ತಂದೆ-ಮಗು

ತಂದೆ-ಮಗು

ಚಿತ್ರ

 
ತೇಲುತ ನಿಂತಿಹ ದೋಣಿಯು ಕಡಲಲಿ
ಆಡುತ ಕುಳಿತಿಹ ಮಗುವು ಅದರಲಿ
ಅಲೆಗಳ ಅಬ್ಬರದಲಿ ದೋಣಿಯ ಏರಿಳಿತದಲಿ
ಅಲುಗದು ಮಗುವು ಅದರಲಿ
ಆದರೂ ಮಗ್ನವು ಆಟದಲಿ

ಮರೆತಿದೆಯೆ ತಾ ಬಂದ ದಾರಿಯನು
ತಿಳಿಯದೆಯೆ ತಾ ತೇಲುತಿಹೆನೆಂಬುದನು
ಚಿಂತಿಸದೆ ಮಗುವು ತನ್ನೊರ್ತಮಾನವನು
ಬರಲಿರುವ ಭೀಕರ ಅಲೆಗಳ ಭಯವನು

ತಲ್ಲೀನವು ತನ್ನಾಟದಲಿ
ಮರೆತೆ ಬಿಟ್ಟಂತಿದೆ ತನ್ನಿರುವ ಕಡಲಲಿ
ಮರುಗಳಿಗೆ ಕನವರಿಕೆ ಕಂಡದ್ದು ಕನಸೆಂದು ಎಚ್ಚರಿಕೆ
ಅಸಹಾಯಕವಾಗಿ ಕಂಡ ಮಗು ತನ್ನದೆ.
ತಾನಿಲ್ಲದ ಕನಸಿನಲ್ಲಿ ತಾನಾಗೆ ಕಂಡ ಮಗು ತನ್ನದೆ

Rating
No votes yet