅಪಾಯಕಾರಿ ಪ್ರಾಣಿಗಳು ,ಅಪಾಯಕಾರಿ ಅಯುದ್ಹ ಹಿಡಿದು ಸುತ್ತ ಮುತ್ತಲಿಂದ ಆಕ್ರಮಣ ಮಾಡುವ ಸ್ಪರ್ಧೆಯ ಹೋರಾಟಗಾರರಿಂದ ತಪ್ಪಿಸಿಕೊಂಡು ಅವರನ್ನು ಗೆದ್ದು ಕೊನೆಗೆ ಎಲ್ಲರೂ ಸೋತು ಯುವರಾಜನೆ ಅಖಾಡಕ್ಕೆ ಇಳಿದು ಮಾಜಿ ಜೆನರಲ್ ಮ್ಯಾಕ್ಸಿಮಸ್ ಮತ್ತು ಯುವರಾಜ ಮಧ್ಯೆ ಘೋರ ಕಾಳಗ ನಡೆದು ಕೊನೆಗೆ ಯುವರಾಜನ ಅಂತ್ಯವಾಗುವುದು ,ಜನರ ವಿಶ್ವಾಸ ಗಳಿಸಿದ ಮ್ಯಾಕ್ಸಿಮಸ್ ತನ್ನ ನ್ಯಾಯಯುತ ಸ್ಥಾನ ಮಾನ ಮರಳಿ ಪಡೆದು ಯುವರಾಜನ ತಂಗಿಯನ್ನು ವರಿಸುವನು...
ಗಮನ ಸೆಳೆವ ಸನ್ನಿವೇಶಗಳು:
===================
1. ಅನಿರೀಕ್ಷಿತವಾಗಿ ರಾಜನಾಗುವ ಅವಕಾಶದ ಘೋಷಣೆ ಆಗ ಜೆನರಲ್ಗೆ ಆಗುವ ಅಚ್ಚರಿ , ಯುವರಾಜನಿಗೆ ಆಗುವ ಆಘಾತ
2.ಹಾಸಿಗೆಯಲ್ಲಿ ರೋಗ ಪೀಡಿತನಾಗಿ ಮಗನೊಡನೆ ಮಾತಾಡುತ್ತ ಮ್ಯಾಕ್ಸಿಮಸ್(ಜೆನರಲ್)ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದ ಕಾರಣ ,ಅವನೊಡನೆ ಯುವರಾಜ ಹೊಂದಿಕೊಂಡುಹೋಗಬೇಕು ಎನ್ನುವಾಗ ಮೌನವಾಗಿ ಒಪ್ಪಿಕೊಂಡು ಆಮೇಲೆ ಮುದಿ ರಾಜನನ್ನು ಅಪ್ಪಿಕೊಂಡು ಸಾಯಿಸುವ ದೃಶ್ಯ
3. ಯುವರಾಜ -ಜೆನರಲ್ ಭೇಟಿಯ ಹಲವು ಸನ್ನಿವೇಶಗಳು
4.ಆಸ್ಥಾನ ಪುರ ಪ್ರಮುಖರು ಯುವರಾಜನಿಗೆ ಬುದ್ಧಿ ಹೇಳುವ -ಮೌನವಾಗಿ ಅವನು ಹೇಳಿದ್ದಕ್ಕೆ ಒಪ್ಪಿಕೊಳ್ಳಬೇಕಾದ ಸಂದಿಗ್ಧ ಸ್ತಿತಿಯ ಸನ್ನಿವೇಶಗಳು.
5. ಅಂತ್ಯದ ಹೋರಾಟ ಹೊಡೆದಾಟದ ಸನ್ನಿವೇಶಗಳು.
6.ಚಿತ್ರಕ್ಕಾಗಿ ಹಾಕಿದ ಸೆಟ್ಟುಗಳು ,ಪಾತ್ರ ವರ್ಗದ ವಸ್ತ್ರ ಉಡುಗೆ ತೊಡುಗೆ ಆಭರಣ ವೈಭವ,ಮತ್ತು ಪಾತ್ರ ವರ್ಗದ ನಟನೆ.
7.ಯುದ್ಧದ ಸನ್ನಿವೇಶದ ಬಾಣ ಬಿರುಸು ,ರಾಕೆಟ್ ಇಲದ ಕಾಲದಲ್ಲಿ ಪಿರಂಗಿ ಒಳಗೆ ಮದ್ದು ಉಂಡೆ ಇಟ್ಟು ಶತೃಗಳ ಮೇಲೆ ಎಸೆವ / ಚಿಮ್ಮುವ ದೃಶ್ಯಗಳು..
ಚಿತ್ರಕ್ಕಾಗಿ ಅಪಾರ ಶ್ರಮ ಪಟ್ಟಿದ್ದು ಚಿತ್ರ ನೋಡುವಾಗ ಅನುಭವಕ್ಕೆ ಬರುವುದು.
ಆ ಕಾಲದ ಜೀವ ಕ್ರಮ ಮೋಜು ಮಸ್ತಿ -ಕುಸ್ತಿ ಕಾಳಗ ಶೈಲಿ ಚಿತ್ರದಲ್ಲಿ ಅನಾವರಣಗೊಂಡಿದೆ ..
ಈ ಚಿತ್ರದ ಮೂಲಕ ನಟ ರಸೆಲ್ ಕ್ರೌ ಮತ್ತು ಖಳ (ಯುವರಾಜನ ಪಾತ್ರಧಾರಿ) ಜಾಕ್ವೆನ್ ಫೀನಿಕ್ಸ್ ಬೆಳಕಿಗೆ ಬಂದು ಪ್ರಸಿದ್ಧ ನಟರಾದರು. ಚಿತ್ರ ಹಲವು ಪ್ರಶಸ್ತಿ ತನದಾಗಿಸಿಕೊಂಡು ಜಗತ್ತಿನಾದ್ಯಂತ ಅಪಾರ ಹಣ ಗಳಿಸಿತು..
5 ಆಸ್ಕರ್ ಪ್ರಶಸ್ತಿಗಳನ್ನು
ಉತ್ತಮ ಚಿತ್ರ
ಉತ್ತಮ ನಟ
ಉತ್ತಮ ಧ್ವನಿ ಮುದ್ರಣ
ದೃಶ್ಯ ತಂತ್ರಜ್ಞಾನ (ವಿಶುಅಲ್ ಎಫೆಕ್ಟ್)
ಉತ್ತಮ ವಸ್ತ್ರ ವಿನ್ಯಾಸ
ವಿಭಾಗದಲಿ ಇತರ ಚಿತ್ರಗಳ ಜೊತೆ ಸ್ಪರ್ಧಿಸಿ ಮುಡಿಗೇರಿಸಿಕೊಂಡ ಚಿತ್ರ .ಅಲ್ಲದೆ ಇನ್ನಿತರ(ಸುಮಾರು50-60 ಪ್ರಶಸ್ತಿಗಳನ್ನು ದೇಶ ವಿದೇಶದಲ್ಲಿ ) ಹಲವು ಪ್ರಶಸ್ತಿ ಮನ್ನಣೆ ಗಳಿಸಿದ ಚಿತ್ರ...
ಪೌರಾಣಿಕ ,ಐತಿಹಾಸಿಕ ,ಸಾಮಾಜಿಕ ಪರಿಣಾಮದ ಘಟನೆಗಳ ಚಿತ್ರ ನಿರ್ಮಾಣ ಸಾಮನ್ಯದ್ಧಲ್ಲ ,ಅಪಾರ ಶ್ರಮ-ಸಂಶ್ಹೊಧನೆ - ಪೋಷಾಕು , ಸೆಟ್ಟು ತಯಾರಿ -ನಟ ವರ್ಗ-ಹಾಗೋ ಅದೆಲ್ಲ ದೊರೆತರೂ ಮೂಲಕ್ಕೆ ಕಥೆಗೆ ಕುಂದು ಬರದಂತೆ ಪ್ರೇಕ್ಷಕರಿಗೂ ನಿರಾಶೆ ಆಗದಂತೆ ಚಿತ್ರ ನಿರ್ಮಿಸುವುದು ಅದನ್ನು ಯಶಸ್ವಿಯಾಗಿಸುವುದು ಅತಿ ಕಠಿಣ ಸವಾಲು..
