ಚಲೋ ಮಲ್ಲೇಶ್ವರ ೨೩
"ಮೂಢ, ಮೂಢ, ದೇವಸ್ಥಾನ ಸುತ್ತುವುದೆಂದರೆ ಮಾಲ್, ಎಕ್ಸಿಬಿಷನ್ ಸುತ್ತಿದ ಹಾಗಲ್ಲ . ನಾವೆಲ್ಲಾ ಬಾಬಾ ಮಂದಿರ ಹೊಕ್ಕಾಗಿನಿಂದ ಗಮನಿಸುತ್ತಿದ್ದೇನೆ- ಈ ಗಣೇಶರ ಗಮನವೆಲ್ಲಾ ಒಂದೋ ಮೊಬೈಲ್ ಕಡೆ, ಇಲ್ಲಾ ಪ್ರಸಾದದ ಕಡೆಗೆ. ಆ ಹುಡುಗ ಜಯಂತ್ನನ್ನು ನೋಡಿಯಾದರೂ ಕಲಿಯಬಾರದೇ? ಈಗ ನೆಟ್ಟಗೆ ಬಂದು ಕಾರೊಳಗೆ ಕುಳಿತಿದ್ದೀರಲ್ಲಾ..ಏಳಿ, ಇಲ್ಲೇ ಪಕ್ಕದಲ್ಲಿ ಇರುವ ಕಾಡುಮಲ್ಲೇಶ್ವರ ದೇವಸ್ಥಾನ ನೋಡೋಣ. ಬೇಗ ಬನ್ನಿ."ಎಂದರು ಕವಿನಾಗರಾಜರು. ಸೀಟು ಹಿಡಿದ ಖುಷಿಯೆಲ್ಲಾ ಜರ್ರನೆ ಇಳಿಯಿತು...ನಾಗರಾಜರ ಹಿಂದೆ ಎಲ್ಲರೂ ಹೊರಟರು. ಸಂಪಿಗೆ ರಸ್ತೆ ಕಡೆಯ ಕಾಡುಮಲ್ಲೇಶ್ವರ ದೇವಸ್ಥಾನದ ಬಾಗಿಲು ಮುಚ್ಚಿದ್ದುದರಿಂದ, ಪಕ್ಕದ ರಸ್ತೆಯಲ್ಲಿ ಹೋಗಿ ಮುಖ್ಯದ್ವಾರ ತಲುಪಿದೆವು. ಮುಖ್ಯದ್ವಾರದ ಬಳಿಯ ಸಿಮೆಂಟು ಕಟ್ಟೆಯಲ್ಲಿ ಕುಳಿತ ನಾಗರಾಜರು," ಈ ದೇವಸ್ಥಾನದ ಬಗ್ಗೆ ನಿಮಗೆ ಗೊತ್ತಿರುವ ವಿಷಯಗಳನ್ನು ಹೇಳಿ" ಎಂದರು.
ಸತೀಶ್- ಈ ದೇವಸ್ಥಾನದಿಂದಾಗಿ ಈ ಪ್ರದೇಶಕ್ಕೆ "ಮಲ್ಲೇಶ್ವರಂ" ಹೆಸರು ಬಂತು. ಮೊದಲು ಇದು ಮಲ್ಲಪುರ ಎಂಬ ಹಳ್ಳಿಯಾಗಿತ್ತು...." ಸತೀಶ್ ಮಾತು ಪೂರ್ಣಗೊಳಿಸಲು ಬಿಡದೇ "ಈ ಸ್ಥಳದ ಮಹತ್ವ ಏನು? ಇತಿಹಾಸ ಏನು? ಮುಂದಿನ ಜನಾಂಗಕ್ಕಾಗಿ ಹೇಗೆ ಕಾಪಾಡಬೇಕು? ಒಂದೂ ಗೊತ್ತಿಲ್ಲ. ಸಂಪಿಗೆ ರಸ್ತೆ ಕಡೆಯ ಬಾಗಿಲ ಸುತ್ತಮುತ್ತ ಹೇಗೆ ಗಲೀಜಾಗಿ ಇದೆ ಗಮನಿಸಿದ್ದೀರಾ? ಪುಣ್ಯಕ್ಕೆ ಅಲ್ಲಿ ಅಂಗಡಿ ಮಳಿಗೆಗಳಿಗೆ ಸ್ಥಳಕೊಟ್ಟಿಲ್ಲ. ದೇವಸ್ಥಾನದ ಜಾಗವೋ ಅಲ್ಲವೋ ಗೊತ್ತಿಲ್ಲಾ, ಆದರೆ ದೇವಸ್ಥಾನದ ಬಲ ಪಕ್ಕದಲ್ಲಿ ಕೆಲ ಗುಡಿಸಲುಗಳು ಎದ್ದಿವೆ, ಪಕ್ಕದಲ್ಲಿ ಗಲೀಜು ರಾಶಿ ಇದೆ..." ಕೋಪೋದ್ರಿಕ್ತರಾಗಿದ್ದ ಮಂಜಣ್ಣನವರನ್ನು ಗೋಪಾಲರು ಸಮಾಧಾನಪಡಿಸಿ ಕುಳ್ಳಿರಿಸಿದರು.
