ಜಿ-ಮೈಲ್ನಲ್ಲಿ ಹೊಸ ರೀತಿಯಲ್ಲಿ ಒಮ್ಮೆಗೆ ಹಲವು ಮಿಂಚೆ ರಚಿಸಿ
ಸ್ನೇಹಿತರೇ,
ಜಿ-ಮೈಲ್ನಲ್ಲಿ ಹೊಸ ರೀತಿಯಲ್ಲಿ ಮಿಂಚೆ ರಚಿಸಿ.. ಈಗ. ಏನಿದು ವಿಶೇಷ? ಹೌದು.. ಎಷ್ಟೋ ಬಾರಿ ನೀವು ಮಿಂಚೆ ರಚಿಸುವಾಗ, ನಿಮಗನ್ನಿಸಿರಬಹುದು. ಛೇ..! ಕೆಲವು ವಿಚಾರ ಹಿಂದಿನ ಮೈಲ್ಗಳಲ್ಲಿ ನೋಡಿ ಕಾಪಿ(ಪ್ರತಿ) ಮಾಡಿಕೊಳ್ಳೋದಿತ್ತು. ಕಳುಹಿಸಿದ ಮೈಲ್ (Sent Mail)ನಲ್ಲಿ ಇರೋ ವಿಚಾರ ಒಂದಷ್ಟು ಪ್ರತಿ ಮಾಡಿಕೊಳ್ಳೋದಿತ್ತು. ಅದ್ಯಾವುದೋ ಮೈಲ್ನಲ್ಲಿ ಇದಕ್ಕೆ ಸಂಬಂಧಿಸಿದ ವಿಚಾರ ಇತ್ತು. ಅದನ್ನೊಮ್ಮೆ ನೋಡಬೇಕಿತ್ತು. ಅದ್ಯಾವುದೋ ಮೇಲ್ ಮರೆತು ಹೋಯ್ತು.. ಅದನ್ನ ಹುಡುಕಿ, ಅದರಲ್ಲಿನ ವಿಚಾರ ಓದಿ ಅದಕ್ಕೆ ಪೂರಕ ಉತ್ತರ ಕೊಡೋದಿತ್ತು ಅಥವಾ ಅದರಲ್ಲಿನ ವಿಚಾರ ಸ್ವಲ್ಪ ಇಲ್ಲೂ ಪ್ರತಿ ಮಾಡಿ ಹಾಕೋ ಅವಶ್ಯಕತೆ ಇತ್ತು ಅಂತ ನಿಮಗನ್ನಿಸಿರಬಹುದು. ಆಗ ನಿಮಗಾಗುತ್ತಿದ್ದ ಸಮಸ್ಯೆ.. ನಿಮ್ಮ ಇನ್ಬಾಕ್ಸ್ ಅಥವಾ ಕಳುಹಿಸಿದ ಮಿಂಚೆಯ ಫೋಲ್ಡರ್ ಯಾವುದಾದರು ಒಂದು ತೆರೆಯಬಹುದು ಅಥವಾ ನಿಮ್ಮ ಮಿಂಚೆ ಬರೆಯುವಿಕೆಯ ಒಂದು ಕೆಲಸ ಒಮ್ಮೆ ಮಾತ್ರ ಮಾಡಬಹುದು. ಎಲ್ಲವೂ ಒಟ್ಟಿಗೆ ಮಾಡಬೇಕೆಂದಲ್ಲಿ ಬ್ರೌಸರ್ನ ಬೇರೆ ಬೇರೆ ಕಿಟಕಿಗಳನ್ನು ತೆರೆದು ಕೆಲಸ ಮಾಡಬೇಕಿತ್ತು. ಈಗ ಗೂಗಲ್ ನಿಮಗೆ ಇದಕ್ಕೆ ಪರಿಹಾರ ಕೊಟ್ಟಿದೆ.
ನೋಡಿ..! ಈ ಕೆಳಗಿನ ವಿಚಾರಗಳನ್ನು.
ಇವತ್ತು ನೀವು ನಿಮ್ಮ ಜಿ-ಮೈಲ್ನಲ್ಲಿ "Compose" ಒತ್ತಿದಾಗ ನಿಮಗೆ ತೆರೆಯೋ ಕಿಟಕಿ ಇಂತಿರಬಹುದು.
