ತಥಾಸ್ತು ಎನ್ನಿ

ತಥಾಸ್ತು ಎನ್ನಿ

ನಾಸ್ತಿಕರೆನ್ನುತ್ತಿದ್ದಾರೆ ದೇವರು ಇಲ್ಲ,
ಆಸ್ತಿಕರೆನ್ನುತ್ತಿದ್ದಾರೆ ದೇವರೇ ಎಲ್ಲ.

ನನ್ನನ್ನು ಕೇಳಿ,

ದೇವರು ಇದ್ದುದಾದಲ್ಲಿ,
ಇದ್ದೂ ಇಲ್ಲವಾಗಿದ್ದಾನೆ*.

ದೇವರು ಇಲ್ಲವಾದಲ್ಲಿ
ಇಲ್ಲದೆಯೂ ಇದ್ದಾನೆ#.

ಒಂದು ಘಟ್ಟ ಇಲ್ಲಿಗೆ,
ಸ್ವಲ್ಪ ಸಾವರಿಸಿಕೊಳ್ಳಿ,
ಈಗ ಬನ್ನಿ, ಮೇಲಕ್ಕೆ.

ನಾಸ್ತಿಕರೆನ್ನುತ್ತಿದ್ದಾರೆ ದೇವರು ಇಲ್ಲ,
ಅವರಿವರ ಮಾತು ಒಪ್ಪುವದಿಲ್ಲ,

ಆಸ್ತಿಕರೆನ್ನುತ್ತಿದ್ದಾರೆ ದೇವರೇ ಎಲ್ಲ.
ಇವರವರ ಮಾತು ಒಪ್ಪುವದಿಲ್ಲ.

ಹಾಗಾದರೆ ಏನು ಮಾಡೋಣ?
ಇಲ್ಲಿದೆ ರಾಮ ಬಾಣ,
ಈ ಇಲ್ಲ-ಇರುಗಳನ್ನೇ ಕೊಂದು ಬಿಡೋಣ,
ಅಥವಾ ಮರೆತು ಬಿಡೋಣ.

ಸಂಪದಿಗರೇ, ಬರೆದಿದ್ದೇನೆ,
ರಾತ್ರಿಯೆಲ್ಲಾ ನಿದ್ದೆಗೆಟ್ಟು,
ಹಾಗಾಗಿ "ತಥಾಸ್ತು", ಎನ್ನಿರಿ, ದಯವಿಟ್ಟು.

(*ನಾಸ್ತಿಕರ ಮನಸಲ್ಲಿ, # ಆಸ್ತಿಕರ ಮನಸಲ್ಲಿ)

Rating
No votes yet

Comments