ದಿನನಿತ್ಯದ ಕೆಲಸಗಳಲ್ಲಿ ಕನ್ನಡದ ಬಳಕೆ

ದಿನನಿತ್ಯದ ಕೆಲಸಗಳಲ್ಲಿ ಕನ್ನಡದ ಬಳಕೆ

ಸ್ನೇಹಿತರೆ,


ಈ ವಿಚಾರ ಬಹಳ ದಿನಗಳಿಂದ ನನ್ನ ತಲೆ ಕೊರೆಯುತ್ತಿದೆ ಅದು ಏನೆಂದರೆ , ಉಪಾಹಾರ ಮಂದಿರಗಳಲ್ಲಿ ಇಟ್ಟಿರುವ (ಮೆನು) ಊಟಕ್ಕೆ ಇಟ್ಟಿರುವ  ಭಕ್ಷಗಳ  ಪಟ್ಟಿ ಹೆಚ್ಚಾಗಿ ಆಂಗ್ಲ ಭಾಷೆಯಲ್ಲೇ ಇರುತ್ತದೆ. ಹಾಗಾದರೆ ಬರೀ ಕನ್ನಡ ಓದಲು ತಿಳಿದಿರುವ ಗ್ರಾಹಕರು ತಮಗೆ ಬೇಕಾದ ಭಕ್ಷಗಳನ್ನು ಹೇಗೆ ತರಿಸಿಕೊಳ್ಳುವರೋ ನಾನರಿಯೆ.  ಉಪಾಹಾರ ಮಂದಿರಗಳ ಈ ಅವಿವೇಕದ ನಡವಳಿಕೆ ನಿಜಕ್ಕೂ ನಾಚಿಕೆಕೇಡು. ಕನ್ನಡ ನಾಡಿನಲ್ಲಿ ವ್ಯವಹಾರ ನಡೆಸುವ ಈ ಸಂಸ್ಥೆ ಗಳಿಗೆ ಇಲ್ಲಿನ ನೆಲ ಬೇಕು ಜಲ ಬೇಕು ಆದರೆ ಭಾಷೆ  ಮಾತ್ರ ಬೇಡ !!! ಇತ್ತಿಚೆಗೆ ನಾನು ಒಂದು ಉಪಾಹಾರ ಮಂದಿರದ ವ್ಯವಸ್ಥಾಪಕರ ಬಳಿ ಇದರ ಬಗ್ಗೆ ವಿಚಾರಿಸಿದಾಗ ಅವರು ಹೇಳಿದ್ದು ಹೀಗೆ " ನೋಡಿ ಸಾರ್ ನಮ್ಮಲ್ಲಿ ಬರೋ ಗ್ರಾಹಕರಲ್ಲಿ ಎಲ್ಲಾ ಭಾಷೆ ಜನರು ಇರ್ತಾರೆ ಅದಿಕ್ಕೆ ಇಂಗ್ಲಿಷ್ ನಲ್ಲಿ ಮಾಡ್ಸಿದೀವಿ ಅಂತ. ಅದು ಅಲ್ಲದೆ  ಕನ್ನಡದವರು ಇಂಗ್ಲಿಷ್ ನಲ್ಲೆ ಆರ್ಡರ್ ಮಾಡ್ತಾರೆ ಹೀಗಾಗಿ ಕನ್ನಡದಲ್ಲಿ ಮೆನು ಮಾಡ್ಸೋ ಅಗತ್ಯ ಬಂದಿಲ್ಲ ಅಂತ" . ನೋಡಿ ಎಂಥ ವಿಪರ್ಯಾಸ!!! ನಮಗೆ (ಕನ್ನಡದವರಿಗೆ) ಸ್ವಾಭಿಮಾನ ಕಮ್ಮಿ ಬೇರೆಯವರ ಮುಂದೆ ಕನ್ನಡ ಮಾತನಾಡಿದರೆ  ಎಲ್ಲಿ ಕೀಳಾಗಿ ನೋಡ್ತಾರೋ ಅನ್ನೋ  ಭಾವನೆ  ಅದಿಕ್ಕೆ ನಾವು ಇವತ್ತು ಇಂಥ ದಿನಗಳನ್ನು  ನೋಡಬೇಕಾಗಿ ಬಂದಿರೋದು, ಏನಂತಿರ? 

Rating
No votes yet

Comments