ತುಘಲಕ್ ನೆನಪು
ಇಂದಿನ [http://www.nytimes.com/2006/12/14/business/14pennies.html?_r=1&ref=business&oref=slogin|ಸುದ್ದಿ] ಓದುತ್ತಿದ್ದೆ. ಅದರಲ್ಲಿ ಹೆಚ್ಚುತ್ತಿರುವ ಲೋಹಗಳ ಬೆಲೆಯ ಬಗ್ಗೆ ಉಲ್ಲೇಖವಿದೆ. ಅಮೆರಿಕದಲ್ಲಿ 5 ಸೆಂಟ್ ನಾಣ್ಯದಲ್ಲಿ ಬಳಸಲಾಗುವ ಒಟ್ಟಾರೆ ತಾಮ್ರದ ಮೌಲ್ಯ 7 ಸೆಂಟ್ ಅಂತೆ. ಹೀಗಾಗಿ ನಾಣ್ಯಗಳನ್ನು ಕರಗಿಸುವುದನ್ನು ಅಥವಾ ರಫ್ತು ಮಾಡುವುದನ್ನು ತಡೆಯುವದಕ್ಕಾಗಿ ಕಾನೂನು ಜಾರಿಗೆ ತರಲಿದ್ದಾರೆ. ಇದಕ್ಕೆ ಮೊದಲು ನಾಣ್ಯಗಳನ್ನು ಅದರಲ್ಲಿರುವ ಲೋಹಕ್ಕಾಗಿ ಕರಗಿಸುವುದು ಅಪರಾಧವೆಂದೇ ತಿಳಿದಿದ್ದೆ.
ಬಹಳ ದಿನಗಳ ಹಿಂದೆ ಓದಿದ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕ ನೆನಪಾಯಿತು. ಅದರಲ್ಲಿ ಅರಸನಾದ ತುಘಲಕ್ ರಾಜ್ಯದಲ್ಲಿ ಚಿನ್ನದ ನಾಣ್ಯಗಳ ಬದಲಾಗಿ ತಾಮ್ರ ಇಲ್ಲವೆ ಮತ್ತಾವುದೊ ಕಡಿಮೆ ಬೆಲೆಯ ಲೋಹದ ನಾಣ್ಯಗಳನ್ನು ಚಲಾವಣೆಗೆ ತರುತ್ತಾನೆ. ಜನ ತಮ್ಮ ಮನೆಯಲ್ಲಿಯೇ ಹಣ ತಯಾರಿಸುತ್ತಾರೆ. ಕಾಸಿಗೆ ಯಾವುದೆ ಬೆಲೆ ಉಳಿಯುವುದಿಲ್ಲ. ಹೀಗಾಗಿ ದೇಶದ ಅರ್ಥವ್ಯವಸ್ಥೆ ಕುಸಿದು ಬೀಳುತ್ತದೆ.
ಹಿಂದೆ ದಿ|| ಧೀರುಭಾಯಿ ಅಂಬಾನಿಯವರು ಕೂಡ ಯೆಮೆನ್ ದೇಶದಲ್ಲಿ ಬಳಕೆಯಲ್ಲಿರುವ ಚಿನ್ನದ ನಾಣ್ಯಗಳನ್ನು ಕರಗಿಸಿ ಬೇರೆ ದೇಶಕ್ಕೆ ಮಾರುತ್ತಿದ್ದರಂತೆ.