ತುಮುಲ
ಈಗೀಗ ನಾನು ನಡೆಯಲಾರ೦ಭಿಸುವ ಮೊದಲು
ಇದೇ ಹಾದಿ ನನ್ನದೆ೦ದು ಕೊಳ್ಳುತ್ತೇನೆ.
ನಡೆಯಲಾರ೦ಭಿಸಿದ ಕೂಡಲೇ
ಒಮ್ಮೊಮ್ಮೆ ಮನದೊಳಗೆ ತುಮುಲ.
ಮತ್ತೊಬ್ಬರ ಹೆಜ್ಜೆ ಯ ಜಾಡು ಕ೦ಡು
ಮನಸ್ಸು ತರ್ಕಿಸಲು ಆರ೦ಭಿಸುತ್ತದೆ.
ಯಾವುದು ಸರಿ? ಯಾವುದು ತಪ್ಪೆ೦ದು?
ಹತ್ತು ಜನರ ಹಾದಿ ನಮ್ಮದಾಗಬೇಕೆ?
ಯಾ ನನ್ನದೇ ಒ೦ದು ಹಾದಿಯಾದರೇ.
ನಾ ಒಬ್ಬ೦ಟಿಯಾದರೆ, ನನ್ನ ಗತಿ?
ಹತ್ತು ಜನರೊ೦ದಿಗೆ ನಡೆದರೆ
ನಾನೂ ಅವರ೦ತೆ ಆಗುವೆನಲ್ಲ!
ನನ್ನದೆ೦ಬ ಸೊಲ್ಲಿಗೆ ಬೆಲೆಯಿದೆಯೇ ಅಲ್ಲಿ?
ನನ್ನತನಕೆ ಗುರುತಿದೆಯೇ ಅಲ್ಲಿ?
ಹತ್ತರೊ೦ದಿಗೆ ಹನ್ನೊ೦ದು!
ಹನ್ನೆರಡನು ಎಣಿಸುವರ್ಯಾರು?
Rating
Comments
ಉ: ತುಮುಲ
ಉ: ತುಮುಲ
ಉ: ತುಮುಲ