`ಟ್ಯಾಂಗಲ್ಡ್ ' ಎಂಬ ಸುಂದರ ಸಿನೆಮಾ

`ಟ್ಯಾಂಗಲ್ಡ್ ' ಎಂಬ ಸುಂದರ ಸಿನೆಮಾ

ಚಿತ್ರ ಜಗತ್ತಿನ ಕ್ಯಾನ್ ವಾಸ್ ತುಂಬಾ ಸುಂದರ.ಬೆಳ್ಳನೆಯ ಬೆಳ್ಳಿ ಪರದೆ ಮೇಲೆ ಚಿತ್ರ ರಾರಾಜಿ ಗೆದ್ದಾಗ ಇನ್ನು ಚೆಂದ. ಆದ್ರೆ,ಚಿತ್ರವನ್ನ ಚಿತ್ರಕಲಾವಿದನ ಚಿತ್ರದಂತೆ ಇನ್ನು ಯಾರು ತೆರೆ ಮೇಲೆ ತಂದಂತಿಲ್ಲ. ಇಲ್ಲವೇ ಅಂತಹ ಪ್ರಯೋಗಗಳು ಈ ಹಿಂದೆ ಆಗಿವೆಯೋ ಏನೋ.ಅಷ್ಟೊಂದು ಹಿಂದಕ್ಕೆ ವಿಚಾರವಂತು ಮಾಡಿಲ್ಲ. ಇತ್ತೀಚಿಗೆ ಒಂದು ಇಂಗ್ಲೀಷ್ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಂಡೆ. ರೆಪುಂಜಲ್ ಅನ್ನೊದು ಈ ಚಿತ್ರಕ್ಕೆ ಇಟ್ಟ ಮೊದಲ ಹೆಸರು.ಈಗ ಇದು ಟ್ಯಾಂಗಲ್ಡ್ ಅಂತಲೆ ಪ್ರಮೊಟ್ ಆಗ್ತಾಯಿದೆ...


 ಈ ಒಂದು ಚಿತ್ರದಲ್ಲಿ ಹಲುವ ವಿಶೇಷತೆಗಳಿವೆ. ಅವುಗಳಲ್ಲಿ ಮೊದಲು ಕಂಡುಬರುವುದೇ ಇದಕ್ಕೆ ನೀಡಲಾದ  ಎಫೆಕ್ಟ್. ಥ್ರೀಡಿ ಅನಿಮೇಷನ್ ನಲ್ಲಿ ಸಿದ್ಧವಾಗಿರುವ ಈ ಸಿನೆಮಾಕ್ಕೆ ಪೇಂಟಿಂಗ್ ಸ್ಪರ್ಶ ನೀಡಲಾಗಿದೆ.ಬೆಳ್ಳಿಪರದೆ ಮೇಲೆ ಬರಲಿರುವ ಚಿತ್ರದ ಎಲ್ಲ ಪಾತ್ರಗಳು ಚಿತ್ರಕಲಾವಿದನ ಒಂದು ಸುಂದರ ಕಲ್ಪನೆನೆ ಅನಿಸಿಬಿಡುತ್ತವೆ. ರಾಣಿ ರೆಪುಂಜಲ್ ಪಾತ್ರ ಇಲ್ಲಿ ನಿಜಕ್ಕೂ ಅತೀ ಸುಂದರ.ನಾಯಕನ ಪಾತ್ರಧಾರಿಯೂ ಅಷ್ಟೆ. ಕಲಾವಿದನ ಅದ್ಭುತ ಕಲಾಕೃತಿನೇ ಸರಿ..


 ಇಷ್ಟೊಂದು ಚೆಂದ ಚಿತ್ರದ ಬಗ್ಗೆ ವಿಕಿಪೀಡಿಯಾದಲ್ಲಿ ಮಾಹಿತಿ ದೊರೆಯುತ್ತದೆ. ಯುಟ್ಯೂಬ್ ನಲ್ಲೂ ಚಿತ್ರದ ಟ್ರೈಲರ್ ಲಭ್ಯವಿದೆ. ಹಾಗೆ ಸಿಗೋ ಅನಿಮೇಷನ್ ಚಿತ್ರ ಈಗಲೇ ಏನೂ ತೆರೆಗೆ ಬರುತ್ತಿಲ್ಲ. ಬರುವ ನವೆಂಬರ್ 24 ರಂದು ಬಿಡುಗಡೆಯಾಗ್ತಾಯಿದೆ.ನಥಾನ್ ಗ್ರೇನೋ ಅನ್ನೊರು ಟ್ಯಾಂಗಲ್ಡ್ ಗೆ ಪ್ಲೆಸೆಂಟ್ ಅನಿಸೋ ರೂಪಕೊಟ್ಟಿದ್ದಾರೆ. ಚಿತ್ರದ ವಿಷ್ಯುಲ್  ಕ್ವಾಲಿಟಿ ಯು ಫ್ರೆಂಚ್  ಚಿತ್ರ ಕಲಾವಿದ ಜಿನ್ ಹೊನೋರ್  ಫ್ರಾಗನಾರ್ಡ್ ಬರೆದ ಫೇಮಸ್ `ದಿ ಸ್ವಿಂಗ್' ಪೇಂಟಿಂಗ್ ಹೋಲುತ್ತದೆ.


 ಆದ್ರೆ, ಈ ಚಿತ್ರ ಬಗ್ಗೆ ಇಲ್ಲೇನೆಕ್ಕೆ ಪಸ್ತಾಪ ಅಂತ ನಿಮಗನಿಸಬಹುದು. ಇದಕ್ಕೆ ಕಾರಣ ಚಿತ್ರದ ವಿಷ್ಯುಲ್  ರಿಚ್ ನೆಸ್.ಚಿತ್ರ ಕಲಾವಿದನ ಕಲ್ಪನೆಯಲ್ಲಿ ಅರಳಿದ ಚಿತ್ರದಂತಿರುವ ಈ ಸಿನೆಮಾದ ದೃಶ್ಯಗಳು ತುಂಬಾ ಇಷ್ಟವಾದವು. ಅದಕ್ಕೇನೆ ಇಲ್ಲಿ ಬರೆದದ್ದು. ಈ ಚಿತ್ರ ಬಂದ ಮೇಲೆ ನೋಡ್ತಿನೋ ಇಲ್ವೋ. ಸದ್ಯಕಂತು ಟ್ಯಾಂಗಲ್ಡ್  ಕ್ಯಾರೆಕ್ಟರ್ ಗಳು  ಸುಂದರ  ಅನುಭವ ನೀಡ್ತಾಯಿವೆ...


 -ರೇವನ್ ಪಿ.ಜೇವೂರ್

Rating
No votes yet

Comments