"Try it now" ಅನ್ನೋ ಬಟನ್ ಒತ್ತಿ. ಅಂದರೆ ನೀವು ಹೊಸ ಮಿಂಚೆ ರಚನೆ ಪದ್ದತಿಯನ್ನು ಪರೀಕ್ಷಿಸಬಯಸುತ್ತೀರಾ ಅಂತ ಜಿ-ಮೈಲ್ ಕೇಳುತ್ತಿದೆ. ಹೂಂ ಅನ್ನೋದಾದಲ್ಲಿ.. ಪ್ರಯತ್ನ
ಮಾಡಿ ನೋಡಿ..! :)
ನಂತರ ನಿಮಗೆ ಕಾಣೋ ಕಿಟಕಿಯಲ್ಲಿ ನಿಮ್ಮನ್ನ ಜಿ-ಮೈಲ್ ಇನ್ನು ಮುಂದಿನಿಂದ ನಿಮ್ಮ ಮಿಂಚೆ ರಚನೆ ಹೇಗೆ ಕಾಣುತ್ತೆ ಅನ್ನೋದನ್ನ ತಿಳಿಸುತ್ತೆ..!
ಮೇಲೆ ಎಡಬದಿಗೆ ನೀವು ಮಿಂಚೆ ಕಳುಹಿಸ ಬಯಸುವವರ ಮಿಂಚೆವಿಳಾಸ ಹಾಕಲು ಜಾಗ, ಅಲ್ಲೇ ಬಲಬದಿಯಲ್ಲಿ ನಿಮಗೆ ಪ್ರತಿ ಕಳುಹಿಸಲು CC ಮತ್ತು BCC.
ಕೊನೆಗೆ ಇರುವ "From" ಆಯ್ಕೆ ನೀವು ಇತರೇ ಧೃಡೀಕರಿಸಲ್ಪಟ್ಟ ಮಿಂಚೆ ವಿಳಾಸಗಳ ಮೂಲಕ ಕಳುಹಿಸುವ ಆಯ್ಕೆ ಮಾಡಿಕೊಂಡಿದಲ್ಲಿ ನಿಮಗೆ ಸಿಗುತ್ತದೆ.
ನಂತರದ ಸಾಲಿನಲ್ಲಿ ನಿಮ್ಮ ಮಿಂಚೆಯ "ವಿಷಯ". ನಂತರ ನಿಮ್ಮ ಮಿಂಚೆಯ ಮುಖ್ಯ ಬರಹದ ಭಾಗ.
ಇನ್ನು ಕೆಳಗೆ ನಿಮ್ಮ ಇತರೆ ಆಯ್ಕೆಗಳು. "SEND" ಕಳುಹಿಸಲು ಒತ್ತುಗುಂಡಿ (ಬಟನ್} ಎಡಭಾಗದಲ್ಲಿ.
ಅದರ ಪಕ್ಕದಲ್ಲೇ.. ನಿಮ್ಮ ಪತ್ರದ ಅಕ್ಷರಗಳ ರೂಪ (Font Format)ಗಳ ಆಯ್ಕೆ.
ನಂತರದ ಆಯ್ಕೆ ಲಗತ್ತು ಕಡತಗಳಿಗಾಗಿ (Attachment Files).
ನಂತರ ಸಣ್ಣದೊಂದು " + " ಚಿಹ್ನೆ. ಅದರ ಮೇಲೆ ನಿಮ್ಮ ಮೌಸ್(ಇಲಿ)ಯ ಕರ್ಸರ್ ತೆಗೆದುಕೊಂಡುಹೋಗುತ್ತಿದ್ದಂತೆ, ಅದು ವಿಶಾಲಗೊಳ್ಳುತ್ತದೆ ಹಾಗು ಉಳಿದ ಆಯ್ಕೆಗಳು ಕಾಣತೊಡಗುತ್ತವೆ. ಚಿತ್ರ ಸೇರಿಸುವ ಆಯ್ಕೆ, ಕೊಂಡಿ ಲಗತ್ತಿಸೋ ಆಯ್ಕೆ, ನಿಮ್ಮ ಸ್ಮೈಲಿ(Emoticon) ಹಾಕೋ ಆಯ್ಕೆ [ಇನ್ನೂ ಬಂದಿಲ್ಲ, ಸದ್ಯದಲ್ಲೇ ಬರಲಿದೆ], ಹಾಗೇ ಕೊನೆಗೆ ಆಹ್ವಾನ ನೀಡೋ ಆಯ್ಕೆ (ಗೂಗಲ್ ಕ್ಯಾಲೆಂಡರ್ ಮೂಲಕ ನಿರ್ವಹಿಸಲಾಗುವ ಆಯ್ಕೆ). ಕೊನೆಗೆ ಬಲ ಮೂಲೆಯಲ್ಲಿ ಮೊದಲು ನಿಮ್ಮ ಕರಡು ಸಂದೇಶ ತಿರಸ್ಕರಿಸೋ ಆಯ್ಕೆ. ಅದರ ಪಕ್ಕದಲ್ಲೇ, ಹೆಚ್ಚಿನ ಆಯ್ಕೆಯ ಬಟನ್. ಅದನ್ನ ಒತ್ತಿದಾಗ ನಿಮಗೆ ಕಾಣೋ ಆಯ್ಕೆಗಳೆಂದರೆ,
"ಹಳೆಯ ರಚನಾ ವಿಧಿಗೆ ಹಿಂತಿರುಗು"ವ ಆಯ್ಕೆ,
"Canned Response" (ಸೆಟ್ಟಿಂಗ್ಸ್ನಲ್ಲಿನ ಲ್ಯಾಬ್ನ ಆಯ್ಕೆ ಆಯ್ದುಕೊಂಡಿದಲ್ಲಿ) [ಈ ಆಯ್ಕೆ ಸದ್ಯದಲ್ಲೇ ಬರಲಿದೆ]
"Label" ಪಟ್ಟಿಗಳ ಆಯ್ಕೆ [ಈ ಆಯ್ಕೆ ಸದ್ಯದಲ್ಲೇ ಬರಲಿದೆ]
"Plain Text Mode" ಸರಳ ಪಠ್ಯದ ಆಯ್ಕೆ [ಲಭ್ಯವಿದೆ]
"Print" ಮುದ್ರಿಸಲು ಆಯ್ಕೆ [ಈ ಆಯ್ಕೆ ಸದ್ಯದಲ್ಲೇ ಬರಲಿದೆ]
"Check Spelling" ಕಾಗುಣಿತ ಪರೀಕ್ಷೆ [ಲಭ್ಯವಿದೆ]
ಅಂದರೆ ಈ ಎಲ್ಲಾ ಸೌಲಭ್ಯಗಳನ್ನೊಳಗೊಂಡ ನಿಮ್ಮ ಮಿಂಚೆ ಸಂಯೋಜನೆಯ ಕಿಟಕಿ ನಿಮಗೆ ಬೇಡವೆಂದಲ್ಲಿ ಮುಚ್ಚಬೇಕೆನಿಸಿದಾಗ ಮುಚ್ಚಲು ಅತ್ಯಂತ ಮೇಲಿನ ಕಪ್ಪು ಪಟ್ಟಿಯಲ್ಲಿನ "X" ಚಿಹ್ನೆ ನಿಮಗಾಗಿ. ಇಲ್ಲಾ ಇದನ್ನು ಹೊಸದೊಂದು ಕಿಟಕಿಯಲ್ಲಿ ನೋಡಬೇಕೆನಿಸದಾಗ, ಅದಕ್ಕಾಗಿ ಆಯ್ಕೆ, ಅದರ ಮುಂಚಿನ ಆಯ್ಕೆ "Pop out" ಅನ್ನುವ ಆಯ್ಕೆ. ಇಲ್ಲ ಸದ್ಯ ಇದನ್ನು ಸಣ್ಣದಾಗಿಸೋಣ/ಅಥವಾ ಮುಚ್ಚಿಟ್ಟಿರೋಣ ಅನ್ನಿಸಿದಲ್ಲಿ ನಿಮಗಾಗಿ ಆಯ್ಕೆ "Minimize"ಗಾಗಿನ ಆಯ್ಕೆಗೆ " - " ಚಿಹ್ನೆ.