ಅದನ್ನು ರಿಡ್ಲೆ ಸ್ಕಾಟ್ ಸಾಧಿಸಿದ ನಿರ್ದೇಶಕ ರಿಡ್ಲೆ ಸ್ಕಾಟ್ ಅದ್ಕೂ ಮುಂಚೆ ವಿಭಿನ್ನ ಕಥಾ ವಸ್ತುವಿನ ಕುರಿತ ಹಲವು ಅಮೋಘ ಚಿತ್ರಗಳನ್ನು ತೆಗೆದು ಯಶಸ್ವಿಯಾದವರು.ಹೀಗಾಗಿ ಈ ರಾಜ ವಂಶದ ಅಧಿಕಾರ ಹಗೆತನದ ಕುರಿತ ಚಿತ್ರ ಹೇಗೆ ಬರಬಹುದೆಂಬ ಕುತೂಹಲ ಈರ್ಶೆ ಜನರಲ್ಲಿ ವಿಮರ್ಶಕರಲ್ಲಿ ಇತ್ತು...ಅವರವರ ನಿರೀಕ್ಷೆ ಸುಳ್ಲಾಗದೆ ಚಿತ್ರ ಅದ್ಭುತವಾಗಿ ಮೂಡಿಬಂದು ತೆಗೆದರೆ ಹೀಗೆ ತೆಗೆಯಬೇಕು ಎಂಬ ಹಾಗೆ ಮಾಡಿ ಇನ್ನು ಕೆಲವರು ಇನ್ನಿತರ ಈ ತರಹದ ಚಿತ್ರಗಳನ್ನು ತೆಗೆವ ಹಾಗೆ ಮಾಡಿತು..
ನಿರ್ದೇಶಕ ನಟವರ್ಗವನ್ನು ರಾತ್ರೋ ರಾತ್ರಿ ಪ್ರಸಿದ್ಧಿಗೊಳಿಸಿ ಅಜರಾಮರರನ್ನಾಗಿಸಿತು..
ಚಿತ್ರ ನೋಡುವಾಗ ಕೆಲ ಸನ್ನಿವೇಶಗಳು ಜಗತ್ತಿನ ಎಲ್ಲ ರಾಜ ಮನೆತನಗಳಲಿ ನಡೆದಿರಬಹುದಾದ ಕೆಲ ಇದೇ ತರಹದ ಘಟನೆಗಳನ್ನು ನೆನಪಿಗೆ ತರಬಹ್ದು..
ಐತಿಹಾಸಿಕ ಪೌರಾಣಿಕ ಸಾಮಾಜಿಕ ಹೋರಾಟದ -ಇತಿಹಾಸ ಕುರಿತ ಚಿತ್ರಗಳು ಹಾಲಿವುಡ್ನಲ್ಲಿ ಬೇಜಾನ್ ತಯಾರಾಗುತ್ತವೆ ,ಜಗತ್ತಿನಾದ್ಯಂತ ಅವರ ಚಿತ್ರಗಳು ಆಯಾಯ ಭಾಷೆಯಲ್ಲಿ ಡಬ್ ಮಾಡಲ್ಪಟ್ಟು ಅಪಾರ ಹಣ ಗಳಿಸುತ್ತವೆ..!!
ಅವರ ಕೆಲವು ಚಿತ್ರಗಳ ಸನ್ನಿವೇಶಗಳನ್ನು ಹೊಡೆದಾಟದ ದೃಶ್ಯಗಳನ್ನು ನಮ್ಮ ದೇಶದ ಹಲವು ಭಾಷೆಯ ಚಿತ್ರಗಳಲ್ಲಿ ಕಾಪಿ ಮಾಡಿರುವರು...ಕೆಲವು ಕೆಟ್ಟ ಕಾಪಿ ಇನ್ನು ಕೆಲವು ಸರಿ ಸಮ....!!
ಗಮನಿಸಿ :
ಚಿತ್ರದಲಿ ಕೆಲ ಅಹಿತಕರ (ಚುಂಬನ -ಆಲಿಂಗನ-ಪ್ರಣಯದ) -ಸನ್ನಿವೇಶಗಳು ಮತ್ತು ಕ್ರೂರ ಹತ್ಯೆ ದೃಶ್ಯಗಳೂ ಇದ್ದು ಇದು ಮಕ್ಕಳೊಡನೆ ಮುಕ್ತವಾಗಿ ಕುಳಿತು ನೋಡುವಂತ ಚಿತ್ರ ಅಲ್ಲವೇನೋ? ಎನ್ನುವದು ನನ್ನ ಭಾವನೆ!!