ಕೂಡಲೇ ಎದ್ದು ನಿಂತ ಗಣೇಶರು "ಪ್ಲಸ್ ಒಂದು" ಎಂದರು.
ನಾ : "ಏನ್ರೀ ಅದು?"
ಚಿಕ್ಕು : ಸಂಪದದಲ್ಲಿ ಪ್ರತಿಕ್ರಿಯಿಸುವಾಗ "ಪ್ಲಸ್ ಒಂದು" ಬರೆಯುತ್ತಾರಲ್ಲಾ. ಹಾಗೇ.. ; ಮಂಜಣ್ಣ, ಗಲೀಜಿನ ಚಿತ್ರ ತೆಗೆದು ಸಂಪದದಲ್ಲಿ ಹಾಕಲಾ?
ನಾ : ಬೇಡ ಬೇಡ. ಕಾಳನ್ನು ಮಾತ್ರ ಹೆಕ್ಕಿ ಜೊಳ್ಳನ್ನು ಬಿಡಬೇಕು ಮೂಢ
ಗ : ಜೊಳ್ಳನ್ನು ಬಿಟ್ಟರೆ ಆ ಸ್ಥಳವೂ ಬೇರೆಯವರಿಗೆ ಹೋಗುವುದು. ದೇವಸ್ಥಾನದ ಸ್ವಲ್ಪ ಸ್ಥಳವನ್ನು ಪಕ್ಕದ ಬಾಬಾ ಮಂದಿರಕ್ಕೆ ಕೊಡಲು ಸರಕಾರ ಹೊರಟಿತ್ತು..ಕೋರ್ಟು ತಡೆಯೊಡ್ಡಿದ್ದರಿಂದ ಉಳಿದಿದೆ. ಮೇಡಂ : ಬಾಬಾ ಮಂದಿರಕ್ಕೆ ಕೊಟ್ಟರೆ ಏನಾಯಿತು? ದೇವತಾ ಕಾರ್ಯಗಳಿಗೇ ಉಪಯೋಗವಾಗುವುದಲ್ಲಾ?ನಾ : "ಇರಲಿ..ಆ ವಿಷಯವನ್ನು ಕೋರ್ಟ್ ಇತ್ಯರ್ಥ ಮಾಡಲಿ. ನಾವು ವಾದ ವಿವಾದ ಮಾಡುವುದು ಬೇಡ. ಈ ದೇವಸ್ಥಾನ ಕಟ್ಟಿದ್ದು ಯಾರ ಆಡಳಿತ ಕಾಲದಲ್ಲಿ ಅಂತ ನಿಮಗ್ಯಾರಿಗಾದರೂ ಗೊತ್ತಾ?" ಎಲ್ಲರೂ ಮೌನವಾಗಿದ್ದರು. ಶ್ರೀಧರ್ ಅವರು ಕಟ್ಟೆಯ ಕೆಳಗೆ, ಅಕ್ಕಪಕ್ಕದಲ್ಲಿ ಶಾಸನಗಳೇನಾದರೂ ಬರೆದದ್ದು ಕಾಣಿಸುವುದಾ ಎಂದು ಹುಡುಕಾಡಿದರು.
