ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್

ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್

ಗುಂಡ ಆ ಕ್ಯೂನಲ್ಲಿ ನಿಂತು ಆಗ್ಲೇ ಮೂರು ತಾಸು ಆಗಿತ್ತು. ಬಿಸಿಲ ಧಗೆಗೆ ಅವ್ನ ಗಂಟ್ಲು ಒಣಗಿತ್ತು. ಅವ್ನ ಮುಂದೆ ನಿಂತ ಮೂರು ಹೆಣ್ಮಕ್ಳು, "ಟೇಮೆಷ್ಟಣ್ಣಾ..?", ಅಂತ ಮುವ್ವತ್ತು ಸಲ ಕೇಳಿದ್ದರು. ಹೋದ-ವಾರನೇ ತಗೊಂಡಿದ್ದ "fastrack" ವಾಚ್ ಕಡೆ ಸ್ಟೈಲಿಂದ ನೋಡಿ, ಒಂಚೂರು ಬೇಜಾರಿಲ್ದೆ, ಗುಂಡ ಅವ್ರಿಗೆ ಟೇಮೆಳಿದ್ದ.

ಮೂರು ವರ್ಷದಿಂದ ಫೀಲ್ಡಲ್ಲಿ(ಸಪಟವೆರು) ಇದ್ದ ಗುಂಡುಂಗೆ ಒಂದೇ ಕೊರಗು, ಅದು ಆನ್-ಸೈಟು. ಒಂದಲ್ಲ, ಎರಡು ಸಾರಿ ಗುಂಡ, ಆ ಗ್ರೇಟ್ ಆಪಾರ್ಚುನಿಟಿ ಮಿಸ್ ಮಾಡ್ಕಂದಿದ್ದ, ಕಾರಣ - ಪಾಸ್-ಪೋರ್ಟ್.
"ಗುಂಡಾ.... ಆನ್-ಸೈಟು ಐತೆ, ಹೋಗ್ತಿಯಾ...?" ಅಂತ ಅವ್ನ ಮ್ಯಾನೇಜರ್ ಕೇಳೊದಕ್ಕೂ, ಇವ್ನತ್ರ ಪಾಸ್-ಪೋರ್ಟ್ ಇಲ್ಲದ್ದಕ್ಕೂ..,(ಅಥವಾ vice-versa) ಸರಿ ಹೋಗಿತ್ತು. ಗುಂಡನ ಪಾಸ್-ಪೋರ್ಟ್ ಗೆ ಇದ್ದ ಒಂದೇ ತೊಡಕು, "ಅಡ್ರೆಸ್ಸ್ ಪ್ರೊಫ್" ಎಂಬ ಮಹಾನ್ ದಾಖಲೆ. ಅಖಂಡ ಕರುನಾಡಿನುದ್ದಕ್ಕೂ ತನ್ನ ೨೫ ವರ್ಷಗಳ ಜೀವನ ಕಳೆದ ಗುಂಡನಂಥ ಗುಂಡನಿಗೆ, ಕರ್ನಾಟಕ ಮಾತೆ, ಒಂದು ಯಕ:ಶ್ಚಿತ್ "ಅಡ್ರೆಸ್ಸ್ ಪ್ರೂಫ್" ಕರುಣಿಸಿರಲಿಲ್ಲ. ಈ ಸಲದ ಚುನಾವಣೆಯಿಂದ ಯಾರಿಗೂ ಲಾಭ ಆಗ್ದೇ ಇದ್ರು, ಗುಂಡನಿಗಂತು ಆಗಿತ್ತು. ಚುನಾವಣೆಯಿಂದ ಸಿಗೋ "ಎಲೆಕ್ಷನ್ ಐಡಿ" ಇಂದ, ಗುಂಡ ತನ್ನ ಬಹುದಿನದ ಕನಸನ್ನು ನನಸು ಮಾಡಿಕೊಳ್ಳುವವನ್ನಿದ್ದ. ಚುನಾವಣಾ ಗುರುತಿನ ಚೀಟಿಯನ್ನು ಪಡೆಯಲೋಸುಗ ಗುಂಡ ತನ್ನ ಅಮೂಲ್ಯವಾದ ವೀಕೆಂಡನ್ನು, ಬೆಂಗಳೂರಿನ ಎಂತದೋ ಒಂದು ಹಳ್ಳಿಯ, ಸರಕಾರಿ ಶಾಲೆಯ ಕಾರಿಡಾರಿನಲ್ಲಿಯ ಕ್ಯೂಯಲ್ಲಿ ಕಳೆಯುತ್ತಿದ್ದ. ಫೋಟೊಗೆಂದೇ ಫುಲ್ ಟ್ರಿಮ್ಮಾಗಿ ಬಂದಿದ್ದ ಗುಂಡನನ್ನು ನೋಡಿದ ಒಬ್ಬ ಪಿ.