ತಮಿಳುನಾಡು ಸರಕಾರ ಶಾಲಾ ಮಕ್ಕಳಿಗೆ ಲ್ಯಾಪ್ ಟಾಪ್ ಪುಕ್ಕಟೆ ಹಂಚಿದರೆ ಆಗುವ ಲಾಭ ಯಾರಿಗೆ?

ತಮಿಳುನಾಡು ಸರಕಾರ ಶಾಲಾ ಮಕ್ಕಳಿಗೆ ಲ್ಯಾಪ್ ಟಾಪ್ ಪುಕ್ಕಟೆ ಹಂಚಿದರೆ ಆಗುವ ಲಾಭ ಯಾರಿಗೆ?

 

 

ತಮಿಳು ನಾಡಿನ ಮುಖ್ಯಮಂತ್ರಿ ಜಯಲಲಿತಾರವರು ಶಾಲಾ ಮಕ್ಕಳಿಗೆ ೬೮ ಲಕ್ಷ ಲ್ಯಾಪ್ ಟಾಪ್ ಗಳನ್ನು ಮುಂದಿನ ಐದು ವರ್ಷಗಳಲ್ಲಿ ಹಂಚುವ ಯೋಜನೆ ಹಾಕಿಕೊಂಡಿದ್ದಾರೆ. ಖರ್ಚು ಕೇವಲ ೧೦,೨೦೦ ಕೋಟಿ ಮಾತ್ರ.

 

ಎಷ್ಟು ಒಳ್ಳೆಯ ಉದ್ದೇಶ ಎಂದು ನೀವು, ನಾವು ಅಂದುಕೊಂಡರೆ, ಓದುಗ ನೂಕಾಸಾಬರು ಯೋಜನೆಯ ಹಿಂದೆ ಈ ಸದುದ್ದೇಶದ ಹೊರತು ಇನ್ನೇನಾದರೂ ಲಾಭವಿದೆಯೇ ಎಂದು ಇಣುಕಿ ನೋಡುತ್ತಾರೆ.


 

ನೂಕಾಸಾಬರು ಲಿವಮಿಂಟ್ ನಲ್ಲಿ ಬರೆದ ಕಮೆಂಟು.

 

"ಸಾಮಾನ್ಯ ಜ್ಞಾನದ ಒಂದು ಮಾತು: ರಾಜ್ಯ ಸರ್ಕಾರವೊಂದು ಸಾಮಾಜಿಕ ವಿಕಾಸದ ಒಂದು ಉದ್ದೇಶಕ್ಕಾಗಿ ( ಫಲಾನುಭವಿಗಳಿಗೆ ಇದರಿಂದ ಎಷ್ಟರ ಮಟ್ಟಿಗೆ ಸಹಾಯವಾಗುತ್ತದೆ ಎಂಬುದನ್ನು ಲೆಕ್ಕ ಹಾಕದೆ)  

 ಶತಸಹಸ್ರ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತದೆ ಎಂದಾಗ, ನಮ್ಮ ಮನಸ್ಸಿಗೆ  ಮೊದಲು ಹೊಳೆಯುವದೆಂದರೆ, ೧೦,೨೦೦ ಕೋಟಿಯ ೧೦% ಅಂದರೆ ಎಷ್ಟಾಗುತ್ತದೆ ಎಂದು.  ಹಾಗೆಯೇ, ಮಕ್ಕಳಿಗೆ ಕೊಟ್ಟ ಲ್ಯಾಪ್ ಟಾಪ್ ಗಳ ಮೇಲೆ ಸದಾ ಹೊಳೆಯುವ ಮುಖ್ಯಮಂತ್ರಿಯ ಚಿತ್ರ  ಅನೇಕ ವರ್ಷಗಳ ತನಕ ಒಳ್ಳೆಯ ಜಾಹೀರಾತು ಆಗುತ್ತದೆ. 

 

ದೇವರೇ ಭಾರತವನ್ನು ಕಾಪಾಡಬೇಕು!"
Rating
No votes yet

Comments