ಚಿಟ್ಟೆ

ಚಿಟ್ಟೆ

 ಮರಾಠಿ ಹಾಗೂ ಇಂಗ್ಲೀಷಲ್ಲಿ ಬರೆಯುತ್ತಿದ್ದ ಅರುಣ್ ಕೊಲ್ಹಾಟ್ಕರ್ ಶಬ್ದಪ್ರಯೋಗದಲ್ಲಿ ಎಷ್ಟು ಜಿಪುಣರೋ ಅಷ್ಟೇ ಜಾಣರು. ಅವರ ಹಲವು ಕವನಗಳು ಮಿನಿಮಲಿಸ್ಟ ಶೈಲಿಯಲ್ಲಿವೆ. ಸಣ್ಣಪುಟ್ಟ ವಸ್ತು ವಿಷಯವಾಗಿ ಬಂದು ಅವರ ಕವನಗಳಲ್ಲಿ ಶಬ್ದಗುಣವಾಗಿ ಕಾಣುತ್ತವೆ. ಇಲ್ಲಿ ಅವರ 'ದ ಬಟರ್ ಫ್ಲೈ' ಎಂಬ ಕವನವನ್ನು ಅನುವಾದಿಸಿದ್ದೇನೆ.

 ಚಿಟ್ಟೆ

ಇದರ ಹಿಂದುಗಡೆ ಕತೆಯಿಲ್ಲ.
ಕ್ಷಣದಂತಿದು ಸೀಳಿಕೊಂಡಿದೆ.
ಇದು ತನ್ನೊಳಗೆ ತಾನು ಸಂಧಿಸಿದೆ.

ಇದಕ್ಕೆ ನಾಳೆಯಿಲ್ಲ
ಯಾವ ನಿನ್ನೆಗೂ ಇದನ್ನು ಚುಚ್ಚಿಸಿಟ್ಟಿಲ್ಲ
ಇದು ಇಂದಿನ ಮೇಲೊಂದು ಶ್ಲೇಷೆ.

ಇದೊಂದು ತಿಳಿಹಳದಿ ಚಿಟ್ಟೆ
ಈ ದರಿದ್ರ ಗುಡ್ಡಗಳನ್ನು ಇದು
ತನ್ನ ರೆಕ್ಕೆಯ ತೆಕ್ಕೆಯಡಿ ತಂದಿದೆ.

ಚಿಟಿಕೆಯಷ್ಟೇ ಹಳದಿ
ಇದು ಮುಚ್ಚುವ ಮೊದಲೇ ಓ ಬಿಚ್ಚುತ್ತದೆ
ಹಾಗೂ ಬಿಚ್ಚುವ ಮೊದಲೇ ಮುಚ್ಚು... ಓ

ಅರೆ ಎಲ್ಲಿದೆ?

ಅರುಣ ಕೊಲ್ಹಾಟ್ಕರ್
  (The Butterfly)

Rating
No votes yet