ಚಿತ್ರ ಪ್ರವಾಸ : ಮುಳ್ಳಯನ ಗಿರಿ
ಮುಳ್ಳಯನಗಿರಿ ಚಿಕ್ಕಮಂಗಳೂರಿಗೆ ಸುಮಾರು ನಲವತ್ತು ಕಿ.ಮಿ. ದೂರದಲ್ಲಿರುವ ಪ್ರಕೃತಿ ಉಸಿರಾಡುವ ಸ್ಥಳ. ಉದ್ದಕ್ಕು ಹರಡಿ ನಿಂತ ಬಾಬಬುಡನ್ ಗಿರಿ ಶ್ರೇಣಿಗಳು, ಆ ಬೆಟ್ಟಗಳನ್ನೆಲ್ಲ ಆವರಿಸಿ ನಿಂತಿರುವ ಹಸಿರಿನ ಹೊದ್ದಿಗೆ, ಆಕಾಶಕ್ಕು ಭೂಮಿಗು ಪ್ರಕೃತಿ ನಿರ್ಮಿಸಿರುವ ’ಜಾರುಬಂಡೆ’ಯಂತೆ ಕಾಣುವ ಪರ್ವತಗಳು. ಕಾಫಿ ತೋಟ , ಹನುಮ ಹೊತ್ತುತಂದ ಸಂಜೀವಿನ ಪರ್ವತದ ಭಾಗ ಎಲ್ಲವು ಸುತ್ತವರೆದು ಸ್ಥಳದ ಆಕರ್ಷಣೆ ಹೆಚ್ಚಿಸುತ್ತದೆ. ಕನ್ನಡ ಸಿನಿಮಾ ನಿರ್ದೇಶಕರಿಗೆ (ವಿಷೇಶ ವಾಗಿ ಪುಟ್ಟಣ ಕಣಗಾಲ್) ಶಾಶ್ವತ ಹೊರಾಂಗಣ ಚಿತ್ರಿಕರಣದ ಸ್ಟುಡಿಯೋ ಆನ್ನಬಹುದೇನೊ. ಹಿಮಾಲಯ ಹಾಗೂ ನೀಲಗಿರಿಗಳ ನಡುವೆ ಸಮುದ್ರಮಟ್ಟದಿಂದ ೬೩೦೦ ಅಡಿಗಳಷ್ಟು ಎತ್ತರದಲ್ಲಿರುವ ಕರ್ನಾಟಕದ ಶೃಂಗ, ಈ ಮುಳ್ಳಯನಗಿರಿ. ಕಡೆಯಲ್ಲಿ ಸುಮಾರು ೩೦೦ ಮೆಟ್ಟಿಲು ಹತ್ತಬೇಕಾಗಿರುವದಾದರು, ವಾಹನದಲ್ಲಿ ಹೋಗಬಹುದು. ಆದರೆ ನೀವೆ ವಾಹನ ಚಾಲನೆ ಮಾಡುವಿರಾದರೆ ಎಚ್ಚರ , ಇಲ್ಲಿ ವಾಹನ ಮುನ್ನಡೆಸಲು ಅತ್ಯಂತ ಪಳಗಿದ ಡ್ರೈವರ್ ಬೇಕಾಗಿರುತ್ತದೆ. ವಾಹನದಲ್ಲಿ ಇಳಿಯುವಾಗ ಅತಿ ಎಚ್ಚರಿಕೆಯ ಅಗತ್ಯವಿದೆ. ಮೆಟ್ಟಿಲುಗಳನ್ನು ಹತ್ತಲು ಅಂತ ಕಷ್ಟವೆಂದೇನು ಅನಿಸುವದಿಲ್ಲ. ಗಿರಿಯ ತುದಿಯಲ್ಲಿರುವ ಮುಳ್ಳಯನ ದೇವಾಲಯದಲ್ಲಿ ಹೋಗಿ ನಿಂತರೆ ಸಾರ್ಥಕ ಭಾವ. ಡಿಸೆಂಬರ್ ಹಾಗೂ ಜನವರಿಯಲ್ಲಿ ಹೋಗುವವರು ಬೆಳಗ್ಗೆ ಮುಂಚೆಯೆ ಹೋದರೆ ಆವರಿಸಿರುವ ಹಿಮವನ್ನು ಆಸ್ವಾದಿಸಬಹುದು.
ನಾವು ಹತ್ತುವದೇನು ಮಹಾ ನಮಗಿಂತ ಮೊದಲೆ ಅಲ್ಲಿ ಇದ್ದ ದನಗಳನ್ನು ನೋಡಿ
Comments
ಪಾರ್ಥರೆ, "ಪ್ರೇಮವೆಂಬ...