ಆದರೆ ಭಾರತ ದೇಶದ ಸೆನ್ಸಾರ್ ಪ್ರಕಾರ ಈ ಚಿತ್ರದ ಸೀ ಡಿ ಡೀ ವೀ ಡಿಯಲಿ ಕೆಲ ಸನ್ನಿವೇಶಗಳಿಗೆ ಕತ್ತರಿ ಬಿದ್ದಿರುವ ಸಂಭವ ಇದೆ...!!
ಮಿಸ್ ಮಾಡಿಕೊಳ್ಳಲಾಗದ -ಮಾಡಬಾರದ ಸಿನೆಮ ಅನ್ನಬಹ್ದು...
>>>ಹಾಗೆ ನೋಡಿದರೆ ನಾ ಈ ಬರಹದ ಜಾಗದಲ್ಲಿ ಬರೆಯಬೇಕಾಗಿದ್ದುದು ವಾಕಿರಿ (ಹಿಟ್ಲರ್ ನ ಹತ್ಯೆ ಪ್ರಯತ್ನ ಕುರಿತ ನೈಜ ಚಿತ್ರ) ಚಿತ್ರದ ಬಗ್ಗೆ -
ಈ ಬರಹದ ಪೀಠಿಕೆ ಬರೆದು ಮುಖ್ಯ ವಿಷಯಕ್ಕೆ ಬರುತಿದ್ದ್ದಂತೆ ಆ ಚಿತ್ರದ ಬದಲಿಗೆ ಈ ಚಿತ್ರದ ಬಗ್ಗೆ ಬರೆದರೆ ಹೇಗೆ ಎನ್ನುವ ಭಾವ ಮೂಡಿ ಇದೇ ಮೊದಲಾಯ್ತು..
ಆ ಚಿತ್ರದ ಬಗ್ಗೆ ಇನ್ನೊಮ್ಮೆ ಬರೆವೆ...!!
======================================================================================
ಈ ಚಿತ್ರದ ವೀಡಿಯೊ ಟ್ರೇಲರ್ : http://www.youtube.com/watch?v=IvTT29cavKo
ಚಿತ್ರದ ಬಗ್ಗೆ ವಿವರ: http://www.imdb.com/title/tt0172495/
ಚಿತ್ರದ ಕೆಲ ಅದ್ಭುತ ಸನ್ನಿವೇಶಗಳ ಬಗ್ಗೆ: http://jaymckinnon.com/blog/all-time-best/top-10-gladiator-movie-moments
ನಿರ್ದೇಶಕರ ಪರಿಚಯ : http://en.wikipedia.org/wiki/Ridley_Scott#Personal_life
ಆಸ್ಕರ್ ಪ್ರಶಸ್ತಿ : http://en.wikipedia.org/wiki/73rd_Academy_Awards
Rating
Comments
ಬರೆಯಿರಿ ಹೀಗೆ ಚಿತ್ರ ವಿಮರ್ಷೆಗಳು
ಬರೆಯಿರಿ ಹೀಗೆ ಚಿತ್ರ ವಿಮರ್ಷೆಗಳು ಉತ್ತಮವಾಗಿ ಮೂಡಿಬರುತ್ತಿರಲಿ. ಹಾಗೆ ನಮಗೆ ಸಿನಿಮಾ ನೋಡುವ ಖರ್ಚು ಉಳಿಯುತ್ತಿರಲಿ :)))
ಗ್ಲಾಡಿಯೇಟರ್ ಸಿನಿಮಾ ನೋಡಬೇಕೆಂದು
ಗ್ಲಾಡಿಯೇಟರ್ ಸಿನಿಮಾ ನೋಡಬೇಕೆಂದು ತುಂಬಾ ದಿನದಿಂದ ಅಂದುಕೊಂಡಿದ್ದೆ, ಇನ್ನೂ ಕಾಲ ಕೂಡಿ ಬಂದಿಲ್ಲ. ಬರಹ ಓದಿ ಸಿನಿಮಾ ಕಥೆಯನ್ನು ಅರ್ಥಮಾಡಿಕೊಳ್ಳುವಂತಾಯಿತು. ಧನ್ಯವಾದಗಳು. ಉತ್ತಮ ವಿಮರ್ಶೆ.
In reply to ಗ್ಲಾಡಿಯೇಟರ್ ಸಿನಿಮಾ ನೋಡಬೇಕೆಂದು by ಮಮತಾ ಕಾಪು
ಮಮತಾ ಅವ್ರೆ -ಚಲನ ಚಿತ್ರಗಳ
ಮಮತಾ ಅವ್ರೆ -ಚಲನ ಚಿತ್ರಗಳ ಬಗೆಗಿನ ಸ.ವಾ ಬರಹಗಳನ್ನು ಓದಿ ಸಿನೆಮ ನೋಡದೆ ಇದ್ರೆ ಹೇಗೆ...!!
