ಜಗದಿ ನಿನ್ನಿರುವಿಕೆ (ಶ್ರೀ ನರಸಿಂಹ 58)
ಮುಖ್ಯವಾದವರೇನಾಗಿಲ್ಲ ನಾವುಗಳು ಈ ಜಗಕೆ
ಅನಿವಾರ್ಯ ಕೂಡವೇನಿಲ್ಲ ಇಲ್ಲಿ ನಮ್ಮಿರುವಿಕೆ
ನಮ್ಮಿರಿವು ಈ ಜಗದಲ್ಲಿ ನೆಪ ಮಾತ್ರವಾಗಿಹುದು
ನಾವಿರಲಿ,ಇಲ್ಲದಿರಲಿ ಈ ಜಗವು ನಡೆಯುತಿಹುದು
ನಮ್ಮ ಜೀವನದ ಪಯಣ ಮುಗಿದ ದಿನದಂದು
ಸನಿಹದವರನು ಬಿಟ್ಟದು ಜಗಕೆ ತಿಳಿಯದೆಂದು
ಜಗಕೊಳಿತಾಗುವ ಸಾಧನೆಯ ನೀ ಮಾಡಬೇಕು
ನಿನ್ನಳಿವಿನ ನಂತರವು ಜಗದಿ ನೀ ಬಾಳ ಬೇಕು
ಜಗವೆ ನೀಡುತಿಹುದು ನಮಗೆಲ್ಲವನು,ಜಗಕೆ ನೀ ನೀಡದನು
ಸ್ಮರಿಸನವರತ ಜಗಕೊಡೆಯ ಶ್ರೀನರಸಿಂಹನ ನಾಮವನು
Rating
Comments
ನಿನ್ನಳಿವಿನ ನಂತರವು ಜಗದಿ ನೀ
ನಿನ್ನಳಿವಿನ ನಂತರವು ಜಗದಿ ನೀ ಬಾಳ ಬೇಕು - ಒಳ್ಳೆಯ ನುಡಿ.
In reply to ನಿನ್ನಳಿವಿನ ನಂತರವು ಜಗದಿ ನೀ by kavinagaraj
ಧನ್ಯವಾಗಳು ನಾಗರಾಜ್ ರವರೇ
ಧನ್ಯವಾಗಳು ನಾಗರಾಜ್ ರವರೇ
....ಸತೀಶ್
"ಜಗಕೊಳಿತಾಗುವ ಸಾಧನೆಯ ನೀ
"ಜಗಕೊಳಿತಾಗುವ ಸಾಧನೆಯ ನೀ ಮಾಡಬೇಕು
ನಿನ್ನಳಿವಿನ ನಂತರವು ಜಗದಿ ನೀ ಬಾಳ ಬೇಕು"
ಉತ್ತಮ ವಿಚಾರಧಾರೆಯ -ಚಿಂತನೆಯ ಈ ಬರಹಗಳ ಸರಣಿ ಅನವರತ-ಅಡೆ -ತಡೆ ಇಲ್ಲದೆ ಸಾಗಲಿ..
ನಮ್ ಮನವನ್ನು ಉದ್ಧೀಪನಗೊಳಿಸಲಿ ..
ಶುಭವಾಗಲಿ..
\|
In reply to "ಜಗಕೊಳಿತಾಗುವ ಸಾಧನೆಯ ನೀ by venkatb83
ಧನ್ಯವಾದಗಳು ವೆಂಕಟೇಶ್ ರವರೇ
ಧನ್ಯವಾದಗಳು ವೆಂಕಟೇಶ್ ರವರೇ
....ಸತೀಶ್
ತು0ಬಾ ಉತ್ತಮ ಸ0ದೇಶ, ಸತೀಶ್
ತು0ಬಾ ಉತ್ತಮ ಸ0ದೇಶ, ಸತೀಶ್ ಅವರೆ.
In reply to ತು0ಬಾ ಉತ್ತಮ ಸ0ದೇಶ, ಸತೀಶ್ by makara
ಬಹಳ ದಿನಗಳ ನಂತರ ನಿಮ್ಮ
ಬಹಳ ದಿನಗಳ ನಂತರ ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು ಶ್ರೀಧರ್ ರವರೇ ಧನ್ಯವಾದಗಳೊಂದಿಗೆ
....ಸತೀಶ್
In reply to ಬಹಳ ದಿನಗಳ ನಂತರ ನಿಮ್ಮ by sathishnasa
>+1
<<ಜಗಕೊಳಿತಾಗುವ ಸಾಧನೆಯ ನೀ ಮಾಡಬೇಕು
ನಿನ್ನಳಿವಿನ ನಂತರವು ಜಗದಿ ನೀ ಬಾಳ ಬೇಕು>>+1
In reply to >+1 by Premashri
ಧನ್ಯವಾದಗಳು ಪ್ರೇಮ ರವರೇ
ಧನ್ಯವಾದಗಳು ಪ್ರೇಮ ರವರೇ
......ಸತೀಶ್