ಸಿ, "ಸ್ವಲ್ಪ ಮುಂದೆ ಹೋಗಿ ಸಾರ್", ಎಂದು ವಿನಯದಿಂದ ಹೇಳಿದ್ದು ಕೇಳಿ, ಗುಂಡ ಕೊಂಚ ಉಬ್ಬಿ ಹೋದ. ಕ್ಯೂನಲ್ಲಿ, ಮುಂದೆ ಗುಜು-ಗುಜು ಮಾಡುವ ಹೆಣ್ಮಕ್ಕಳು, ಹಿಂದೆ ಅದೀಗ ತಾನೆ ಮದುವೆಯಾದಂತ್ತಿದ್ದ ಯುವ-ಜೋಡಿಗಳ ಕುಸು-ಕುಸು, ನೋಡಿ-ಕೇಳಿ, ಸುತ್ತಲೂ ಒಮ್ಮೆ ಕಣ್ಣಾಡಿಸಿ, ಅಲ್ಲಿ ಟೈಂಪಾಸ್ ಮಾಡಲು ತನಗೆ ಬೇಕಾದ view ಇಲ್ವಲ್ಲಾ.. ಎಂದು ಒಳಗೊಳಗೆ ಹಳಹಳಿಸಿದ.
ಫೋಟೊ ತೆಗೆಯುತ್ತಿದ್ದ ಕೊಠಡಿಯ ಬಾಗಿಲಲ್ಲಿ ನಡೆಯುತ್ತಿದ್ದ "ಅಕ್ರಮ ಓಡಾಟ"ದ ಬಗ್ಗೆ, ಕ್ಯೂನಲ್ಲಿದ್ದ ಸಾಮಾನ್ಯ(?) ಜನ ತಲೆ ಕೆಡಿಸಿಕೊಂಡಿದ್ದಂತ್ತಿದ್ದಿಲ್ಲ. ಏರಿಯಾದ ದೊಡ್ಡ ಜನರು, ಚುನಾವಣೆಗೆ ನಿಂತವರ ಮನೆ-ಮಂದಿ, ಅವರ ಸಂಬಂಧಿಕರು, ಅವರ ಚೇಲಾಗಳೂ, ಚೇಲಾಗಳ ಚಮಚಾಗಳು, ಚಮಚಾಗಳ ಬಚ್ಚಾಗಳು, ಹೀಗೆ ಇವ್ರೆಲ್ರೂ ಕ್ಯೂ-Exempt. ಕ್ಯೂನಲ್ಲಿದ್ದ ಜನ(ಸಾಮಾನ್ಯ..?) ಇದರ ಬಗ್ಗೆ ತಮ್ಮ-ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು. ತನ್ನ ಕಣ್ಣಿದುರೇ ನಡೆಯುತ್ತಿದ್ದ ಅನಾಚಾರ ನೋಡಿ, ಗುಂಡನಿಗೆ ಆಶ್ಚರ್ಯ-ಅಸಹ್ಯ-ಅವಮಾನ-ಕ್ರೋಧ, ಎಲ್ಲವೂ ಮಿಕ್ಸಾಗಿ, "ಮುಂದೆ ಯಾರನ್ನು ಬಿಡಬೇಡಿ.........." ಎಂದು ಬಾಗಿನಲ್ಲಿದ್ದ ಪಿ.ಸಿ ಗೆ ಕೂಗಿ, ಅಲ್ಲಿ ಕ್ರಾಂತಿಯ ಘೋಷಣೆ ಮಾಡಿದ. "ಆಯ್ತು", ಎಂಬಂತೆ ಆ ಪಿ.