ನಾ : ಹುಡುಕಾಡಬೇಡಿ. ನಾನೇ ಹೇಳುವೆ. ಶಿವಾಜಿ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಅವರ ತಂದೆ" ಶಹಾಜಿರಾವ್ ಭೋಂಸ್ಲೆ" ಶಿವಾಜಿಯಷ್ಟೇ ಪ್ರಖ್ಯಾತರಾಗಿದ್ದರು. जगदिश विरंचिकु पूछत है, कहो सृष्टी रची, रखे कोन कहा । शशि वो रवि पूरब पश्चिम लो, तुम सोय रहो सिरसिंधु महां । अरु उत्तर दच्छिन रच्छनकों इत साहजि हैं, उत साहजहाँ ॥ ಈ ವಾಕ್ಯದಿಂದಲೇ ಅವರು ಎಷ್ಟು ಪ್ರಸಿದ್ಧರು ಎಂದು ಗೊತ್ತಾಗುವುದು. ಅವರ ಬಗ್ಗೆ ಇನ್ನೊಮ್ಮೆ ಹೇಳುವೆ. ಅವರ ಉಪಪತ್ನಿಯ ಮಗ, ಅಂದರೆ ಶಿವಾಜಿಯ ಮಲತಮ್ಮ "ವೆಂಕೋಜಿರಾವ್ ಭೋಂಸ್ಲೆ" ಆಡಳಿತ ಕಾಲದಲ್ಲಿ ಈ ದೇವಸ್ಥಾನ ಕಟ್ಟಲ್ಪಟ್ಟಿದ್ದು. ಇಷ್ಟು ವಿಷಯ ಈಗ ಸಾಕು. ಮೊದಲು ಪಕ್ಕದಲ್ಲಿರುವ ನಾಗರ ಕಲ್ಲಿಗೆ ನಮಸ್ಕರಿಸಿ ಬರುವವರಿದ್ದರೆ ಹೋಗಿ ಬನ್ನಿ. ನಂತರ ದೇವಸ್ಥಾನದ ಒಳಗೆ ಹೋಗೋಣ." ಕೂಡಲೇ ಜಯಂತ್ ನಾಗರಕಲ್ಲಿನ ಕಡೆ ಓಡಿ ಹೋದ! ಎಲ್ಲರೂ ಪುನಃ ಬಂದು ಸಿಮೆಂಟು ಕಟ್ಟೆಯಲ್ಲಿ ಕೈ ಮೇಲೆ ತಲೆ ಇಟ್ಟುಕೊಂಡು/ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತರು!
ನಾ : "ಅಲ್ಲಿ ನೋಡಿ ಹುಲ್ಲಲ್ಲೇ "ॐ" ಎಂದು ಬರೆದುದನ್ನು.."
ಹಾಗೆಂದ ಕೂಡಲೇ ಚಿಕ್ಕು ಕ್ಯಾಮರ ಹಿಡಕೊಂಡು ಫೋಟೋ ತೆಗೆಯಲು ಹೊರಟನು. ಕೈ ಹಿಡಿದು ಎಳೆದು ಕುಳ್ಳಿರಿಸಿ "ಫೋಟೋ ಮತ್ತೆ ತೆಗೆಯುವೆಯಂತೆ. ಈಗ ಎಲ್ಲರೂ ಪದ್ಮಾಸನ ಹಾಕಿ ಕುಳಿತುಕೊಳ್ಳಿ. ಗಣೇಶರು ಹೇಗೆ ಬೇಕಾದರೂ ಕುಳಿತುಕೊಳ್ಳಿ ಪರವಾಗಿಲ್ಲ. ಇನ್ನು ಕಣ್ಣುಮುಚ್ಚಿ ಏಕಾಗ್ರಚಿತ್ತದಿಂದ "ॐ" ಅನ್ನುತ್ತಾ ಇರಿ."
ಹತ್ತು ನಿಮಿಷ ಕಳೆಯಿತು.ಜಯಂತ್ನದ್ದು ೫೪ ಸುತ್ತು ಆಯಿತು! ಇನ್ನೂ ೫೪ ಮಾತ್ರ ಬಾಕಿ..