ಇನ್ನು ಏನೇನು ವಿಶೇಷವಿದೆ ಇದರಲ್ಲಿ ಅನ್ನುವವರಿಗಾಗಿ ಕೆಲವು ವಿಚಾರಗಳು.:
ಗೂಗಲ್ನವರು ಹೇಳುವಂತೆ, ಇದು ತೆರೆ(Screen)ಯ ಕಡಿಮೆ ಜಾಗವನ್ನ ಆಕ್ರಮಿಸುತ್ತೆ. ಬಳಸಲು ಸರಳವಾಗಿದೆ. ಚಾಟ್ಬಾಕ್ಸ್ ರೀತಯಲ್ಲಿ ಕೆಳಗೆ ತೆರೆದುಕೊಳ್ಳುತ್ತದೆ. ಇತರೇ ಕೆಲಸಗಳನ್ನೂ ಮಾಡಲು ಯಾವುದೇ ಅಡೆತಡೆ ಇರದು. ಒಮ್ಮೆಯೇ, ಅನೇಕ ಸಂಯೋಜನೆಗಳು ಸಾಧ್ಯ. ಅದೇ ಸಮಯದಲ್ಲಿ ಇನ್ಯಾವುದೋ ಮಿಂಚೆಗೆ ಉತ್ತರಿಸಬಹುದು. ಅಥವಾ ಅದನ್ನು ಇನ್ನೊಬ್ಬರಿಗೆ ಮುಂದೂಡಬಹುದು (Forward). ಈ ಸೌಲಭ್ಯ ಅತ್ಯಂತ ವಿಶೇಷವಾಗಿದೆ. ಕೇಳಗಿನ ಚಿತ್ರ ಗಮನಿಸಿದರೆ ನಿಮಗೆ ಅರ್ಥ ಆಗಬಹುದು. ಒಟ್ಟಿಗೆ ನೀವು ಅನೇಕ ಕರಡು ಸಂಯೋಜನಗಳನ್ನು ಇಟ್ಟುಕೊಳ್ಳುವುದಲ್ಲದೇ, ಅದೇ ಸಮಯದಲ್ಲಿ ಇನ್ನೊಂದು ಮಿಂಚೆಗೆ ಉತ್ತರಿಸಲು ಪ್ರಯತ್ನಿಸಿದಾಗ, ಮೊದಲ ಬಾರಿ ಅದು ನಿಮಗೆ ನಿಮ್ಮ ಈ ಹೊಸ ಆಯ್ಕೆಯಿಂದಾಗಿ ಬದಲಾದ ಸಂಯೋಜನಾ ರೀತಿಯ ಬಗ್ಗೆ ಒಮ್ಮೆ ಎಚ್ಚರಿಸುತ್ತದೆ. ನಂತರ ಎಂದಿನಂತೆ ನಿಮ್ಮ ಪ್ರತ್ಯುತ್ತರದ ಪೆಟ್ಟಿಗೆಯಲ್ಲಿ ಸ್ವಲ್ಪ ವಿಭಿನ್ನ ಆದರೆ ಸರಳವಾಗಿರೋ ಆಯ್ಕೆಗಳು ತರೆಯಲ್ಪಡುತ್ತವೆ.
ನೀವು ಆ ಆಯ್ಕೆಗಳಲ್ಲಿ ಕೆಲವನ್ನ ಚಿತ್ರದಲ್ಲಿ ನೋಡಬಹುದು. "Reply To", "Reply to All", "Forward" ಅಷ್ಟೇ ಅಲ್ಲದೆ, ಇದೇ ಮಿಂಚೆಯನ್ನ ಹೊಸ "ವಿಷಯ"ದೊಂದಿಗೆ ಹೊಸದಾಗಿ ಶುರುಮಾಡೋ ಇಚ್ಛೆ ಇದ್ದಲ್ಲಿ ಅದಕ್ಕೂ ಆಯ್ಕೆ ಇದೆ. ಇನ್ನು ಹೆಚ್ಚಿಗೆ ಇನ್ನೇನು ಸಿಗಬಹುದು ಅನ್ನೋದು ಮುಂದೆ ತಿಳಿಯಬಹುದು.
ಹಾಗೇ, ಗೂಗಲ್ನವರದ್ದೇ ಬ್ಲಾಗಿನಿಂದ ಆರಿಸಿ ಅವರದ್ದೇ ಅನುವಾದ ಸಾಧನವನ್ನೂ ಬಳಸಿ (ಬಹುಪಾಲನ್ನ ತಿದ್ದಿ.. :)) ಅವರ ಮಾತುಗಳನ್ನ ಈ ಕೆಳಗೆ ನೀಡೋ ಪ್ರಯತ್ನ ಮಾಡಿದ್ದೇನೆ.
ಅವರ ಅವಶ್ಯ ಕೊಂಡಿಗಳನ್ನು ಕೂಡ ಹಾಗೇ ನೀಡಿದ್ದೇನೆ.
"ಗೂಗಲ್ ಆಪ್ಸ್ ಅಪಡೇಟ್ ಅಲರ್ಟ್ಸ್"ನಿಂದ ಪ್ರಕಟವಾದ ಬ್ಲಾಗ ಲೇಖನ "New Compose Gmail Experience". ಅದರ ಕೊಂಡಿ ಈ ಕೆಳಗಿದೆ.
