'' ಚುಟುಕುಗಳು 19 ''
ಬದುಕಿನ ಅನೇಕ ಪ್ರಶ್ನೆಗಳಿಗೆ
ಉತ್ತರಗಳೇ ಇರುವುದಿಲ್ಲ
ಹಾಗೆಯೆ ಅನೇಕ ಸಮಸ್ಯೆಗಳಿಗೆ
ಪರಿಹಾರಗಳೂ ಇರುವುದಿಲ್ಲ
ಪರಿಹಾರವಿಲ್ಲದ ಪ್ರಶ್ನೆ ಸಮಸ್ಯೆಗಳಿಗೆ
ತಲೆ ಕೆಡಿಸಿಕೊಂಡು ಕೂಡ್ರಬಾರದು
ಜೀವನವೊಂದು ನಿರಂತರ ಜಂಗಮ
***
ದುಃಖದ ಎದೆತುಂಬಿ
ಉಕ್ಕಿ ಹರಿದಾಗ ಸಂದ
ಕ್ಷಣ ಕ್ಷಣವೂ ಅನನ್ಯ
ಕಣ್ಣೀರಿಗೆ ದುಃಖ ಮರೆಸುವ
ಅದೆಂತಹ ಶಕ್ತಿಯಿದೆ ?
***
ಹುಟ್ಟಿದ ಮನೆ ಕೊಟ್ಟ ಮನೆ
ಎಂಬ ಬೇಧವಿಲ್ಲ ಹೆಣ್ಣಿಗೆ
ಸ್ವದೇಶ ಪರದೇಶವೆಂಬ
ಬೇಧವಿಲ್ಲ ಭೂಮಿಗೆ
ಹೆಣ್ಣು ಭೂಮಿ ಎಲ್ಲ ಒಂದೆ
ಆಕೆ ವಸುಂಧರೆ
Rating
Comments
ಚುಟುಕುಗಳು
ಇಷ್ಟವಾಯಿತು.
In reply to ಚುಟುಕುಗಳು by saraswathichandrasmo
ಸರಸ್ವತಿಚಂದ್ರ ರವರಿಗೆ ವಂದನೆಗಳು
ಸರಸ್ವತಿಚಂದ್ರ ರವರಿಗೆ ವಂದನೆಗಳು
ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.
ಹೌದು ಸರ್, ಬದುಕಿನ ಹಲವಾರು
ಹೌದು ಸರ್, ಬದುಕಿನ ಹಲವಾರು ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ ನಮ್ಮ ಸಾಮರ್ಥ್ಯದ ಮಟ್ಟಿಗಾದರೂ.
ದು:ಖ ಪರಿಹಾರದ ಕಣ್ಣೀರು, ದು:ಖವಾದಾಗ ತಾನೇ ತಾನೇ ಬಂದು ದು:ಖ ಶಮನವಾಗಿಸುವ ಕಣ್ಣೀರು..........ಹೆಣ್ಣು ಎಲ್ಲಿಯೂ ಸಲ್ಲುವ ಧರಿತ್ರಿ ತುಂಬ ಚನ್ನಾದ ಸಾಹಿತ್ಯ. ಧನ್ಯವಾದಗಳು.
In reply to ಹೌದು ಸರ್, ಬದುಕಿನ ಹಲವಾರು by lpitnal@gmail.com
ಲಕ್ಷ್ಮೀಕಾಂತ ಇಟ್ನಾಳ ರವರಿರೆ
ಲಕ್ಷ್ಮೀಕಾಂತ ಇಟ್ನಾಳ ರವರಿರೆ ವಂದನೆಗಳು
" ಚುಟುಕುಗಳು 19 "ನೇ ಭಾಗವನ್ನು ಸಹ ಮೆಚ್ಚಿದ್ದೀರಿ ಧನ್ಯವಾದಗಳು.
In reply to ಲಕ್ಷ್ಮೀಕಾಂತ ಇಟ್ನಾಳ ರವರಿರೆ by H A Patil
ಆತ್ಮೀಯ ಪಾಟೀಲರೆ,
ಆತ್ಮೀಯ ಪಾಟೀಲರೆ,
ಪರಿಹಾರವಿಲ್ಲದ ಪ್ರಶ್ನೆಗಳು ಈ ಜಗತ್ತಿನಲ್ಲಿ ಹುಟ್ಟೇ ಇಲ್ಲ. ಆದರೆ, ಪರಿಹಾರ ನಮಗೆ ಗೊತ್ತಿಲ್ಲದೇ ಇರಬಹುದು. ಭಗವಂತನ ನಿಯಮದಲ್ಲಿ ಪರಿಹಾರ ಮೊದಲು, ನಂತರ ಸಮಸ್ಯೆ! ಸ್ವಲ್ಪ ಆಲೋಚಿಸಿ ನೋಡಿ.