ಪಾರ್ಥರೆ, "ಪ್ರೇಮವೆಂಬ... "ಕವಿತೆಯಲ್ಲಿ ಹಾಕಿದ ಚಿತ್ರ ನೋಡಿ ಸ್ವಲ್ಪ ಗಾಬರಿಯಾಗಿದ್ದೆ. ಇಲ್ಲಿ ಆ ಹುಡುಗಿಯ ಕಲ್ಲಿನ ಮೇಲೆ ಕುಳಿತ ಎರಡನೇ ಚಿತ್ರ ನೋಡಿ ಸಮಾಧಾನವಾಯಿತು. ಚಿತ್ರಗಳೆಲ್ಲಾ ಚೆನ್ನಾಗಿದೆ.
In reply to ಪಾರ್ಥರೆ, "ಪ್ರೇಮವೆಂಬ... by ಗಣೇಶ
ಗುರುಗಳೇ ಈ ಪ್ರವಾಸಿ ಬರಹ.....
ಗುರುಗಳೇ ಈ ಪ್ರವಾಸಿ ಬರಹ.....
ಸೂಪರ್ ಸಖತ್..!!
ಚ್ಹಿತ್ರ ಸಹಿತ ಪ್ರವಾಸಿ ಬರಹ ಇಸ್ಟ ಆಯ್ತು...
ನಾವೂ ಅಲ್ಲಿಗೆ ಹೋಗಬೇಕಿದೆ...
ಒಳಿತಾಗಲಿ..
\|/
In reply to ಗುರುಗಳೇ ಈ ಪ್ರವಾಸಿ ಬರಹ..... by venkatb83
ಚಿತ್ರ ಚೆನ್ನಾಗಿದೆ. ಬಾಬಾ ಬುಡನ್
ಚಿತ್ರ ಚೆನ್ನಾಗಿದೆ. ಬಾಬಾ ಬುಡನ್ ಗಿರಿ ನೋಡಿಲ್ಲವೇ?
In reply to ಚಿತ್ರ ಚೆನ್ನಾಗಿದೆ. ಬಾಬಾ ಬುಡನ್ by Premashri
ಪ್ರೇಮಶ್ರಿಯವರೆ ವ0ದನೆಗಳು, ಎಲ್ಲ
ಪ್ರೇಮಶ್ರಿಯವರೆ ವ0ದನೆಗಳು, ಎಲ್ಲ ಕಡೆಗು ಹೋಗಿದ್ದೇವು ಬೆಳಗ್ಗೆ ಎ0ಟಕ್ಕೆ ಚಿಕ್ಕಮ0ಗಳೂರು ಬಿಟ್ಟು ಮುಳ್ಳಯನ ಗಿರಿ , ಬಾಬ ಬುಡನ್ ಗಿರಿ, ಅಲ್ಲಿ0ದ ಕೆಮ್ಮಣ್ಣುಗು0ಡಿ , ನ0ತರ ಕಲ್ಲತ್ತಗಿರಿ, ನಡು ನಡುವೆ ಶೂಟಿ0ಗ್ಸ್ ಸ್ಪಾಟ್ ಗಳು, ಮಣಿಕ್ಯದಾರ ಮು0ತಾದವು , ದಾರಿಯಲ್ಲಿಯ ಕಾಪಿ ತೋಟಗಳು ಎಲ್ಲವನ್ನು ನೋಡಿದೆವು :)
In reply to ಗುರುಗಳೇ ಈ ಪ್ರವಾಸಿ ಬರಹ..... by venkatb83
ವ0ದನೆಗಳು ಸಪ್ತಗಿರಿಯವರೆ, ನೀವು
ವ0ದನೆಗಳು ಸಪ್ತಗಿರಿಯವರೆ, ನೀವು ಒಮ್ಮೆ ಹೋಗಿ ಬನ್ನಿ ಚಿಕ್ಕಮ0ಗಳೂರು ಪ್ರಕ್ಱುತಿಯಲ್ಲಿ ಚೆನ್ನಾಗಿದೆ
In reply to ಪಾರ್ಥರೆ, "ಪ್ರೇಮವೆಂಬ... by ಗಣೇಶ
ಗಣೇಶರೆ ನಿಜಕ್ಕು ಕುಳಿತ ಆ ಸ್ಥಳ
ಗಣೇಶರೆ ನಿಜಕ್ಕು ಕುಳಿತ ಆ ಸ್ಥಳ ಸುರಕ್ಷಿತವಾಗಿರಲಿಲ್ಲ ಎ0ದು ನಮಗೆ ಅನ್ನಿಸಿದ್ದು ಅಲ್ಲಿ0ದ ಕೆಳಗೆ ಬ0ದು ಮೇಲೆ ನೋಡಿದಾಗಲೆ ? ಕಾಲು ಜಾರಿದರೆ ಎಲ್ಲಿ ಹೋದರು ಎ0ದು ಪತ್ತೆಯಾಗದ ಜಾಗ ಅದು. ನಿಮ್ಮ ಮೆಚ್ಚುಗೆಗೆ ವ0ದನೆಗಳು
ಸೊಗಸಾದ ಚಿತ್ರಗಳು ಪಾರ್ಥರೇ ...
