ಜಮಾನಾದ ಕಥೆಗಳು - ಯಾರು ಜಾಣರು ಈ ಮೂವರೊಳಗೆ
ಶ್ರೀಯುತ ಕವಿ ನಾಗರಾಜ್ ಅವರು ಬರೆದಿರುವ ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೧ http://sampada.net/%E0%B2%85%E0%B2%B0%E0%B3%8D%E0%B2%A5-%E0%B2%95%E0%B2%B3%E0%B3%86%E0%B2%A6%E0%B3%81%E0%B2%95%E0%B3%8A%E0%B2%82%E0%B2%A1-%E0%B2%87%E0%B2%B2%E0%B2%BE%E0%B2%96%E0%B2%BE-%E0%B2%B5%E0%B2%BF%E0%B2%9A%E0%B2%BE%E0%B2%B0%E0%B2%A3%E0%B3%86%E0%B2%97%E0%B2%B3%E0%B3%81-%E0%B3%A7 ಓದುತ್ತಿದ್ದಂತೆ ನಮ್ಮ ಜಮಾನದಲ್ಲಿ ಪ್ರಚಲಿತವಿದ್ದ ಈ ಚುಟುಕು ಕಥೆ ನೆನಪಿಗೆ ಬಂತು. ಅದನ್ನು ಸಂಪದಿಗರಿಗರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಇಲ್ಲಿ ಪ್ರಕಟಿಸುತ್ತಿದ್ದೇನೆ.
******
ಒಬ್ಬ ಇಂಜಿನೀಯರ್ ಬಹಳಷ್ಟು ಕಾಲ ಒಂದು ಮಾರುಮೂಲೆಯ ಊರಿನಲ್ಲಿ ಕೆಲಸ ಮಾಡಿ ರಿಟೈರ್ ಆಗಿ ಹೋದ. ಅವನು ಹೋದ ಮೇಲೆ ಹೊಸ ಇಂಜಿನೀಯರ್ ಒಬ್ಬ ಆ ಜಾಗಕ್ಕೆ ಬಂದ. ಅವನು ಇಲಾಖೆಯ ಕಡತಗಳನ್ನು ಪರಿಶೀಲಿಸುತ್ತಿದ್ದಾಗ ಅಲ್ಲೊಂದು ಜಾಗದಲ್ಲಿ ಹೊಸ ಬಿಲ್ಡಿಂಗನ್ನು (ಸರ್ಕಾರಿ ಅತಿಥಿ ಗೃಹವನ್ನು) ಕಟ್ಟಲು ಆದೇಶ ಪಡೆದುಕೊಂಡದ್ದನ್ನು ಮತ್ತು ಅದರ ನಿರ್ವಹಣೆಗೆ ಪ್ರತಿ ತಿಂಗಳೂ ಇಂತಿಷ್ಟು ಹಣ ಸರ್ಕಾರಿ ಖರ್ಚಿನ ಬಾಬ್ತಿನಲ್ಲಿ ವಜಾ ಆಗುತ್ತಿತ್ತು. ಈ ಹೊಸ ಇಂಜಿನೀಯರಿಗೆ ಪರಿಸ್ಥಿತಿಯ ಅರಿವಾಯಿತು. ಅದೇನೆಂದರೆ ಅಲ್ಲಿ ಬಿಲ್ಡಿಂಗು ಕಟ್ಟಲು ಹಣ ಸ್ಯಾಂಕ್ಷನ್ ಆಗಿತ್ತು. ಆದರೆ ರಿಟೈರಾದ ಆ ಹಳೇ ಇಂಜಿನಿಯರು ಆ ಹಣವನ್ನೆಲ್ಲಾ ನುಂಗಿ ನೀರು ಕುಡಿದಿದ್ದಲ್ಲದೇ, ಪ್ರತಿ ತಿಂಗಳೂ ಅದರ ನಿರ್ವಹಣೆಗೆಂದೂ ಸಾಕಷ್ಟು ಹಣವನ್ನು ಗುಳುಂ ಮಾಡಿದ್ದ. ಅವನು