ತೇಜಸ್

ತೇಜಸ್

ದೇಶದ ರಕ್ಷಣಾ ಪಡೆಗೆ ಸಂತಸದ ಸುದ್ದಿ .ಲಘು ಯುದ್ಧ ವಿಮಾನ (Light Combat Aircraft) ನೂತನವಾಗಿ ಭಾರತ ವಾಯು ಸೇನಾ ಪಡೆಗೆ ಸೇರ್ಪಡೆಯಾಗಿದೆ.ಇದರಿಂದ ಹೊಸತಾಗಿ ಯುದ್ಧವಿಮಾನಗಳನ್ನು ತನ್ನ ದೇಶದಲ್ಲೇ ನಿರ್ಮಿಸುವ  ರಾಷ್ಟ್ರಗಳಲ್ಲಿ ಭಾರತ ಕೂಡ ಒಂದಾಗಿದೆ.ಇದರ ಹೆಸರು ತೇಜಸ್ಸ್ ಎಂದು.ಇದರ ನಿರ್ಮಾಣ   ರಶ್ಯಾದ  ಮಿಗ್ -೨೧ವಿಮಾನಗಳ ಬದಲಿಗೆ.ಇನ್ನು ಮುಂದೆ  ಬಾನಂಗಳದಲ್ಲಿ ಭಾರತ ನಿರ್ಮಿತ  ಯುದ್ಧ ವಿಮಾನ ಹಾರಾಡಲು ಸಜ್ಜಾಗಿ ನಿಂತಿದೆ.ಈ ತೇಜಸ್ ವಿಮಾನ ಪ್ರಪಂಚದ ಅತೀ ಲಘು ಹಾಗೂ ಚಿಕ್ಕ ಯುದ್ಧ ವಿಮಾನಗಳಲ್ಲಿ ಒಂದಾಗಿದೆ.ಜನವರಿ ೧೦ ಕ್ಕೆ  Final Operational Clearance (FOC) ದೊರೆತು ಇದು ನಮ್ಮ ದೇಶದ ವಾಯುಸೇನೆಗೆ ಸೇರ್ಪಡೆಗೊಂಡಿತು.ಇದಲ್ಲದೆ ೧೯೭೦ ರಲ್ಲಿ "ಮಾರುತ್ "ಎಂಬ ಒಂದು ಯುದ್ಧ ವಿಮಾನದ ಪ್ರಯತ್ನ ನಡೆದಿತ್ತಾದರೂ ಅದರ ಯತ್ನಗಳು ಸಫಲ ಗೊಂಡಿರಲಿಲ್ಲವೆಂದು ಸ್ಮರಿಸಬಹುದು.ಇದರ ನಿರ್ಮಾಣ ಕಾರ್ಯ D.R.D.O ವಿಜ್ಞ್ಯಾನಿಗಳಿಂದ.೧೯೮೩ ರಿಂದ ಇದರ ಕೆಲಸಗಳು ಪ್ರಾರಂಭವಾದವು.೧೮೦ ಕೋಟಿ ಬೆಲೆಬಾಳುವ ಈ ಯುದ್ಧ ವಿಮಾನ ದೇಶದ ಪ್ರತಿಷ್ಠೆ ಎಂದರೆ ತಪ್ಪಾಗಲಾರದು.ಇದನ್ನು ನಿರ್ಮಿಸಲು ಯತ್ನಿಸಿ ಸಫಲಗೊಳಿಸಿದ ಎಲ್ಲಾ ಇಂಜಿನಿಯರ್ಸ್ ಹಾಗೂ  ವಿಜ್ಞ್ಯಾನಿಗಳಿಗೆ ಶರಣು.

 

ಚಿತ್ರ  ಕೃಪೆ :http://www.military-today.com/aircraft/hal_tejas_images.htm

Rating
No votes yet

Comments