ತೀರದ ಬಯಕೆ
ಚಿತ್ರ
ಯಾವುದೋ ಹುಸಿಮುನಿಸಿನಲಿ ನಾ ಸುಮ್ಮನೇ ಹೋಗೆನ್ನಲು
ಕಲ್ಲು ಮನದಾ ನಲ್ಲ ತಟ್ಟನೆ ಸಜ್ಜೆ ಯಿಂದಲಿ ಎದ್ದು ತಾ
ಭರದಿ ಪ್ರೇಮವ ಗೆಳತಿ ಹೇವದಿ ಮುರಿಯುತಲಿ ದೂರಾದರೂ
ನಾಚದೀ ಮನವವನೆಡೆಗೆ ಹೋಗುವುದಕೇನನು ಮಾಡಲೇ?
ಸಂಸ್ಕೃತ ಮೂಲ : (ಅಮರುಕನ ಅಮರುಶತಕ, ಅರ್ಜುನವರ್ಮ ದೇವನ ಟೀಕೆಯಲ್ಲಿ - ೧೫)
ಕಥಮಪಿ ಸಖಿ ಕ್ರೀಡಾಕೋಪಾದ್ ವ್ರಜೇತಿ ಮಯೋದಿತೇ
ಕಠಿನಹೃದಯಸ್ತ್ಯಕ್ತ್ವಾ ಶಯ್ಯಾಂ ಬಲಾತ್ಗತ ಏವ ಸಃ
ಇತಿ ಸರಭಸಂ ಧ್ವಸ್ತಪ್ರೇಮ್ಣಿ ವ್ಯಪೇತಘೃಣೇ ಜನೇ
ಪುನರಪಿ ಹತವ್ರೀಡಂ ಚೇತಃ ಪ್ರಯಾತಿ ಕರೋಮಿ ಕಿಮ್ || ೧೫||
कथमपि सखि क्रीडाकोपाद् व्रजेति मयोदिते
कठिनहृदयस्त्यक्त्वा शय्यां बलाद् गत एव सः ।
इति सरभसं ध्वस्तप्रेम्णि व्यपेतघृणे जने
पुनरपि हतव्रीडं चेतः प्रयाति करोमि किम् ॥१२॥(१५)
-ಹಂಸಾನಂದಿ
ಕೊ: ಇದು ಅಮರುಶತಕದಿಂದ ನಾನು ಮಾಡುತ್ತಿರುವ ೨೫ನೇ ಅನುವಾದ
ಚಿತ್ರ: ಪಟಮಂಜರಿ ರಾಗದ ರಾಗಮಾಲಾಚಿತ್ರ,ವಿಕಿಪೀಡಿಯಾದಿಂದ
Rating