ನಾ : ಓಂ ಶಾಂತಿ ಶಾಂತಿ ಶಾಂತಿಃ...ಈಗ ಕಣ್ಣು ತೆರೆದು ಒಬ್ಬೊಬ್ಬರಾಗಿ ನಿಮ್ಮ ಅನುಭವ ಹೇಳಿ..
ಮೇಡಂ : ಓಂ ಅನ್ನುತ್ತಾ ಇದ್ದಾಗ ಶಿವ ಪಕ್ಕದಲ್ಲಿ ಬಾಬಾ ಕಂಡರು. ನಾ : ಗುಡ್.
ಸ : ಶಾಂತ ನರಸಿಂಹ ಮೂರ್ತಿ ಕಣ್ಣಮುಂದೆ ಕಾಣಿಸಿತು. ನಾ : ಗುಡ್ ಗುಡ್.
ನಾವಡರು : ತಾಯಿ ಅನ್ನಪೂರ್ಣೇಶ್ವರಿ ಕಣ್ಣತುಂಬಾ ತುಂಬಿದ್ದಳು.
ನಾ : ವೆರಿ ಗುಡ್. ಇನ್ನುಳಿದವರದ್ದು ವಿಚಾರಿಸುವುದು ಬೇಡ. ಜಯಂತ್ ಬಂದ ಕೂಡಲೇ ದೇವಸ್ಥಾನದ ಒಳಗೆ ಹೋಗೋಣ.
ನಾವಡರು : ಇನ್ನೂ ಸಮಯವಿದೆಯಲ್ಲಾ. ಉಳಿದವರದ್ದೂ ವಿಚಾರಿಸೋಣ.
ನಾ : ನೀವು ಬೇಕಿದ್ದರೆ ಕೇಳಿ. ನಾನು ಕಿವಿ ಮುಚ್ಚಿಕೊಳ್ಳುತ್ತೇನೆ.
ನಾವಡರು : ಮೊದಲಿಗೆ ಚಿಕ್ಕು ಹೇಳಪ್ಪಾ..
ಚಿ : ...ಅವಳೇ ....ಅವಳೇ....ಅವಳೇ (ಗೋಪಾಲರು ಕೈಯಿಂದ ಚಿಕ್ಕು ಬಾಯಿ ಮುಚ್ಚಿದರು)
ಪಾ : ಕಣ್ಣ ತುಂಬಾ"ॐ" ಕಾಣಿಸಿತು. ಅರ್ಧಚಂದ್ರಾಕಾರದಲ್ಲಿ ಒಂದು ಬಿಂದು ಇದೆಯಲ್ಲಾ..ಅದು ನಮ್ಮ ಮನೆ ಗೇಟಿನ ಕಂಬದಲ್ಲಿದ್ದ ಬುರುಡೆ ತರಹ ಕಾಣಿಸಿತು...
ರಾಮ್ : ಪಾರ್ಥರೆ ನನಗೆ ಬಾಣಲೆಯಲ್ಲಿ ಕೆಂಪು ಮಣ್ಣು ತುಂಬಿರುವಂತೆ ಕಾಣಿಸಿತು...
ಗ : ಯಾಕೆ ನಿಮಗೆ ಒಳ್ಳೆಯ ಯೋಚನೆಗಳೇ ಬರುವುದಿಲ್ಲಾ.. ಅಡಿಗಾಸ್ನ ಪ್ಲೇಟ್ ದೋಸೆಯ ಮೇಲೆ ಇಟ್ಟ ಬೆಣ್ಣೆಯಂತೆ ಕಾಣಿಸಿತು ನನಗೆ.
ಚಿಕ್ಕು, ಪಾರ್ಥ,ರಾಮ್,ಗಣೇಶರು ಮತ್ತು ಓಡಿಸಿಕೊಂಡು ಹೋಗಿರುವ ನಾವಡರು ಹಿಂದೆ ಬಂದ ಮೇಲೆ ಚಲೋ ಮಲ್ಲೇಶ್ವರ ಮುಂದುವರೆಯುವುದು.