ಸಿ ಕೈ ಮಾಡಿದ. ಹಿಂದೆ-ಮುಂದೆ ನಿಂತ್ತಿದ್ದವರು, ತಮ್ಮಲ್ಲೇ ಏನೂ ಆಗೋಲ್ಲವೆಂಬಂತೆ ಗೊಣಗಿದರು. ಅದಾದ ನಂತರ ಬಾಗಿಲಿನಲ್ಲಿ ಯಾರೇ "ಅಕ್ರಮ"ವಾಗಿ ಕಂಡರೂ, ಗುಂಡ ಕೂಗತೊಡಗಿದ, ಅದಕ್ಕೆ ತಕ್ಕಂತೆ ಕ್ಯೂನಲ್ಲಿದ್ದ ಕೆಲವು ಹೆಂಗಸರು(ಗಂಡುಗಲಿಗಳಿದ್ದರೂ), ಸಣ್ಣಗೆ ಮಾತಾಡಿ ಗುಂಡನಿಗೆ ಸಪೋರ್ಟ್ ಕೊಟ್ಟರು. ಎಲ್ಲಿಂದಲೋ ಅವತರಿಸಿದ ಭೂಪನೊಬ್ಬ, ಗದ್ದಲದಲ್ಲಿ, ಕ್ಯೂನಲ್ಲಿ ನುಸುಳಲೆತ್ನಿಸಿದ್ದನ್ನೋಡಿದ ಗುಂಡ, "ಎಲ್ಲಿಂದ ತಮ್ಮ ಸವಾರಿ.....?", ಎಂದು ಕೇಳಿದರೆ, "ಕನ್ನಡ ಬರೋಲ್ಲವೆಂದು", ಸನ್ನೆ ಮಾಡಿದವನಿಗೆ , ರೋಷದಿಂದ ಗುಂಡ(ಹೇಳಿ-ಕೇಳಿ ಹುಟ್ಟಾ ಕನ್ನಡಿಗ), "ಎಲ್ಲಿಂದ ಬಂದಿದಿಯಾ.., ವಾಪಾಸ್ ಅಲ್ಲಿಗೇ ನಡಿ......", ಎಂದು ಗದರಿಸಿದ್ದನ್ನು ನೋಡಿ, ಕ್ಯೂನಲ್ಲಿದ್ದ ಜನರಿಗೆ, ಗುಂಡನ ಬಗ್ಗೆ ಅಭಿಮಾನ ಉಕ್ಕಿ ಹರಿಯತೊಡಗಿತು. Sudd-Suddenly, ಗುಂಡ ಆ ಕಾರಿಡಾರಿನಲ್ಲೇ "Instant" ನಾಯಕನಾದ. ಹಿಂದಿದ್ದ, ನವ-ವಿವಾಹಿತ(ಗಂಡು), ಗುಂಡನಿಗೆ, "ಅಲ್ಲಿ ನೋಡಿ, ಯಾವನೋ ತೂರ್ಕಂತವ್ನೇ.....", ಅಂತ ಹಲ್ಕಿರಿದು, ತನ್ನ ನವ-ಹೆಂಡತಿಯ ಎದುರು ಪರಮ-ಪೌರುಷ ಮೆರೆದ. ಅಲ್ಲಿದ್ದ ಹೆಣ್ಮಕ್ಕಳಂತೂ, ಗುಂಡನ ಮಾತಿಗೆ ಎದುರು ನೋಡತೊಡಗಿದರು. ಇದೇ ಹುಮ್ಮಸ್ಸಿನಲ್ಲಿ, ಬಾಗಿಲಲ್ಲಿದ್ದ ಪಿ.ಸಿ ಗೆ ಸ್ವಲ್ಪ ಜೋರಾಗಿ ಮಾತನಾಡಿದ. ಅಲ್ಲಿಯ ತನಕ ಇದನ್ನೆಲ್ಲಾ, ಸುಮ್ಮನೆ ನೋಡುತ್ತಿದ್ದ ಎಸ್.ಐ ಗುಂಡನಿಗೆ "ಇದು ಸ್ವಲ್ಪ ಅತಿಯಾಯ್ತು", ಅಂತ indirect ಆಗಿ ಗದರಿಸಿ-ಹೇಳಿದ. ಅಷ್ಟರಲ್ಲೇ ಬಾಗಿಲಿನ ಬಳಿ ಬಂದಿದ್ದ ಗುಂಡನಿಗೆ, ತನ್ನ "ಪಾಸ್-ಪೋರ್ಟ್"ನ "ಪೋಲಿಸ್ veirfiಕೇಶನ್ನು" ನೆನಪಾಗಿ, "ಇನ್ನು ಸಾಕು" ಎಂಬಂತೆ, ತನ್ನ ಕ್ರಾಂತಿ ಹೋರಾಟ(?) ನಿಲ್ಲಿಸಿದ. ಆದರೂ ತನ್ನಲ್ಲೊಬ್ಬ "ಕ್ರಾಂತಿಕಾರಿ" ಇದ್ದಾನೆಂಬುದನ್ನು ಅರಿತ ಗುಂಡ, ಪರಮ ಸಂತೋಷಿಗನಾಗಿ, ಫೋಟೋಗೆ ಹಲ್ಕಿರಿಯುತ್ತ ಫೋಜು ಕೊಟ್ಟ.................

Rating
No votes yet

Comments