'ಟೈಮ್ಸ್ ಆಫ್ ಇಂಡಿಯ ಪತ್ರಿಕೆ ತನ್ನ ೧೭೫ ನೆಯ ವರ್ಷದ ಆಚರಣೆಯನ್ನು ಅತಿ ಸಂದರ್ಭೋಚಿತವಾಗಿ ನೆರವೆರಿಸಿಕೊಳ್ಳುತ್ತಿದೆ'.
ಪ್ರತಿದಿನವೂ ಹಲವು ರೋಚಕ, ಮರೆಯಲಾರದ ಸಂಗತಿಗಳನ್ನು ಸಚಿತ್ರವಾಗಿ ದಾಖಲಿಸುತ್ತಿದೆ.
ಲಾರ್ಡ್ಸ್ ನಲ್ಲಿ ಭಾರತದ ಒಂದು ಟೆಸ್ಟ್ ಮ್ಯಾಚ್ ಸರಣಿ :
ಭಾರತ ತನ್ನ ಪ್ರಥಮ ಟೆಸ್ಟ್ ಮ್ಯಾಚ್ ನ್ನು ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ, ೧೯೩೨ ರ,ಜೂನ್ ತಿಂಗಳ ೨೫ ರ ಒಂದು ಕ್ರಿಕೆಟ್ ಇತಿಹಾಸದ ಒಂದು ಸುಂದರ ಕ್ಷಣವಾಗಿತ್ತು. ವಿಶ್ವಕಪ್ ನ್ನೂ ೧೯೮೩ ರ, ಜೂನ್ ೨೫ ರಂದು ಗೆದ್ದರು. ಅದೇ ವರ್ಷದ ಜೂನ್ ೨೫ ರಂದು ಆಡಿದ ಟೆಸ್ಟ್ ಮ್ಯಾಚಿನಲ್ಲಿ ಭಾರತ ಅತಿ ಕಡಿಮೆ ಸ್ಕೋರ್, (೪೨ ರನ್ಸ್ ಗಳಿಗೆ) ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು.
'ಬೊಂಬಾಯಿನ ಬ್ರಬೋರ್ನ್ಸ್ ಸ್ಟೇಡಿಯಂ' ೧೯೩೭ ರ, ಡಿಸೆಂಬರ್ ನಲ್ಲಿ ಉದ್ಘಾಟಿಸಿದರು. ಲಾರ್ಡ್ ಟೆನ್ನಿಸನ್ ಎಂಬ ಇಂಗ್ಲೀಷ್ ಮಹಾಕವಿಯ ನೆನಪಿನಲ್ಲಿ. ಆಗ ಟೈಮ್ಸ್ ಆಫ್ ಇಂಡಿಯ ಪತ್ರಿಕೆ ೧೬ ಪುಟಗಳ ಒಂದು ವಿಶೇಷ ಸಂಚಿಕೆಯನ್ನು ಹೊರತಂದಿತ್ತು.
ಮಹಾನ್ ಕ್ರಿಕೆಟಿಗ ದುಲೀಪ್ ಸಿಂಗ್ ಜೀ ಮರಣ :
ಕ್ರಿಕೆಟ್ ಧುರೀಣ ಭಾರತ ಸಂಜಾತ ದುಲೀಪ್ ಸಿಂಗ್ ಜೀರವರ ಮರಣವನ್ನು ೧೯೫೯ ರ, ಡಿಸೆಂಬರ್, ೫ ರಂದು, ವಿಶ್ವದ ಕ್ರಿಕೆಟ್ ಪ್ರಿಯರೆಲ್ಲಾ ಅತಿ ವಿಷಾದಿಸಿದರು. ಸುರಾಷ್ಟ್ರ-ಬರೋಡಾ ಮಧ್ಯೆ ರಾಂಜೀ ಟ್ರೋಫಿ ಪಂದ್ಯ ನಡಿಯಿತು. ೨೫೨ ರನ್ಸ್ ಮೊದಲ ಇನ್ನಿಂಗ್ಸ್ಸ್ ನಲ್ಲಿ ೨೪ ರನ್ನಿಗೆ ೨ ವಿಕೆಟ್ ಪಡೆದಿದ್ದರು. ದುಲೀಪ್ ಸಿಂಗರ ಮರಣವಾರ್ತೆ ಕೇಳಿ ಆಗಲೇ ತಮ್ಮ ಇನ್ನಿಂಗ್ಸ್ ನಲ್ಲಿ ಮುಂದಿದ್ದ ಸೌರಾಷ್ಟ್ರ ಪಂದ್ಯವನ್ನು ಬಿಟ್ಟುಕೊಟ್ಟರು ಹೀಗೆ ಸೌರಾಷ್ಟ್ರ ತಂಡ, ಇಂಗ್ಲೆಂಡ್ ನ ವಿಖ್ಯಾತ ಕವಿ, ಲಾರ್ಡ್ ಟೆನ್ನಿಸನ್, ಎಫ್.ಆರ್.ಎಸ್; ರವರಿಗೆ ತಮ್ಮ ಗೌರವವನ್ನು ತೊರಿಸಿದರು.