Comments
ಉ: ಚಲೋ ಮಲ್ಲೇಶ್ವರ ೨೩
In reply to ಉ: ಚಲೋ ಮಲ್ಲೇಶ್ವರ ೨೩ by neela devi kn
ಉ: ಚಲೋ ಮಲ್ಲೇಶ್ವರ ೨೩
ಉ: ಚಲೋ ಮಲ್ಲೇಶ್ವರ ೨೩
In reply to ಉ: ಚಲೋ ಮಲ್ಲೇಶ್ವರ ೨೩ by Jayanth Ramachar
ಉ: ಚಲೋ ಮಲ್ಲೇಶ್ವರ ೨೩
ಉ: ಚಲೋ ಮಲ್ಲೇಶ್ವರ ೨೩
ಉ: ಚಲೋ ಮಲ್ಲೇಶ್ವರ ೨೩
In reply to ಉ: ಚಲೋ ಮಲ್ಲೇಶ್ವರ ೨೩ by ksraghavendranavada
ಉ: ಚಲೋ ಮಲ್ಲೇಶ್ವರ ೨೩
ಉ: ಚಲೋ ಮಲ್ಲೇಶ್ವರ ೨೩
In reply to ಉ: ಚಲೋ ಮಲ್ಲೇಶ್ವರ ೨೩ by sathishnasa
ಉ: ಚಲೋ ಮಲ್ಲೇಶ್ವರ ೨೩
ಉ: ಚಲೋ ಮಲ್ಲೇಶ್ವರ ೨೩
In reply to ಉ: ಚಲೋ ಮಲ್ಲೇಶ್ವರ ೨೩ by manju787
ಉ: ಚಲೋ ಮಲ್ಲೇಶ್ವರ ೨೩
ಉ: ಚಲೋ ಮಲ್ಲೇಶ್ವರ ೨೩
In reply to ಉ: ಚಲೋ ಮಲ್ಲೇಶ್ವರ ೨೩ by kavinagaraj
ಉ: ಚಲೋ ಮಲ್ಲೇಶ್ವರ ೨೩
ಉ: ಚಲೋ ಮಲ್ಲೇಶ್ವರ ೨೩
In reply to ಉ: ಚಲೋ ಮಲ್ಲೇಶ್ವರ ೨೩ by partha1059
ಉ: ಚಲೋ ಮಲ್ಲೇಶ್ವರ ೨೩
ಉ: ಚಲೋ ಮಲ್ಲೇಶ್ವರ ೨೩
In reply to ಉ: ಚಲೋ ಮಲ್ಲೇಶ್ವರ ೨೩ by RAMAMOHANA
ಉ: ಚಲೋ ಮಲ್ಲೇಶ್ವರ ೨೩
ಉ: ಚಲೋ ಮಲ್ಲೇಶ್ವರ ೨೩
ಉ: ಚಲೋ ಮಲ್ಲೇಶ್ವರ ೨೩
In reply to ಉ: ಚಲೋ ಮಲ್ಲೇಶ್ವರ ೨೩ by makara
ಉ: ಚಲೋ ಮಲ್ಲೇಶ್ವರ ೨೩
In reply to ಉ: ಚಲೋ ಮಲ್ಲೇಶ್ವರ ೨೩ by ಗಣೇಶ
ಉ: ಚಲೋ ಮಲ್ಲೇಶ್ವರ ೨೩
In reply to ಉ: ಚಲೋ ಮಲ್ಲೇಶ್ವರ ೨೩ by makara
ಶ್ರೀಧರ್ಜಿ,
"ಚಲೋ ಹೈದರಾಬಾದ್" ಎಂದು ನಾನು, ಪಾರ್ಥಸಾರಥಿ, ಸಪ್ತಗಿರಿವಾಸಿ, ಶ್ರೀಕರ್...ಎಲ್ಲಾ ಹೊರಡಬೇಕೆಂದಿದ್ದೇವೆ..(ಜಮಾನಾದ) ಕತೆ ಕೇಳದೇ ನಿದ್ರೆ ಬರುತ್ತಿಲ್ಲ..:)
-ಗಣೇಶ.
