ಚಿಂಟು: ನಂಗೆ ಇಷ್ಟ ಆಗದೇ ಇರೋದು!

ಚಿಂಟು: ನಂಗೆ ಇಷ್ಟ ಆಗದೇ ಇರೋದು!

[Please refer : ನಾ ಮೆಚ್ಚಿದ ಕಥೆ ಕನ್ನಡದಲ್ಲಿ..]
ಈ ಹಲ್ಲು ಡಾಕ್ಟರ್ ಹತ್ತಿರ ಜನ ಯಾಕಪ್ಪಾ ಹೋಗ್ತಾರೇ.. ಛೀ.. ಅಲ್ಲಿರೋ ಖರ್.. ಅಂತಾ ಸದ್ದು ಮಾಡ್ತಾನೇ ಇರೋ ಆ ಖುರ್ಚಿ ನೋಡಿದ್ರೆ.. ವ್ಯಾಕ್.. ನಂಗೆ ಎಲ್ಲ್ಗಾದ್ರೂ ಓಡಿ ಹೋಗಿ ಬಿಡಬೇಕು ಅನ್ನಿಸುತ್ತೆ. ನೆಂಟರು ಬಂದಾಗ ಸ್ಕೂಲಲ್ಲಿ ಕಲ್ತಿರೋ ಪದ್ಯಗಳನ್ನ ಅವ್ರ ಎದುರಿಗೆ ಒಳ್ಳೆ ಪೆಕರನ ಹಾಗೆ ನಿಂತು ಹೇಳೋದು ನಂಗೆ ಖಂಡಿತಾ ಇಷ್ಟ ಇಲ್ಲ.
ಅಪ್ಪ, ಅಮ್ಮ  ನಾಟಕ ನೋಡಕ್ಕೆ ಅಂತ ಹೋಗಿಬಿಡ್ತಾರೆ. ಅವರು ಯಾಕೆ ಹೋಗಬೇಕೂ ಅಂತ.. ಆಮೇಲೆ, ಉಪ್ಪಿಟ್ಟು ನಂಗೆ ಇಷ್ಟ ಇಲ್ಲ.
ನಾನು, ಅಮ್ಮ ತಿರುಗಾಡಕ್ಕೆ ಅಂತಾ ಹೊರಗಡೆ ಹೋದಾಗ ಪಕ್ಕದ ಮನೆ ಆಂಟಿ ಸಿಕ್ಕಿಬಿಡ್ತಾರೆ ಒಮ್ಮೊಮ್ಮೆ. ಅಮ್ಮ ಮತ್ತು ಆಂಟಿ ಪರಸ್ಪರ ಬ್ಲೇಡು ಹಾಕಕ್ಕೆ ಶುರು ಹಚ್ಕೊಂಡು ಬಿಡ್ತಾರೆ! ನಾನೇನು ಮಾಡಬೇಕು ಆಗ?
ಹೊಸ ಬಟ್ಟೆ ಹಾಕ್ಕೊಳೋದು ನಂಗೆ ಅಷ್ಟಕ್ಕೆ ಅಷ್ಟೇ! ಹೊಲಸಾಗದೆ ಇರೋ ಹಾಗೆ ಕೂತೇ ಇರಬೇಕು.. ಅದ್ಯಾವನಿಗೆ ಇಷ್ಟ ಆಗುತ್ತಪ್ಪಾ..
ನಂಗೆ ಕಳ್ಳ-ಪೋಲೀಸ್ ಆಡೋವಾಗ ಪೋಲೀಸ್ ಆದ್ರೆ ಇಷ್ಟ ಇಲ್ಲಪ್ಪಾ. ಆಗ ಅಟಕ್ಕೇ ಹೊಗಲ್ಲ ನಾನು. ಕಳ್ಳ ಆದ್ರೆ, ಕಳ್ಳತನ ಮಾಡ್ಬೇಕು, ಅದಿಕ್ಕೆ ಇಷ್ಟ ಇಲ್ಲ. ಒಟ್ಟಿನಲ್ಲಿ ನಾನು ಕಳ್ಳ-ಪೋಲೀಸ್ ಆಡಲ್ಲ.
ನನಗೆ ಸೋಲೋದು ಅಂದ್ರೆ ಇಷ್ಟ ಇಲ್ಲ.
ಬರ್ತ್ ಡೇ ಪಾರ್ಟಿಗಳಲ್ಲಿ ಸಣ್ಣ ಮಕ್ಕಳ ಥರಾ ಆಟ ಆಡಕ್ಕೆ ನಂಗೆ ಇಷ್ಟ ಇಲ್ಲ. ನಾನೇನೂ ಚಿಕ್ಕವನಲ್ಲಾ.
ಕೈ ಗೆ ಗಾಯ ಆದಾಗ ಐಯೊಡಿನ್ ಹಚ್ಚಿಕೊಳೋಕ್ಕೆ ನಂಗೆ ಇಷ್ಟ ಇಲ್ಲ. ಮೊದಲೇ ಗಾಯ ಉರೀತಾ ಇರುತ್ತೆ. ಮೇಲಿಂದ ಇದು ಬೇರೆ.
ನಾನು ನಿದ್ದೆ ಮಾಡೋವಾಗ ಯಾರದ್ರೂ ಸದ್ದು ಮಾಡಿದ್ರೆ ನಂಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತೆ.
Rating
No votes yet

Comments