ಜಯಕರ್ನಾಟಕದ ವೆಬ್ ಸೈಟ್ ಉದ್ಘಾಟನೆ

ಜಯಕರ್ನಾಟಕದ ವೆಬ್ ಸೈಟ್ ಉದ್ಘಾಟನೆ

ಜಯಕರ್ನಾಟಕದ ವೆಬ್ ಸೈಟ್ ಉದ್ಘಾಟನೆ

ಜನಪರ ಸಂಘಟನೆಯಾದ ಜಯಕರ್ನಾಟಕವು ತನ್ನ ವೆಬ್ ಸೈಟ್‌ನ್ನು ಫೆಭ್ರವರಿ ೩ನೇ ತಾರೀಕು, ಮಧ್ಯಾಹ್ನ ೧೨ ಕ್ಕೆ, ನಾಗವಾರ ಸಮೀಪ ಇರುವ ಅತ್ಯಾಧುನಿಕ ಕಛೇರಿಯಲ್ಲಿ ಜಯಕರ್ನಾಟಕದ ಸಂಸ್ಥಾಪಕ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎನ್.ಮುತ್ತಪ್ಪ ರೈ ಉದ್ಘಾಟಿಸಲಿದ್ದಾರೆ. ನಿರ್ಮಾಣ ಕೊನೆಯ ಹಂತದಲ್ಲಿರುವ ಜಯಕರ್ನಾಟಕದ ಸುಸಜಿತ ಪ್ರಧಾನ ಕಛೇರಿಯಲ್ಲಿ ವೆಬ್ ಸೈಟ್ ಚಾಲನೆಗೊಳ್ಳಲಿದೆ. ವೆಬ್ ಸೈಟ್ ಉದ್ಘಾಟನೆಯಿಂದ ಕರ್ನಾಟಕದ ಪ್ರತೀ ಜಿಲ್ಲೆ, ತಾಲೂಕ ಹಾಗೂ ನಗರದ ವಿವಿಧ ಘಟಕಗಳು ಹಾಗೂ ಕಛೇರಿಗಳ ಜೊತೆ ಸಂಪರ್ಕ ಸುಲಭಗೊಳ್ಳಲಿದೆ.

ಸಮಾಜದಲ್ಲಿ ತಾಂಡವವಾಡುತ್ತಿರುವ ಅಸಮಾನತೆ, ಭ್ರಷ್ಟಾಚಾರ, ಮೇಲು-ಕೀಳೆಂಬ ಭಾವನೆ, ಜಾತಿ ರಾಜಕಾರಣ ಇವುಗಳನ್ನೆಲ್ಲಾ ಹಿಮ್ಮೆಟ್ಟಿಸಿ, ಸ್ವಾಸ್ಥ್ಯ, ಸುಭದ್ರ ಹಾಗೂ ಅಭಿವೃದ್ಧಿಪರ ಸಮಾಜವನ್ನು ರೂಪಿಸಿ ಆ ಮೂಲಕ ನಾಡಿನ ಎಲ್ಲರ ಜೀವನದಲ್ಲೂ ಸುಂದರ ನಾಳೆಗಳನ್ನು ತೋರಿಸುವುದೇ ಜಯಕರ್ನಾಟಕದ ಗುರಿ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿರುವ ಜಯಕರ್ನಾಟಕ ಈ ವರೆಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ಸಮಾಜದ ಎಲ್ಲಾ ವರ್ಗದ ಜನರನ್ನು ತಲುಪಲು ಜಯಕರ್ನಾಟಕವು ೮ ವಿವಿಧ ಘಟಕಗಳನ್ನು ಮಾಡಿದೆ. ರಾಜ್ಯಾದ್ಯಂತ ೧೯ ಜಿಲ್ಲೆಗಳಲ್ಲಿ ಜಯಕರ್ನಾಟಕವು ಕೆಲಸ ಮಾಡುತ್ತಿದೆ ಹಾಗೂ ಇಲ್ಲಿಯವರೆಗೂ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಸಮಾಜದಲ್ಲಿರುವ ಪ್ರತಿಭಾವಂತರನ್ನು ಬಳಸಿಕೊಂಡು ಜನರ ಜೀವನದಲ್ಲಿ ಶಾಂತಿ ಮತ್ತು ಸಹಬಾಳ್ವೆ ತರಲು ಜಯಕರ್ನಾಟಕವು ಪ್ರಯತ್ನಿಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಲ್ಲಿ ಜನರು ಹೆಚ್ಚು ಹೆಚ್ಚು ಸಾಧಿಸಲು ಸಾಧ್ಯವಾಗುತ್ತದೆ. ಇದೇ ರೀತಿ ಜಯಕರ್ನಾಟಕದ ವೆಬ್ ಸೈಟ್ ಸಹ ಎಲ್ಲಾ ಸ್ಥರದ ಜನರನ್ನು ತಲುಪಲು ಸಹಾಯವಾಗುತ್ತದೆ.

www.jayakarnataka.com ಈ ವೆಬ್ ಸೈಟನ್ನು ಯಾರು ಬೇಕಾದರೂ ನೊಡಬಹುದು. ಇಲ್ಲಿ ಪ್ರತೀ ಘಟಕದ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಲಭ್ಯವಿದೆ. ಜಯಕರ್ನಾಟಕ ಯಾಕೆ ಬೇರೆ ಸಂಸ್ಥೆಗಳಿಗಿಂತ ಭಿನ್ನವಾಗಿದೆ? ಯಾಕೆ ಜಯಕರ್ನಾಟಕದ ಸದಸ್ಯರಾಗಬೇಕು? ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಜಯಕರ್ನಾಟಕದ ಸಾಧನೆಗಳ ಪಟ್ಟಿ, ಕನ್ನಡ-ಕರ್ನಾಟಕಕ್ಕಾಗಿ ಮಾಡಿದ ಹೋರಾಟಗಳು, ಆರೋಗ್ಯ ಶಿಬಿರಗಳ ಮಾಹಿತಿ ಸಹ ಇಲ್ಲಿ ಲಭ್ಯವಿದೆ.

ಜಯಕರ್ನಾಟಕದ ವೆಬ್ ಸೈಟ್‌ನ ಇನ್ನೊಂದು ವಿಶೇಷವೆಂದರೆ ಜನರು ತಮ್ಮ ಸಮಸ್ಯೆಗಳನ್ನು ಬರೆದು ಜಯಕರ್ನಾಟಕಕ್ಕೆ ತಿಳಿಸಬಹುದು ಮತ್ತು ಆ ಸಮಸ್ಯೆಗೆ ಸರಿಯಾದ ಪರಿಹಾರ ಅಥವಾ ಮಾರ್ಗದರ್ಶನವನ್ನು ಜಯಕರ್ನಾಟಕದ ವಿವಿಧ ಘಟಕಗಳು ಮಾಡುತ್ತವೆ. "ಅಸಮಾನತೆಯನ್ನು ಅಳಿಸಿ, ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸರಕಾರ ಮತ್ತು ಆಡಳಿತದೊಡನೆ ಹೋರಾಟ ನಡೆಸಿ ಸಮೃದ್ಧ ನಾಡನ್ನು ಕಟ್ಟುವುದೇ-ಜಯಕರ್ನಾಟಕ" ಮೂಲ ಮಂತ್ರ.

Rating
No votes yet

Comments