ಸೊಗಸಾದ ಚಿತ್ರಗಳು ಪಾರ್ಥರೇ ... ಮತ್ತೊಮ್ಮೆ ನಿಮ್ಮನ್ನು ನೋಡಿ ಖುಷಿಯಾಯ್ತು ... ಬೆಟ್ಟದ ಮೇಲೆ ನಿಂತ ದನಗಳ ಚಿತ್ರ ನೋಡಿ 'ಕಲ್ಮಾಡಿಯ ಕೋಣ'ದ ಕಥೆ ನೆನಪಾಯ್ತು ...
In reply to ಸೊಗಸಾದ ಚಿತ್ರಗಳು ಪಾರ್ಥರೇ ... by bhalle
ಬಲೆ ಬಲೆಯವರೆ ವ0ದನೆಗಳು, ಸದ್ಯ
ಬಲೆ ಬಲೆಯವರೆ ವ0ದನೆಗಳು, ಸದ್ಯ ನಮ್ಮನ್ನು ನೋಡಿ ಕಲ್ಮಾಡಿಯ ಕೋಣಗಳ ನೆನಪಾಗಲಿಲ್ಲವಲ್ಲ ಅದೆ ಸಮಾದಾನ!ನಿಮಗೆ ಮೊದಲೆ 'ರಾಮನ' ನೆನಪು, ಚೀನಿಯರ ಕನ್ಪ್ಯೂಷನ್ ಎಲ್ಲ ಸೇರಿದೆ :) , ಹಾಗಾಗಿ ದನಗಳ ಚಿತ್ರ ನೋಡಿ ಸ0ತಸವಾಯಿತು, ನಿಮ್ಮನ್ನು ನೋಡಿ ಕಲ್ಮಾಡಿಯ ಕೋಣ ನೆನಪಾಯಿತು ಎ0ದು ಬರೆಯಲಿಲ್ಲ ಪುಣ್ಯ :)
In reply to ಬಲೆ ಬಲೆಯವರೆ ವ0ದನೆಗಳು, ಸದ್ಯ by partha1059
ಬರಹ, ಚಿತ್ರಗಳು ಇಷ್ಟವಾದವು.
ಬರಹ, ಚಿತ್ರಗಳು ಇಷ್ಟವಾದವು.
In reply to ಬರಹ, ಚಿತ್ರಗಳು ಇಷ್ಟವಾದವು. by Shreekar
ವ0ದನೆಗಳೂ ಶ್ರೀಕರ್ ರವರಿಗೆ ತಮ್ಮ
ವ0ದನೆಗಳೂ ಶ್ರೀಕರ್ ರವರಿಗೆ ತಮ್ಮ ಮೆಚ್ಚುಗೆಗೆ
In reply to ಬಲೆ ಬಲೆಯವರೆ ವ0ದನೆಗಳು, ಸದ್ಯ by partha1059
'ಬಲೆ ಬಲೆ' ಎಂದು ಹೇಳಿ ನನ್ನನ್ನು
'ಬಲೆ ಬಲೆ' ಎಂದು ಹೇಳಿ ನನ್ನನ್ನು ಸ್ಪೈಡರ್ ಮ್ಯಾನ್' ಮಾಡಿದ ಹಾಗಿದೆ .. ಭಲೆ ಭಲೆ :-)))
ನಮಗೆ ದನಗಳೂ, ಕೋಣಗಳೂ ಒಂದೇ ರೀತಿ ಕಂಡರೂ ಅವು ಮೀಟಿಂಗ್ ಕರೆಯದೆ ಇರೋದ್ರಿಂದ ಅವುಗಳಿಂದ ತೊಂದರೆ ಇಲ್ಲ :-)))
In reply to 'ಬಲೆ ಬಲೆ' ಎಂದು ಹೇಳಿ ನನ್ನನ್ನು by bhalle
ಭಲೆ ಭಲೆಯವರೆ ಆಯ್ತು ,
ಭಲೆ ಭಲೆಯವರೆ ಆಯ್ತು , ತಿದ್ದುಕೊ0ಡೆ, ಹಾಗೆ ನೀವು ಒ0ದು ಮೀಟಿ0ಗ್ ಗೆ ಏಕೆ ಬರಬಾರದು ನಮ್ಮ ಜೊತೆ :))
In reply to ಭಲೆ ಭಲೆಯವರೆ ಆಯ್ತು , by partha1059
ಆಗಬಹುದು ಪಾರ್ಥರೇ ... ಮುಂದಿನ
ಆಗಬಹುದು ಪಾರ್ಥರೇ ... ಮುಂದಿನ ಬಾರಿ ಭಾರತಕ್ಕೆ ಬಂದಾಗ ಖ೦ಡಿತ ಮೀಟಿಂಗ್ ಕರೆಯುವೆ ... ಒಂದಿಬ್ಬರು ಚಿಂಕಿಗಳನ್ನೂ ಕರೆಸಿದರೆ ಚೆನ್ನ :-)