ದಯಾನಂದಿಸಮ್!

ದಯಾನಂದಿಸಮ್!

ಇದೇನಿದು, ಹೊಸ "ಇಸಮ್" ಅಂತ ತಲೆ ಕೆಡಿಸಿಕೊಳ್ಳೋದು ಬೇಕಾಗಿಲ್ಲ!ಹಿಂದೂಯಿಸಮ್, ಬುದ್ದಿಸಮ್, ಜೈನಿಸಮ್,ಕಮ್ಯುನಿಸಮ್ -ಕಮ್ಯುನಲಿಸಮ್ ,ಸಿದ್ದೂಯಿಸಮ್ ಹೀಗೆ ಹಲವಾರು 'ಇಸಮ್'ಗಳು ಈಗಾಗಲೇ ಇರಬೇಕಾದರೆ ಇದ್ಯಾವ್ದಪ್ಪಾ ಇದು ಅಂತ ಯೋಚಿಸ್ಬೇಡಿ. ನಾನೇ ಹೇಳ್ತೀನಿ. ನನ್ನ ರೂಮ್ ಮೇಟ್ ದಯಾನಂದನ ಹೊಸ ಸಂಶೋಧನೆ ಈ ಇಸಮ್ಮು!

ಅಲ್ಲಿ ಹೇಳಬೇಕಾದ ಶಬ್ದಾನ ಇಲ್ಲಿಗೆ ಹಾಕಿ ಇಲ್ಲಿ ಹೇಳಬೇಕಾದ್ದನ್ನ ಅಲ್ಲಿ ಹೇಳಿ ಗೊಂದಲ ಮತ್ತು ನಗೆ ಬುಗ್ಗೆಯನ್ನ ಜೊತೆ ಜೊತೆಗೇ ತರುವ ಮಾತಿನ ಶೈಲಿ. ಏನಾದರೂ ಗಂಭೀರವಾಗಿ ಮಾತಾಡ್ತಾ ಇರ್ಬೇಕಿದ್ರೆ,ಅವನ ಬಾಯಿಂದ ಹಠಾತ್ತಾಗಿ ಒಂದು ಬಾಣ ಹೊರಡತ್ತೆ ನೋಡಿ, ನಾವೆಲ್ಲ ಸುಸ್ತು! ನಾನು ಹೆಚ್ಚೇನೂ ವಿವರಣೆ ಕೊಡೋಕೆ ಹೋಗದೆ "ದಯಾನಂದಿಸಮ್"ನ ಕೆಲವು ಸ್ಯಾಂಪಲ್ಲುಗಳನ್ನ ಕೆಳಗೆ ಕೊಟ್ಟಿದ್ದೇನೆ, ಓದಿ ನೋಡಿ.:)

* ಅನ್ನ ಹಸಿದಿತ್ತು-ನಾಯಿ ಹಳಸಿತ್ತು! ( ಇವತ್ತಿಗೂ ತಾನು ಇದನ್ನ ಹೇಳಿಲ್ಲ ಅಂತ ವಾದ ಮಾಡ್ತಾನೆ ದಯಾ, ಅದು ಬೇರೆ ವಿಷ್ಯ!)
* ಎಗ್ ಎಂಡ್ ಮೊಟ್ಟೆ! ( ಎಗ್ ಅಂಡ್ ಕರ್ರಿ ಅಂತ ಹೇಳೊಕೆ ಹೊರಟಿದ್ದು)
* ರೋಟಿಕೋ ನಾನ್ ಚಲೇಗಾ ಕ್ಯಾ!? ( ಹೋಟೇಲಲ್ಲಿ, ಸೈಡ್ ಡಿಷ್ ಆರ್ಡರ್ ಮಾಡೋಕೆ ಹೊರಟಾಗ!)
* ಬುದ್ದಿಗಾರನಿಗೆ ಆತುರ ಮಟ್ಟ! ( ಪ್ರಾಯಶ: ಇದಕ್ಕೆ ವಿವರಣೆಯ ಅಗತ್ಯವಿಲ್ಲ!)
ಇಲ್ನೋಡಿ, ಇದೊಂದು ಮಾಸ್ಟರ್ ಪೀಸ್!
* ವಿಜಯ್ ಹಟ್ ಪಿಜ್ಜಾ ಮಲ್ಯಂದಾ?!

ಹೀಗೆ ಮಾತಾಡೊದಕ್ಕೆ ಇಂಗ್ಲೀಷಿನಲ್ಲಿ [w:malapropism|ಮಾಲಾಪ್ರೋಪಿಸಮ್] ಅಂತ ಕರೀತಾರೆ. ನಾನು ವಿನೋದಕ್ಕಾಗಿ ದಯಾನಂದನ ಹೆಸರು ಸೇರಿಸ್ದೆ ಅಷ್ಟೆ!
ರಿಚರ್ಡ್ ಬ್ರಿನ್ಸ್ಲ್ಲೆಯ "ದ ರೈವಲ್ಸ್"(೧೭೫೦) ನಾಟಕದ ಮಾಲಾಪ್ರೋಪ್ ಎಂಬ ಪಾತ್ರ ಈ ತೆರನಾದ ಮಾತುಗಳನ್ನ ಆಡುವುದರಿಂದ ಅದಕ್ಕೆ "ಮಾಲಾಪ್ರೋಪಿಸಮ್" ಅಂತ ಹೆಸರು ಬಂತು.ದಯಾನಂದ ಹಿಂದಿನ ಜನ್ಮದಲ್ಲಿ ಆ ಪಾತ್ರ ಮಾಡಿದ್ದನೋ ಏನೊ!ಯಾರಿಗೆ ಗೊತ್ತು!

ದಯಾನಂದ ಇದನ್ನ ಓದಿ ನನ್ನ ಮೇಲೆ ನಿರ್ದಯನಾಗದಿದ್ದರೆ ಸಾಕು ಅಂತ ನಾನು ಭಗವಂತನಾದ ದೇವರ ಬಳಿ ಪ್ರಾರ್ಥಿಸುತ್ತೇನೆ! :)

Rating
No votes yet