ಕೆಲಸ ಮಾಡುತ್ತಿದ್ದ ಜಾಗ ಮಾರುಮೂಲೆಯಲ್ಲಿದ್ದುದರಿಂದ ಅಲ್ಲಿಗೆ ಯಾವುದೇ ತನಿಖಾಧಿಕಾರಿಗಳು ಬರುತ್ತಿರಲಿಲ್ಲ. ಒಂದು ವೇಳೆ ಬಂದರೂ ಸಹ ಅವರನ್ನು ಅದು ಹೇಗೋ ಸಮಜಾಯಿಷಿ ಕಳುಹಿಸುತ್ತಿದ್ದ. ಈ ಇಂಜನೀಯರು ಸಹ ಬುದ್ದಿವಂತ, ಅವನೇನು ಮಾಡಿದ ಅಂದರೆ, ಈಗಿರುವ ಬಿಲ್ಡಿಂಗಿಗೆ ಸುಣ್ಣ-ಬಣ್ಣ ಬಳೆಯ ಬೇಕೆಂದು ಮತ್ತು ಸಣ್ಣ-ಪುಟ್ಟ ರಿಪೇರಿ ಮಾಡಬೇಕೆಂದು ಆಗಿಂದಾಗ್ಗೆ ಲೆಕ್ಕ ಬರೆದು ತಾನೂ ಸಾಕಷ್ಟು ಹಣವನ್ನು ನುಂಗಿ ಹಾಕಿದ. ಸ್ವಲ್ಪ ವರ್ಷಗಳ ನಂತರ ಈ ಇಂಜಿನಿಯರೂ ರಿಟೈರಾದ. ಆ ಜಾಗಕ್ಕೆ ಮತ್ತೊಬ್ಬ ಹೊಸ ಇಂಜಿನೀಯರು ಬಂದ. ಅವನೂ ಸಹ ಕಡತಗಳನ್ನೆಲ್ಲಾ ಪರಿಶೀಲಿಸಿದ ನಂತರ ನೋಡುತ್ತಾನೆ ಅಲ್ಲಿ ಯಾವುದೇ ಬಿಲ್ಡಿಂಗಾಗಲಿ ಅಥವಾ ಅತಿಥಿ ಗೃಹವಾಗಲೀ ಇರಲಿಲ್ಲ. ಆದರೆ ಕಡತಗಳ ಪ್ರಕಾರ ಅದನ್ನು ಕಟ್ಟಿಸುವುದಲ್ಲದೇ ಅದನ್ನು ನಿಯಮಿತವಾಗಿ ನಿರ್ವಹಣೆ ಹಾಗೂ ಸಣ್ಣಪುಟ್ಟ ರಿಪೇರಿಗಳನ್ನು ಮಾಡಿಸಿದ್ದಾರೆ. ಅವನಿಗೂ ಸಹ ಪರಿಸ್ಥಿತಿಯ ಅರಿವಾಯಿತು. ಅವನೂ ಕೂಡ ಇಂಜಿನೀಯರನಲ್ಲವೇ, ಪಾಪ ಅವನೇಕೆ ಕಡಿಮೆಯಾದಾನು? ತಕ್ಷಣವೇ ಅವನು ತನ್ನ ಮೇಲಿನಧಿಕಾರಿಗಳಿಗೆ ಈ ಹಿಂದೆ ಕಟ್ಟಿಸಿದ ಕಟ್ಟಡ (ಅತಿಥಿ ಗೃಹ) ಶಿಥಿಲಾವಸ್ಥೆಯಲ್ಲಿದೆ ಅದನ್ನು ರಿಪೇರಿ ಮಾಡಿಸಲು ಸಾಕಷ್ಟು ಖರ್ಚುಗಳನ್ನು ಹಿಂದಿನ ಇಂಜಿನೀಯರ್ರರ ಹಯಾಮಿನಲ್ಲಿ ಮಾಡಿದ್ದರೂ ಸಹ ಯಾವುದೇ ಉಪಯೋಗವಾಗಿಲ್ಲ. ಆದ್ದರಿಂದ ಈಗಿರುವ ಕಟ್ಟಡವನ್ನು ಕೆಡವಿ ಹೊಸದೊಂದು ಕಟ್ಟಡವನ್ನು ಕಟ್ಟಲು ಅನುಮತಿ ಕೊಡಿ. ಅದರ ಯೋಜನಾ ವೆಚ್ಚ ಹೀಗಿದೆ ಎಂದು ಹೊಸ ಅತಿಥಿ ಗೃಹದ ನೀಲ ನಕ್ಷೆಯನ್ನು ತಯಾರಿಸಿ ಮತ್ತೆ ಸರ್ಕಾರದಿಂದ ಹೊಸ ಅತಿಥಿ ಗೃಹಕ್ಕೆ ಹಣ ಸ್ಯಾಂಕ್ಷನ್ ಮಾಡಿಸಿಕೊಂಡ ಮತ್ತು ಸ್ವಂತ ಊರಿನಲ್ಲಿ ತನ್ನದೇ ಒಂದು ಸ್ವಂತ ಮನೆಯನ್ನು ಕಟ್ಟಿಸಿಕೊಂಡ.
