ಚುರ್ಮುರಿ - ೧೬

ಚುರ್ಮುರಿ - ೧೬

೫೮) ಅಂದು ರಜೆಯಿತ್ತು ಹಬ್ಬವಾಗಿದ್ದರಿಂದ. ಅವನು ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಡ್ಡ ಬಿದ್ದು ತೀರ್ಥ ಕೊಡಲು ಬರುತ್ತಿದ್ದ ಭಟ್ಟರನ್ನು ನೋಡದೆ ಅಲ್ಲಿಂದ ಬೇಗಬೇಗನೆ ಹೊರಟು ಬಾರಿನ ಕಡೆ ತೀರ್ಥಸೇವನೆಗೆ ಹೆಜ್ಜೆ ಹಾಕಿದನು. ೫೯) ೧೫ ವರ್ಷಗಳ ನಂತರ ಒಳ್ಳೆಯ ಲಾಭ ತೆಗೆಯಬಹುದೆಂದು ತನ್ನ ತೋಟದ ತುಂಬಾ ಅವನು ಶ್ರೀಗಂಧದ ಗಿಡಗಳನ್ನು ಹಾಕಿಸಿದನು, ೧೫ ವರ್ಷವಾದ ಮೇಲೆ ಬರಿಯ ಬೇರನ್ನು ನೋಡುವ ಸೌಭಾಗ್ಯ ಅವನದಾಗಿತ್ತು. ೬೦) ಮೊದಲನೆಯದು ಗಂಡಾಗಿದ್ದುದರಿಂದ ಎರಡನೆಯದು ಹೆಣ್ಣಾಗಲಿ ಎಂದು ಆ ದಂಪತಿಗಳು ಆಶಿಸಿದ್ದರು. ಆದರೆ ಆಗಿದ್ದು ಅವಳಿ ಜವಳಿ ಗಂಡು ಮಕ್ಕಳು. ೬೧) ತನಗೆ ಇಂಗ್ಲಿಷ್ ಅಷ್ಟು ಚೆನ್ನಾಗಿ ಬಾರದಿದ್ದುದರಿಂದ ಅವನು ಚೈನೀಸ್ ಒಬ್ಬಳನ್ನು ಅಸಿಸ್ಟೆನ್ಟಾಗಿ ನೇಮಕ ಮಾಡಿಕೊಂಡಿದ್ದನು. ೬೨) ಕೆಲವು ಮಕ್ಕಳ ಚಿತ್ರ ಕ್ಯೂಟ್ ಇಲ್ಲದಿದ್ದರೂ ಫೇಸ್ಬುಕ್ನಲ್ಲಿ ಕೆಲವರು ಸೋ ಕ್ಯೂಟ್ ಎನ್ನುತ್ತಾರೆ.
Rating
No votes yet

Comments