ಸಮಯ ಸಿಕ್ಕಾಗ ನೋಡಿ ಆಮೇಲೆ ನೀವೇ ಹೇಳುವಿರಿ -ಎಷ್ಟು ಒಳ್ಳೆ ಚಿತ್ರ ಮಿಸ್ ಮಾಡಿದ್ದೆ...!!
ಪ್ರತಿಕ್ರಿಯೆಗೆ ನನ್ನಿ ..
ಶುಭವಾಗಲಿ.
\|/
ಗುರುಗಳೇ-ಚಲನ ಚಿತ್ರಗಳ ಬಗೆಗಿನ ಸ
ಗುರುಗಳೇ-ಚಲನ ಚಿತ್ರಗಳ ಬಗೆಗಿನ ಸ.ವಾ ಬರಹಗಳನ್ನು ಓದಿ ಸಿನೆಮ ನೋಡದೆ ಇದ್ರೆ ಹೇಗೆ...!!
ಸಿಕ್ಕಾಗ ನೋಡಿ ಆಮೇಲೆ ನೀವೇ ಹೇಳುವಿರಿ -ಎಷ್ಟು ಒಳ್ಳೆ ಚಿತ್ರ ಮಿಸ್ ಮಾಡಿದ್ದೆ...!!
ಕೆಲವು ಚಿತ್ರಗಳನ್ನು ಅವುಗಳ ಟ್ರೇಲರ್ -ಪೋಸ್ಟರ್ ನೋಡಿ ಪೂರ್ವಾಗ್ರಹಪೀಡಿತನಾಗಿ ನೋಡದೆ ಇದ್ದ ಎಸ್ಟೋ ಚಿತ್ರಗಳನ್ನು ಆಮೇಲೆ ನೋಡಿ ನಾ ಮೇಲಿನಂತೆ ಉದ್ಘರಿಸಿ ಅದೇ ಈ ತರಹದ ಬರಹಗಳಿಗೆ ಕಾರಣ ಆಗಿದ್ದು...!!
ಅಂದ್ ಹಾಗೆ ಬರೀ ಒಳ್ಳೇ ಚಿತ್ರಗಳ ಬಗ್ಗೆ ಬರೆವ ಸ.ವಾ ಕೆಟ್ಟ ಚಿತ್ರಗಳನ್ನು ನೋಡಿಲ್ಲವೇ?
ಆ ಬಗ್ಗೆ ಯಾಕ್ ಬರೆದಿಲ್ಲ ಎಂದು ನೀವ್ಯಾರು ಕೇಳಿಲ್ಲದೆ ಇದ್ರೂ ನಾನೇ ಹೇಳುವೆ..!!
ಆ ತರಹದ್ ಕೆಲವೊಂದರ ಬಗ್ಗೆ ಶುರುವಿನಲ್ಲಿ (ಸಂಪದ ಸೇರಿದ ಹೊಸತು)ಬರೆದಿದ್ದೆ ,ಪ್ರತಿಕ್ರಿಯೆಗಳನ್ನು ನೋಡಿ -ಸಿನೆಮ ನೋಡುವವರ ವಿಭಿನ್ನ ಮನೋ ಸ್ಥ್ಹಿತಿ ಮತ್ತು ಅಭಿಪ್ರಾಯ ಗೋಚರವಾಗಿ ಆ ತರಹದ್ದು ಬರೆದು ಯಾಕ್ ಬೇಜಾರು ಮಾಡೋದು ಅಂತ ...:()))
ಈಗ ಏನಿದ್ದರು ಉತ್ತಮ ಚಿತ್ರಗಳ ಬಗ್ಗೆ ಮಾತ್ರ ಬರೆಯುವೆ..!!
ಪ್ರತಿಕ್ರಿಯೆಗೆ ನನ್ನಿ ..
ಶುಭವಾಗಲಿ.
\|/
ಸಪ್ತಗಿರಿ ಅವರೆ ಧನ್ಯವಾದಗಳು.
ಸಪ್ತಗಿರಿ ಅವರೆ ಧನ್ಯವಾದಗಳು.