In reply to ಶ್ರೀಧರ್ಜಿ, by ಗಣೇಶ
ಚಲೋ ಹೈದರಾಬಾದ್
ತು0ಬಾ ಸ0ತೋಷದ ವಿಚಾರ ಗಣೇಶ್..ಜೀ. ಬನ್ನಿ ನನಗೂ ಒಳ್ಳೇ ಟೈಮ್ ಪಾಸ್ ಆಗುತ್ತೆ. ನೀವೆಲ್ಲಾ ಬ0ದರೆ ಕ0ಪ್ಯೂಟರಿನಲ್ಲಿ ಕುಟ್ಟುವ ತೊ0ದರೆ ಇಲ್ಲದೇ ನೇರವಾಗಿಯೇ ಜಮಾನಾದ ಜೋಕುಗಳು ಮತ್ತು ಕಥೆಗಳನ್ನು ಹೇಳಿಕೊಳ್ಳಬಹುದು. ಅ0ತೂ ಒ0ದು ವರ್ಷ ಮುಗಿಯುವುದರೊಳಗೆ ಮರುಪ್ರತಿಕ್ರಿಯೆ ನೀಡಿದ್ದೀರ :))
ಉ: ಚಲೋ ಮಲ್ಲೇಶ್ವರ ೨೩
ಉ: ಚಲೋ ಮಲ್ಲೇಶ್ವರ ೨೩
In reply to ಉ: ಚಲೋ ಮಲ್ಲೇಶ್ವರ ೨೩ by venkatb83
ಸಪ್ತಗಿರಿವಾಸಿಯವರೆ,
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.(ಹತ್ತಿರ ಹತ್ತಿರ ಒಂದು ವರ್ಷ ತಡವಾಯಿತು :( )
ಬೆಂಗಳೂರಲ್ಲಿ ಶಾಂತ ಸ್ವಭಾವದ, ಎಡ್ಜಸ್ಟ್ ಆಗುವ ಜನರಲ್ಲಿ ಯಶವಂತಪುರವಾಸಿಗಳು ಪ್ರಥಮ ಎನ್ನಬಹುದು. :)
>>>ನಿಮ್ಮ ಮುಂದಿನ ಹೆಜ್ಜೆ ಎಲ್ಲಿಗೆ?
-"ಚಲೋ ಯಶವಂತಪುರ" ಮಾಡೋಣ ಎಂದು ನಿಮ್ಮ ಏರಿಯಾಕ್ಕೆ(ಹಿಂದಿನ?) ಒಮ್ಮೆ ಬಂದಿದ್ದೆ. ಅಬ್ಬಾ..ಅಲ್ಲಿ ರೋಡ್ ಎಲ್ಲಿದೆ? ಮೈನ್ ರೋಡ್, ಒಳ ರೋಡ್ಗಳು ಎಲ್ಲಾ ಕಡೆ ಹೊಂಡವೇ ಹೊಂಡ..
-ಗಣೇಶ.
ಗಣೇಶ್ಹ್ ಅಣ್ಣಾ ಇದು ಯಷವ0ತಪುರವೇ
ಗಣೇಶ್ಹ್ ಅಣ್ಣಾ ಇದು ಯಷವ0ತಪುರವೇ?? ಬಹುಷ ರೈಲು ನಿಲ್ದಾಣ ಹತ್ತಿರ ಇರ್ಬೆಕು ಅನ್ಸುತ್ತೆ..... ಈಗ ನಾವಿರುವ ಪ್ರದೇಷ ಇಡೀ ಬೆ0ಗಳೊರಲ್ಲಿ ಅತ್ಯುತ್ತಮ ಆಗಿದೆ..ಕಾರಣ ಶ್ಹಾಸಕ ಮತ್ತು ಹಿ0ದಿನ ಮೇಯರ್ರ್ ಇಲ್ಲಿಯವರೇ...!! ಸ್ಥಳ ಗೊತಾಗಿರ್ಬೇಕಲ್ಲ...!!
ಛಲೋ ಮಲ್ಲೆಷವ್ರಮ್ ಮು0ದುವರೆಯಲಿ...
ಒಳಿತಾಗಲಿ..
\|