ತೆಂದುಲ್ಕರ್ ಎಂಬ ಯುವ ಪ್ರತಿಭೆ :
'ಟೈಮ್ಸ್ ಆಫ್ ಇಂಡಿಯ'ದಲ್ಲಿ ವರದಿಯಾದ ಪ್ರಕಾರ, ೧೯೮೯ ರಲ್ಲಿ,೧೬ ವರ್ಷದ ತೆಂದುಲ್ಕರ್ ಎಂಬ ಒಬ್ಬ ಎಳೆಯ ಕ್ರಿಕೆಟ್ ಪ್ರತಿಭೆಯನ್ನು ವಿಶ್ವದ ಮುಂದೆ ತಂದರು. ಮುಂದೆ ಈ ಲಿಟಲ್ ಮಾಸ್ಟರ್, ಟೆಸ್ಟ್ ಪ್ಲೇಯರ್ ಮೊಟ್ಟ ಮೊದಲು ಪಾದಾರ್ಪಣೆ, ಪಾಕಿಸ್ತಾನದ ವಿರುದ್ಧ ಅಬ್ದುಲ್ ಕಾದರ್ ಬೋಲಿಂಗ್ ನ್ನು ಎದುರಿಸಿದಾಗ, ೩ ಸಿಕ್ಸರ್ ಗಳನ್ನು ಬಾರಿಸಿ ಅಲ್ಲಿದ್ದ ಕ್ರಿಕೆಟ್ ಪ್ರಿಯರನ್ನೆಲ್ಲಾ ಚಕಿತಗೊಳಿಸಿದ್ದರು.
೧೯೭೧ ರಲ್ಲಿ ಪ್ರಪ್ರಥಮ ವಿಜಯ :
'ಕಪ್ತಾನ್ ಅಜಿತ್ ವಾಡೆಕರ್', ಮತ್ತು ಅವರ ಸಂಗಡಿಗರು ಮೊದಲಬಾರಿಗೆ ೧-೦ ಸೀರೀಸ್ ಗೆದ್ದು ಒಂದು ದಾಖಲೆಯನ್ನು ಸ್ಥಾಪಿಸಿದರು. ಸನ್.೧೮೮೬ ರ, ಮೊದಲ ಪಾರ್ಸಿ ಆಟಗಾರರ ಟೀಮ್, ಇಂಗ್ಲೆಂಡ್ ಗೆ ಟೂರ್ ಹೋದಾಗ, ೧೯ ಪಂದ್ಯ ಸೋತರು, ೮ ಡ್ರಾ ಆಯಿತು. ೧ ಮ್ಯಾಚ್ ಗೆದ್ದರು.ಮತ್ತೆ ಎರಡನೆಯ ಸಲ, ೧೮೮೮ ರ ಟೂರ್ ನಲ್ಲಿ, ೮ ಪಂದ್ಯಗಳಲ್ಲಿ ಗೆದ್ದರು. ೧೧ ಸೊತರು. ೧೨ ಡ್ರಾ ಆಯಿತು.
ಗವಾಸ್ಕರ್ ಎಂಬ ಸಿಡಿಮದ್ದು :
ವೆಸ್ಟ್ ಇಂಡೀಸ್ ಭಾರತದ ವಿರುಧ್ಧ ಆಡಿದ ಮ್ಯಾಚ್ ನಲ್ಲಿ ಅತಿ ವೇಗಿ ಬ್ಯಾಟ್ಸ್ ಮನ್, 'ಸುನಿಲ್ ಗವಾಸ್ಕರ್' ಪ್ರತಿಭೆಯ ಅನಾವರಣವಾಯಿತು.
-ಸಂಗ್ರಹ : ಹೊರಂಲವೆಂ
Rating