ಜೀವನ ಮತ್ತು ಕರ್ಮ (ಶ್ರೀನರಸಿಂಹ 23)

ಜೀವನ ಮತ್ತು ಕರ್ಮ (ಶ್ರೀನರಸಿಂಹ 23)

ಅರ್ಥವಿಲ್ಲದ ವ್ಯರ್ಥ  ಜೀವನವಿದು ಎಂದೆನಬೇಡ

ಪ್ರಾಪ್ತ ಕರ್ಮಗಳನು ಮರೆತು,ಕೆಟ್ಟೆನೆಂದೆನಬೇಡ

ಕಳೆದ ಕಾಲವದು ಮತ್ತೆ ದೊರಕದೆಂಬುದನರಿತಿರು

ಜೀವನವಿದು ಕ್ಷಣಿಕವು ಎಂಬುದ ನೀ ಮರೆಯದಿರು

 

ಜ್ಞಾನಾರ್ಜನೆ ಕಾಲದಲಿ ಸುಖವನ್ನು ಬಯಸದಿರು

ಪಡೆದ ಕಾಯಕವ ನೀ ಹೀನತೆಯಲಿ ನೋಡದಿರು

ಮಡದಿ,ಮಕ್ಕಳನು ಕೈಬಿಡದೆ ಪಾಲಿಪುದೆ ಧರ್ಮ

ಪ್ರಾಪ್ತ ಕರ್ಮಗಳ ಆಚರಿಪುದೆ ಜೀವನದ ಮರ್ಮ

 

ಪಡೆದ ಕರ್ತವ್ಯಗಳ ಬೇಸರಿಪದೆ ಮಾಡಬೇಕು ನೀ ನಿತ್ಯ

ಕೇಳದೆ ನಿನ್ನಿಷ್ಟಗಳನಿಡೇರಿಸುವ ಶ್ರೀನರಸಿಂಹ ಇದು ಸತ್ಯ
Rating
No votes yet

Comments