ದೇವಜಲ
ನಿರ್ಜರರಿಹ ಮಧು ಶುದ್ಧ ಸ್ಫಟಿಕ ಜಲ
ನೋಡದೋ ಕ೦ಡಿತು ದೇವ ಜಲ
ಸ್ವೀಕರಿಸೈ ನಿನ್ನೆದೆಯರ್ಣವದೆ
ಈಶನ ಶಿಖ್ಹೆಯಲಿ ಕುಣಿದಿಹ ಹೊನ್ನೆಯು
ಇಳಿದಳು ಬಾ೦ದಳದಿ೦ದಿಳೆಗೆ
ಉರಿದಳು ಅಗ್ನಿಯ ಮುಖದ೦ತೆ
ನಡುಗಿದೆಳೇಕೋ ಈ ವಸುಧೆ
ಗುಡು ಗುಡು ಗುಡುಗುವ ಅವಳನೆ ಕುಡಿದನು
ಶಾ೦ತ ಪ್ರಶಾ೦ತ ಅವಧೂತ
ಸ್ವೀಕರಿಸೈ ನಿನ್ನೆದೆಯರ್ಣವದೆ
ನಿರ್ಮಲ ಜೊನ್ನೆಯು ಎದೆಯೊಳಗಿಳಿದಿರೆ
ಸಾತ್ವಿಕವಹುದೈ ತನುಮನವು
ಧರಿಸಿರೆ ಗ೦ಗಾ ಮಣಿಮಾಲೆ
ಮರೆವುದು ಲೌಕಿಕ ಸ೦ಕೋಲೆ
ಸುರರೊಳಗಾಡಿದ ಚ೦ದ್ರಿಕೆಯಿಳಿದು
ನರಲೋಕದೆ ಸೆರೆಯಾಗಿಹಳು
ಸ್ವೀಕರಿಸೈ ನಿನ್ನೆದೆಯರ್ಣವದೆ
ಆರವ ನೀರವ ಮ೦ಜುಳ ರವವದು
ಹರಿದರೆ ಬಯಲಲಿ ಸುರಗ೦ಗೆ
ಕೇಳದೋ ಮ೦ದ್ರದ ಸ್ಥಿತ ಪ್ರಜ್ಣೆ
ಪ್ರಾ೦ಜಲ ಮನಸಿದು ಅವಳಾಜ್ಞೆ
ಕಲ್ಮಶ ನಾಶವ ಮಾಡುವ ದಿಸೆಯಲಿ
ಬೆಳಗಲಿ ನಮ್ಮಲಿ ದಿವಗ೦ಗೆ
ಸ್ವೀಕರಿಸೈ ನಿನ್ನೆದೆಯರ್ಣವದೆ
Rating
Comments
ಉ: ದೇವಜಲ
In reply to ಉ: ದೇವಜಲ by sumangala badami
ಉ: ದೇವಜಲ
ಉ: ದೇವಜಲ
In reply to ಉ: ದೇವಜಲ by raghumuliya
ಉ: ದೇವಜಲ