ತಾಯೆ ಕಾಯೇ
ತಾಯೆ ಕಾಯೇ
ತಾಯೆ ನಮ್ಮನ್ನು ಕಾಯೇ |
ನಮ್ಮೆಲ್ಲರ ಮೇಲೆ ದಯೆಯ ತೋರೇ ||ಪ||
ಮೂರು ಕಣ್ಣನ ಮಡದಿ |
ನಾರಿಯರಲಿ ಮೆರುವೆತ್ತರವಿರುವಿ ||
ಕೋರಿ ಶರಣಾಗಿ ಬಂದ ನಿನ್ನ ಮಕ್ಕಳನೆಲ್ಲ |
ಪ್ರೀತಿಯಿಂದಲೆ ತಿದ್ದಿ ದಾರಿ ತೋರಿಸುತಿದ್ದಿ ||೧||
ಬಣ್ಣ ಬಣ್ಣದ ಮಂಟಪ |
ಸಣ್ಣದಾದ ಚಿನ್ನದ ನಿನ್ನಯ ರೂಪ ||
ಎಂದು ಇರಿಸುತ್ತ ನಾವು ನಿನ್ನ ಪೂಜಿಸುವೆವು |
ಬಂದು ಸೇವೆಯಗೊಂಡು ಎಲ್ಲರ ಹರಸವ್ವ ||೨||
ಆಶ್ವೀಜ ಮಾಸದಲ್ಲಿ |
ಕೌಶಿಕಿಯಾಗಿ ಚಂಡಿಕೆಯ ಜೊತೆಯಲ್ಲಿ ||
ಮತ್ತೇಳು ಮಾತೆಯರ ರೂಪು ತಾಳುತ್ತ ಬಂದು |
ಮತ್ತರಾದವರನ್ನು ಹಿಡಿದು ಶಿಕ್ಷಿಸು ತಾಯಿ ||೩||
- ಸದಾನಂದ
Rating