ದಾರಿ .

ದಾರಿ .

ಭೂಮಿ ಒಡಲಿನಿಂದ ಬಂತೆ ಈ ವೃಕ್ಷ ...?
ಯಾಕೆ ಎಂಬುದು ತಿಳಿಯದು .
ಆಕಾರ ವಿಕಾರ ಚಕಾರ ಎತ್ತಿದ ನೊಂದವ ;
ಎಕೆ ಎಂಬುದು ತಿಳಿಯದು ...?

ದೂರ ದೂರ ಸರಿದು ನೊಡಿದಾಗ ಹೆಮ್ಮರ -
ಎಳೆದು ಸೆಳೆದು ಬೆಳೆದು  ಬಾಗಿ ನಿಂತಿತು ,
ಮಳೆಯ ಹನಿಯ ಸಣ್ಣ ಹನಿಯ ಕೂಡ ಅದುವೇ ಹೀರಿತು ;
ಏಕೆ ಎಂಬುದು ತಿಳಿಯದು ...?

ಹಾರಿ ಹಾರಿ ಕಾಲು ಜಾರಿ ಬಿದ್ದುದ್ದೇಕೆ -
ತಿಳಿದು ಇಳಿದು ದುಃಖ ಈಗ ಏಕೆ ಎಂಬುದು ತಿಳಿಯದು ...?
ಕಪ್ಪು ಚುಕ್ಕೆ ಆಗಿ ಪಟಲದಲ್ಲಿ ಅದುವೇ ಸೇರಿತು ;
ಮೋಡ ಮುಸುಕಿ ಮಂಕು ಏಕೆ ಹೀಗೆ ಸುತ್ತ ಕವಿಯಿತು ...?

ದಾರಿ ದೀಪ ಕಂಡು ಹಿಂದೆ ಹಿಂದೆ ಹೊರಟವ -
ತಪ್ಪು ತಿದ್ದಿ ಬೆಳಕ ಕಂಡು ಕತ್ತಲಿಂದ ಬಂದವ ;
ತಪ್ಪು ದಾರಿ ಮೊದಲು ಹಿಡಿದುದೇಕೆ ಎಂಬುದು ತಿಳಿಯದು ...?

 

Rating
No votes yet