ಜಾಹೀರಾತಿನ ದುನಿಯಾ...
ಮೊದಲೆಲ್ಲ ನಾವು ಟಿ.ವಿ ಮುಂದೆ ಕುಳಿತರೆ ಕಲರ್ ಕೋಡ್ ಬರ್ತಾ ಇರ್ತಿತ್ತು.. ಕರೆಕ್ಟಾಗಿ ೪ ಗಂಟೆಗೆ ಸಿನೆಮಾ ಶುರು ಆದರೆ ಬ್ರೇಕ್ ಇಲ್ದೆ ಸಿನೆಮಾ ಮುಗಿತಿತ್ತು..
ನಂತರ ಸಿರಿಯಲ್ ಗಳು ಲಗ್ಗೆ ಇಟ್ಟವು. ಅಮೇಲೆ ದೊಡ್ಡ ದೊಡ್ಡ ಕಮರ್ಶಿಯಲ್ ಬ್ರೇಕ್ ಗಳು ಶುರುವಾದವು.. ಜೊತೆಗೆ ಜಾಹೀರಾತು ಶುರುವಾಯಿತು.. ಈಗ ಸಿರಿಯಲ್, ವಾರ್ತೆ ಕಮ್ಮಿ.. ಎಲ್ಲ ಚ್ಯಾನಲ್ ಗಳಲ್ಲೂ ಜಾಹೀರಾತೇ ರಾರಾಜಿಸುತ್ತಿದೆ. ಸಿನೆಮಾ ಏನೋ ಬರುತ್ತೆ... ಆದರೆ ಬ್ರೇಕ್ ಇಲ್ದೇ ಸಿನೆಮಾನೂ ನೋಡೊಕಾಗಲ್ಲ.. ಬರೀ ಜಾಹೀರಾತಿನ ಹಾವಳಿ.ದೊಡ್ಡ ದೊಡ್ಡ ಕಂಪನಿಗಳು ತಮ್ಮ ಬ್ರ್ಯಾಂಡ್ ಇಮೇಜ್ ನ್ನ ಮುಗಿಲೆತ್ತರಕ್ಕೆ ಮುಟ್ಟಿಸಲು ತಮ್ಮಲ್ಲಿಯೇ ಪೈಪೋಟಿ ನಡೆಸಿಕೊಂಡು ದಿನಕ್ಕೊಂದು ಜಾಹೀರಾತು ತರುತ್ತಾ ಇವೆ. ಕೆಲವು ಕಂಪನಿಗಳು ಬೇರೆ ಕಂಪನಿಯನ್ನು ಕೆಳಗೆ ತೋರಿಸಿ ಜಾಹೀರಾತು ಮಾಡಿದ್ರೆ ಕೆಲವು ವೀಕ್ಷಕರಲ್ಲಿ ಒಂದು ರೀತಿಯ ಭಯ ಹುಟ್ಟಿಸಿ ಜಾಹೀರಾತು ಮಾಡುತ್ತಿವೆ !
ಇನ್ನು ಯಾವುದೇ ಜಾಹೀರಾತು ತೆಗೆದುಕೊಂಡರೂ ಅದರಲ್ಲಿ ಮಕ್ಕಶಿರೋದು ಸಾಮಾನ್ಯ.. ಮಕ್ಕಳನ್ನು ಒಂದು ರೀತಿಯ ಸೆಂಟರ್ ಆಫ್ ಅಟ್ರ್ಯಾಕ್ಷನ್ ಮಾಡಿಕೊಂಡು ಜಾಹೀರಾತು ಮಾಡ್ತಿರೋದು ಸರ್ವೇ ಸಮಾನ್ಯ ವಾಗಿಬಿಟ್ಟಿದೆ. ಅದು ಪಿಜ್ಜಾ,ಬರ್ಗರ್, ರಿಯಲ್ ಎಸ್ಟೇಟ್, ಕಾರ್, ಬೈಕ್,ಆಗಿರ್ಲಿ.. ಪೇಸ್ಟ್, ಸೋಪ್ , ಸಿಮೆಂಟ್ ಆಗಿರಲಿ... ಎಲ್ಲಾ ರೀತಿಯ Ad ನಲ್ಲಿಯೂ ಮಕ್ಕಳನ್ನು ಬಳಸಿಕೊಳ್ಳಲಾಗ್ತಿದೆ..
ಪಿಜ್ಜ ಬರ್ಗರ್ ನಂಥಹ ತಿನಿಸುಗಳ ಬಗ್ಗೆ ಮಕ್ಕಳ ತಲೆಯಲ್ಲಿ ತುಂಬುವುದು ಎಷ್ಟು ಸರಿ?... ನಾನು ಇದೇನು ದೊಡ್ಡ ಸಮಸ್ಯೆ ಅಂತ ಹೇಳ್ತಿಲ್ಲ.. ಆದರೆ ಮಕ್ಕಳಿಗೆ ಇಂಥಹ ಆಹಾರ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡಿ, ನಾವೇ ಅವರನ್ನ ತಪ್ಪು ದಾರಿಗೆ ಎಳೆಯುತ್ತಿದ್ದೇವೆ ಅನ್ಸುತ್ತೆ.. ಇನ್ನು ಕಾರ್, ಬೈಕ್, ಇನ್ಶೂರೆನ್ಸ್ , ಬ್ಯಾಂಕ್ ಗಳ Ad
ನಲ್ಲಿಯೂ ಮಕ್ಕಳನ್ನ ಬಳಸಲಾಗ್ತಿದೆ. ಇದು ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ.. !
ಸರ್ಕಾರ ರಿಯಾಲಿಟಿ ಶೋನಲ್ಲಿ ಮಕ್ಕಳು ಭಾಗವಹಿಸಬಾರದು , ಭಾಗವಹಿಸಿದ್ರೂ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದೆಲ್ಲ ರೂಲ್ಸ್ ಹಾಕ್ತಿದೆ.. ಈ ಜಾಹೀರಾತುಗಳನ್ನ ಕೇಳೋರ್ಯಾರು?
Comments
ಉ: ಜಾಹೀರಾತಿನ ದುನಿಯಾ...
In reply to ಉ: ಜಾಹೀರಾತಿನ ದುನಿಯಾ... by shaamala
ಉ: ಜಾಹೀರಾತಿನ ದುನಿಯಾ...
In reply to ಉ: ಜಾಹೀರಾತಿನ ದುನಿಯಾ... by shaamala
ಉ: ಜಾಹೀರಾತಿನ ದುನಿಯಾ...
In reply to ಉ: ಜಾಹೀರಾತಿನ ದುನಿಯಾ... by shaamala
ಉ: ಜಾಹೀರಾತಿನ ದುನಿಯಾ...
ಉ: ಜಾಹೀರಾತಿನ ದುನಿಯಾ...
ಉ: ಜಾಹೀರಾತಿನ ದುನಿಯಾ...
In reply to ಉ: ಜಾಹೀರಾತಿನ ದುನಿಯಾ... by asuhegde
ಉ: ಜಾಹೀರಾತಿನ ದುನಿಯಾ...
In reply to ಉ: ಜಾಹೀರಾತಿನ ದುನಿಯಾ... by roopa kotwal
ಉ: ಜಾಹೀರಾತಿನ ದುನಿಯಾ...
ಉ: ಜಾಹೀರಾತಿನ ದುನಿಯಾ...
In reply to ಉ: ಜಾಹೀರಾತಿನ ದುನಿಯಾ... by prati
ಉ: ಜಾಹೀರಾತಿನ ದುನಿಯಾ...