ಜಗದಿ ನಿನ್ನಿರುವಿಕೆ (ಶ್ರೀ ನರಸಿಂಹ 58)

ಜಗದಿ ನಿನ್ನಿರುವಿಕೆ (ಶ್ರೀ ನರಸಿಂಹ 58)

ಮುಖ್ಯವಾದವರೇನಾಗಿಲ್ಲ ನಾವುಗಳು ಈ ಜಗಕೆ


ಅನಿವಾರ್ಯ  ಕೂಡವೇನಿಲ್ಲ ಇಲ್ಲಿ  ನಮ್ಮಿರುವಿಕೆ


ನಮ್ಮಿರಿವು ಈ ಜಗದಲ್ಲಿ ನೆಪ ಮಾತ್ರವಾಗಿಹುದು


ನಾವಿರಲಿ,ಇಲ್ಲದಿರಲಿ ಈ ಜಗವು ನಡೆಯುತಿಹುದು


 


ನಮ್ಮ ಜೀವನದ ಪಯಣ ಮುಗಿದ ದಿನದಂದು


ಸನಿಹದವರನು ಬಿಟ್ಟದು  ಜಗಕೆ ತಿಳಿಯದೆಂದು


ಜಗಕೊಳಿತಾಗುವ ಸಾಧನೆಯ ನೀ ಮಾಡಬೇಕು


ನಿನ್ನಳಿವಿನ  ನಂತರವು ಜಗದಿ ನೀ ಬಾಳ  ಬೇಕು


 


ಜಗವೆ ನೀಡುತಿಹುದು ನಮಗೆಲ್ಲವನು,ಜಗಕೆ ನೀ ನೀಡದನು


ಸ್ಮರಿಸನವರತ ಜಗಕೊಡೆಯ ಶ್ರೀನರಸಿಂಹನ ನಾಮವನು

Rating
No votes yet

Comments

Submitted by venkatb83 Tue, 01/08/2013 - 19:40

"ಜಗಕೊಳಿತಾಗುವ ಸಾಧನೆಯ ನೀ ಮಾಡಬೇಕು

ನಿನ್ನಳಿವಿನ ನಂತರವು ಜಗದಿ ನೀ ಬಾಳ ಬೇಕು"

ಉತ್ತಮ ವಿಚಾರಧಾರೆಯ -ಚಿಂತನೆಯ ಈ ಬರಹಗಳ ಸರಣಿ ಅನವರತ-ಅಡೆ -ತಡೆ ಇಲ್ಲದೆ ಸಾಗಲಿ..
ನಮ್ ಮನವನ್ನು ಉದ್ಧೀಪನಗೊಳಿಸಲಿ ..

ಶುಭವಾಗಲಿ..

\|