ಸುಮಾರು ಎರಡು ವರ್ಷಗಳ ಹಿಂದೆ ನಾನು ಬೆಂಗಳೂರಿಗೆ ಬಂದಿದ್ದಾಗ ಮಗನ ಮನೆಯಲ್ಲಿ ಉಳಿದುಕೊಂಡಿದ್ದೆ. ಮನಸ್ಸಿನ ಬೇಸರ ಕಳೆಯಲು ಮಗನ ಲ್ಯಾಪ್ ಟಾಪ್ನಲ್ಲಿದ್ದ ಈ ಚಿತ್ರವನ್ನು ವೀಕ್ಷಿಸಿದ್ದೆ, ಚಿತ್ರದ ಅಂತಿಮ ಕ್ಷಣದಲ್ಲಿ ಯುವರಾಜನು ,ಎರಡು ಕೈಗಳನ್ನು ಸರಪಳಿಯಿಂದ ಬಂಧಿಸಿದ ಜನರಲ್ ನನ್ನು ಮಾತನಾಡಿಸಿ ಹಿಯಾಳಿಸುತ್ತಾ ಅವನನ್ನು ತಬ್ಬಿಕೊಂಡು ತನ್ನಲ್ಲಿ ಅಡಗಿಸಿಟ್ಟುಕೊಂಡಿದ್ದ ಸಣ್ಣನೆಯ ಚೂರಿಯಿಂದ ಬೆನ್ನಿಗೆ ಇರಿಯುವ ದೃಷ್ಯವಂತೂ ನಮ್ಮ ಮನಸ್ಸಿನಲ್ಲಿ ತುಂಬಾ ರೋಷ ವನ್ನುಂಟು ಮಾಡುತ್ತದೆ.ಮಾರನೆ ದಿನ ಆ ನೋವಿನಲ್ಲೂ ನಡೆಯುವ ದ್ವಂದ ಯುದ್ಧದಲ್ಲಿ ಜನರಲ್ ರಾಜಕುಮಾರನನ್ನು ಕೊಲ್ಲುತ್ತಾನೆ. ಪೂರ್ಣ ಚಿತ್ರ ಚನ್ನಾಗಿದೆ .ತಮ್ಮ ಮಾಹಿತಿಪೂರ್ಣ ಈ ಲೇಖನ ನನಗೆ ಮೆಚ್ಚುಗೆ ಆಯಿತು. ಮತ್ತೊಮ್ಮೆ ನಿಮಗೆ ನನ್ನ ಶುಭ ಹಾರೈಕೆಗಳು.
In reply to ಸಪ್ತಗಿರಿ ಅವರೆ ಧನ್ಯವಾದಗಳು. by swara kamath
ನಾಯಕ ಗೆಲ್ಲುವ್ದೂ ನಿಶ್ಚಿತ ಎಂದು
ನಾಯಕ ಗೆಲ್ಲುವ್ದೂ ನಿಶ್ಚಿತ ಎಂದು ಅರಿವಿದ್ದು ರೋಷದಿಂದ ನಾಯಕನ ಬೆನ್ನ ಹಿಂದೆ ಆಳವಾಗಿ ಚಾಕು ಚುಚ್ಚಿ ಆ ಗಾಯ ನರಳಿಕೆ ಮಧ್ಯೆಯೂ ಮಾಡು ಇಲ್ಲವೇ ಮಡಿ ಹೋರಾಟ ಮಾಡಿ ನಾಯಕ ಗೆಲ್ಲುವನು..
ಈ ಚಿತ್ರದಲ್ಲಿ ಮೊದಲ ಬಾರಿಗೆ ನನಗೆ ತಣ್ಣಗಿನ ಕ್ರೌರ್ಯ -ದ್ವೇಷ ಹಗೆತನ ದರ್ಶನವಾಯ್ತು..
ಖಳ ನಟನ ಪಾತ್ರಧಾರಿಯ ನಟನೆ ಸೂಪರ್...
ಇನ್ನಸ್ಟು ಉತ್ತಮ ಚಿತ್ರಗಳ ಬಗ್ಗೆ ಬರಹ ನಿರೀಕ್ಷಿಸಿ..
ಹಿರಿಯರೇ ಪ್ರತಿಕ್ರಿಯೆಗೆ ನನ್ನಿ
ಶುಭವಾಗಲಿ.
ಶುಭ ಸಂಜೆ..
\|