Rating
Comments
:)ಇದು ಜನ್ಮ ಜನ್ಮಾಂತರದ ಕತೆ
:)ಇದು ಜನ್ಮ ಜನ್ಮಾಂತರದ ಕತೆ ಶ್ರೀಧರ್ಜಿ...ಕವಿನಾಗರಾಜರ ಲೇಖನಕ್ಕೆ ತಕ್ಕ ಕತೆ ಧನ್ಯವಾದಗಳು.
ಈ ಕಥೆಯ ಚಿತ್ರ ನಿರೂಪಣೆಗೆ
ಈ ಕಥೆಯ ಚಿತ್ರ ನಿರೂಪಣೆಗೆ ಶೇಷಾದ್ರಿಯವರ ಬೇರು ಚಲನಚಿತ್ರ ನೋಡಿ!
In reply to ಈ ಕಥೆಯ ಚಿತ್ರ ನಿರೂಪಣೆಗೆ by shridharjs
'ಕಟ್ಟದಿದ್ದರು ಗುಳುಂ'
'ಕಟ್ಟದಿದ್ದರು ಗುಳುಂ' ಹೆಚ್ಚುಕಡಿಮೆ ಇದೆ ತರದ ಕಥಾವಸ್ತುವಿರುವ ತಮಿಳು ಚಿತ್ರವೊಂದನ್ನು ಸಿಂಗಪುರದ ಟಿವಿಯಲ್ಲಿ ನೋಡಿದ ನೆನಪು. ಚಿತ್ರ ಅಜಿತ್ ನಟಿಸಿದ 'ಸಿಟಿಜನ್' ಅಂತ ಕಾಣುತ್ತದೆ...
-ನಾಗೇಶ ಮೈಸೂರು, ಸಿಂಗಪುರದಿಂದ
In reply to 'ಕಟ್ಟದಿದ್ದರು ಗುಳುಂ' by nageshamysore
ಓದಿ ಪ್ರತಿಕ್ರಿಯಿಸಿದ ಗಣೇಶರಿಗೆ,
ಓದಿ ಪ್ರತಿಕ್ರಿಯಿಸಿದ ಗಣೇಶರಿಗೆ, ಶ್ರೀಧರ್ ಜೆ.ಎಸ್. ಮತ್ತು ನಾಗೇಶ್ ಸಿಂಗಪೂರ್ ಇವರಿಗೆ ಧನ್ಯವಾದಗಳು. ಮತ್ತು ಕನ್ನಡದ ಚಿತ್ರ ಬೇರು ಮತ್ತು ತಮಿಳು ಚಿತ್ರದಲ್ಲಿ ಇದೇ ವಿಧವಾದ ವಸ್ತು ವಿಷಯವಿರುವುದನ್ನು ತಿಳಿಸಿಕೊಟ್ಟಿದ್ದಕ್ಕೂ ಧನ್ಯವಾದಗಳು.
:)) ಚೆನ್ನಾಗಿದೆ, ಶ್ರೀಧರರೇ.
:)) ಚೆನ್ನಾಗಿದೆ, ಶ್ರೀಧರರೇ. ಧನ್ಯವಾದ.
In reply to :)) ಚೆನ್ನಾಗಿದೆ, ಶ್ರೀಧರರೇ. by kavinagaraj
ನಿಮಗೂ ಧನ್ಯವಾದಗಳು ಕವಿಗಳೆ.
ನಿಮಗೂ ಧನ್ಯವಾದಗಳು ಕವಿಗಳೆ.
ಜಮಾನದಲ್ಲಿ ಇದು ಕತೆ ಇರಬಹುದೇನೋ
ಜಮಾನದಲ್ಲಿ ಇದು ಕತೆ ಇರಬಹುದೇನೋ ಶ್ರೀಧರರೇ.. ವರ್ತಮಾನದಲ್ಲಂತೂ ಇಂತಹ ನೂರಾರು ಉದಾಹರಣೆಗಳು ಪ್ರತಿ ಇಲಾಖೆಯಲ್ಲೂ ಸಿಗುತ್ತದೆ (ತನಿಖೆ ನಡೆಸಿದರೆ!)
In reply to ಜಮಾನದಲ್ಲಿ ಇದು ಕತೆ ಇರಬಹುದೇನೋ by ಸುಧೀ೦ದ್ರ
ನಿಮ್ಮ ಮಾತು ನಿಜ ಸುಧೀಂದ್ರರೆ.
ನಿಮ್ಮ ಮಾತು ನಿಜ ಸುಧೀಂದ್ರರೆ. ಇದು ಕಥೆಯಾಗಿರಬಹುದಾದರೂ ನೀವೆಂದಂತೆ ಇಂತಹ ಸಾವಿರಾರು ಉದಾಹರಣೆಗಳು ಪ್ರತಿ ಇಲಾಖೆಯಲ್ಲಿಯೂ ಸಿಗುತ್ತವೆ.