ಹೊಸ Gmail ರಚನೆಯ ಅನುಭವ
10/30/2012 ರಂದು ಬಿಡುಗಡೆಯಾಗಿದೆ
ನಾವು ಯಾವಾಗಲೂ ಜಿಮೈಲ್ನ್ನು ವೇಗ ಮಾಡಲು ಪ್ರಯತ್ನಿಸುತ್ತಿರುತ್ತೇವೆ, ಆದ್ದರಿಂದ ಇಂದು ನಾವು, ನಿಮ್ಮ ಸಮಯ ಉಳಿಸುವ, ಕಡಿಮೆ ತೆರೆ(screen)ಯ ಜಾಗವನ್ನು ಬಳಸಿಕೊಳ್ಳುವ, ಮತ್ತು ಬಳಸಲು ಸರಳ ಎಂದೆನಿಸುವ ರೀತಿಯಲ್ಲಿ ಮರುವಿನ್ಯಾಸಗೊಳಿ ನವ್ಯ ಸಂಯೋಜನಾ ಅನುಭವವನ್ನು ಪರಿಚಯಿಸುವ ಮಾಡುತ್ತಿದ್ದೇವೆ. ಹೊಸ ಸಂಯೋಜನೆ ಅನುಭವವನ್ನು ಕೇವಲ ಒಂದು ಚಾಟ್ ಬಾಕ್ಸ್ ನಂತಹ ವಿಂಡೋವನ್ನು, ನಿಮ್ಮ ಇನ್ಬಾಕ್ಸ್ನ ಕೆಳಭಾಗದಲ್ಲಿ ತೆರೆಯುತ್ತದೆ. ನಿಮ್ಮ ಇನ್ಬಾಕ್ಸ್ನಲ್ಲಿ ಹುಡುಕುತ್ತಾ, ಒಮ್ಮೆಯೇ ಅನೇಕ ಸಂದೇಶಗಳನ್ನು ರಚಿಸಬಹುದಾಗಿದೆ ಮತ್ತು ನಿಮ್ಮ ಹೊಸ ಕರಡು ಮುಕ್ತ ಇರಿಸಿಕೊಂಡು ಸಹ ಇತರೇ ಎಲ್ಲಾ ಸಂದೇಶಗಳನ್ನು ಪ್ರತ್ಯುತ್ತರಿಸಬಹುದಾಗಿದೆ
ಟ್ರ್ಯಾಕ್ ಬಿಡುಗಡೆ:
ವೇಗವಾದ
ಒಳಗೊಂಡ ಆವೃತ್ತಿಗಳು:
Google Apps, ವ್ಯವಹಾರ, ಸರ್ಕಾರ ಮತ್ತು ಶಿಕ್ಷಣ ಗಾಗಿ Google Apps
ಹೆಚ್ಚಿನ ಮಾಹಿತಿಗಾಗಿ:
ಸ್ಹೇಹಿತರೇ,
ಇದರ ಬಗೆಗಿನ ಯಾವುದೇ ಅನುಮಾನಕ್ಕೆ ನಿಮ್ಮ ಪ್ರಶ್ನೆಗಳನ್ನ ಕೆಳಗೆ ಕೇಳಬಹುದು. ನನ್ನ ಸಮಯಾವಕಾಶನುಗುಣವಾಗಿ ಉತ್ತರಿಸುವೆ.
ನಿಮ್ಮೊಲವಿನ,
-- ಸತ್ಯ :-)
Comments
ಆತ್ಮೀಯ ಸತ್ಯ ರವರೆ,
ಆತ್ಮೀಯ ಸತ್ಯ ರವರೆ,
ನೀವು ಕನ್ನಡದಲ್ಲಿ ನೀಡಿರುವ ಮಾಹಿತಿ ರಾಜ್ಯೋತ್ಸವದ ಆಚರಣೆಗೆ ಪೂರಕವಾದಂತಿದೆ. ನಿಮ್ಮ ಉತ್ತಮ ಪ್ರಸ್ತುತಿಗೆ ಧನ್ಯವಾದಗಳು.
In reply to ಆತ್ಮೀಯ ಸತ್ಯ ರವರೆ, by Prakash Narasimhaiya
ನಮಸ್ತೆ ಪ್ರಕಾಶ್ರವರೇ..!
ನಮಸ್ತೆ ಪ್ರಕಾಶ್ರವರೇ..!
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..!
ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ಇನ್ನೂ ಒಂದು ಮುಖ್ಯವಾದ ವಿಚಾರ ಹಂಚಿಕೊಳ್ಳಬೆಕು ಅಂತ ಅನ್ನಿಸುತ್ತಾ ಇತ್ತು.. ಆದರೆ ಸಮಯದ ಅಭಾವ. ನೋಡುವ.. ಆದಷ್ಟು ಬೇಗ ಸಮಯ ಮತ್ತು ಅವಕಾಶ ಸಿಕ್ಕಲ್ಲಿ ಇನ್ನೊಂದು ಬರಹ ಸೇರಿಸುವ. ಮತ್ತೊಮ್ಮೆ ವಂದನೆಗಳು.
ನಿಮ್ಮೊಲವಿನ,
ಸತ್ಯ.. ;-)