ಧನ್ಯವಾದಗಳು.
In reply to ಆತ್ಮೀಯ ಪಾಟೀಲರೆ, by Prakash Narasimhaiya
ಪ್ರಕಾಶ ಮರಸಿಂಹಯ್ಯ ನವರಿಗೆ
ಪ್ರಕಾಶ ಮರಸಿಂಹಯ್ಯ ನವರಿಗೆ ವಂದನೆಗಳು
ಈ ಚುಟುಕುಗಳ ಕುರಿತು ನಿಮ್ಮ ಅಭಿಪ್ರಾಯ ಓದಿದೆ. ಒಂದು ರೀತಿಯಿಂದ ನಿಮ್ಮ ಅಭಿಪ್ರಾಯ ಸರಿ, ಆದರೆ ನಾವು ನಮ್ಮ ಸುತ್ತ ಮುತ್ತಲಿನ ಸಮಾಜ ಜನರು ಮತ್ತು ಪರಿಸರವನ್ನು ಕಂಡು ನಾನು ಆ ರೀತಿ ದಾಖಲಿಸಿದೆ. ಧೃಢ ನಿಶ್ಚಯದವರಿಗೆ ಆತ್ನ ವಿಶ್ವಾಸವಿರುವವರಿಗೆ ಧೈರ್ಯಶಾಲಿ ಗಳ ಕುರಿತು ಹೇಳಬಹುದಾದರೆ ತಮ್ಮ ಅಭಿಪ್ರಾಯ ಸರಿ, ಆದರೆ ಅವಕಾಶವಂಚಿತರಿಗೆ ದುರ್ಬಲ ಮನಸ್ಥಿತಿಯವರಿಗೆ ಬರುವ ಪ್ರಶ್ನೆಗಳು ಪರಿಹಾರ ವಿಲ್ಲದವಾಗುತ್ತವೆ. ಆ ಯೋಚನಾ ಧಾಟಿಯ ಕಾರಣವಾಗಿ ನಾನು ಹಾಗೆ ದಾಖಲಿಸಿದೆ, ಪ್ರತಿಕ್ರಿಯೆಗೆ ಧನ್ಯವಾದಗಳು.
In reply to ಪ್ರಕಾಶ ಮರಸಿಂಹಯ್ಯ ನವರಿಗೆ by H A Patil
ಆತ್ಮೀಯ ಪಾಟೀಲರೆ
ಆತ್ಮೀಯ ಪಾಟೀಲರೆ
ನಿಮ್ಮ ಮಾತನ್ನು ಖಂಡಿತ ಒಪ್ಪುತ್ತೇನೆ. ಆದರೆ, ಸಕಾರಾತ್ಮಕ ಚಿಂತನೆಯಲ್ಲಿ ಆತ್ಮ ಸ್ತೈರ್ಯ ಹೆಚ್ಚುವ ಬಗೆಗೆ ನನ್ನ ವಿಚಾರ. ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.
In reply to ಆತ್ಮೀಯ ಪಾಟೀಲರೆ by Prakash Narasimhaiya
ಪ್ರಕಾಶ ನರಸಿಂಹಯ್ಯನವರಿಗೆ
ಪ್ರಕಾಶ ನರಸಿಂಹಯ್ಯನವರಿಗೆ ವಂದನೆಗಳು
ತಮ್ಮ ಮರು ಪ್ರತಿಕ್ರಿಯೆ ಓದಿದೆ, <<< ಸಕಾರಾತ್ಮಕ ಚಿಂತನೆಯಲ್ಲಿ ........ನನ್ನ ವಿಚಾರ >>> ಎನ್ನುವ ತಮ್ಮ ಅನಿಸಿಕೆ ಸರಿ, ಆ ವಿಚಾರ ಧಾರೆಯನ್ನು ಎಲ್ಲ ಜನ ಸಾಮಾನ್ಯರು ಅನುಸರಿಸಿದರೆ ಸಮಸ್ಯೆಗಳು ಅವರ ಹತ್ತಿರ ಸುಳಿಯವು, ಹಾಗೆಯೆ ನಾನು ತಮಗೆ ಈ ಮೊದಲು ಬರೆದ ಪ್ರತಿಕ್ರಿಯೆಯಲ್ಲಿ ತಮ್ಮ ಹೆಸರನ್ನು ಅಪ್ಪಾಗಿ ಬೆರಳಚ್ಚು ಮಾಡಿದ್ದೇನೆ ಕ್ಷಮೆಯಿರಲಿ, ಧನ್ಯವದಗಳು.