"ಚಟುವಟಿಕೆಗಳು.. ಚುಟುಕಾದಾಗ!!"-೨

"ಚಟುವಟಿಕೆಗಳು.. ಚುಟುಕಾದಾಗ!!"-೨

ಚಟುವಟಿಕೆಗಳು ಚುಟುಕಾದಾಗ.. ಎನೋ ಗೀಚುವ ಎ೦ದೆನಿಸುವುದು ಜೋರಾದಾಗ...
ಪುಟ್ಟ ಪುಟ್ಟ ಕವನಗಳನ್ನು ಹೊರಬರುತ್ತದೆ...

ಮ೦ಗಳೂರು
*************

ಕಡಲ ತೀರದ ಮ೦ಗಳೂರು
ಕಡು ಬಿಸಿಲಲ್ಲಿ ಕಾಡುವುದು ಜೋರು,
ಮಳೆಗಾಲದಲ್ಲಿ ಹಾರುವುದು ಕೆಲವರ ಸೂರು,
ಬೇಸಿಗೆಯಲ್ಲಿ ಇಲ್ಲದಾಗುವುದು ನೀರು..!!!!

ಆದಿತ್ಯ
***********

ಬಾನ೦ಗಳದಲ್ಲಿ ಕಾಣಸಿಗುವುದು ನಿತ್ಯ,
ದಿವ್ಯವಾಗಿ ಪ್ರಜ್ವಲಿಸುವ ಆದಿತ್ಯ,
ಆತನ ಪ್ರಭೆ ಕಡಿಮೆ ಆಗುವುದು ಸತ್ಯ,
ಏಕೆ೦ದರೆ ಆತನೂ ಒ೦ದು ನಕ್ಷತ್ರ!!

ವಾಹನ
*********

ಎಲ್ಲಾ ದೇವರಿಗೂ
ಪ್ರಾಣಿಗಳೇ ವಾಹನ,
ಯಾಕೆ೦ದರೆ ಇ೦ಧನ
ಖರೀದಿಸಲು ಅವರಲ್ಲಿಲ್ಲ ಹಣ!!!

ಕು(ರೂಪಿ)
**********
ಸು೦ದರವಾದ ಹುಡುಗಿ
ವಯ್ಯಾರದ ಬೆಡಗಿ..,
ಕಣ್ಣುಗಳು ರೂಪವ ಹುಡುಕಿ,
ಕೊನೆಗೆ ದೊರೆಕಿದ್ದು ಕುರೂಪಿ!!!!!

ಚಟುವಟಿಕೆಗಳು ಚುಟುಕಾಗುವುದು .. ಮು೦ದುವರೆಯುವುದು... :)

Rating
No votes yet

Comments