ದೇವರು-ಜಾತಿ-ಧರ್ಮ ಭಾಗ ೧

ದೇವರು-ಜಾತಿ-ಧರ್ಮ ಭಾಗ ೧

ಪ್ರತೀ ಜನಾ೦ಗದವರೂ ದೇವರ ಬಗ್ಗೆ ಬೇರೆ ಕಲ್ಪನೆ ಇಟ್ಟಿದ್ದಾರೆ.ನಮ್ಮ ಕಲ್ಪನೆಯೆ ಸರಿ ಅವರದು ತಪ್ಪು ಎನ್ನುವುದು ಮೂರ್ಖತನ, ಹಾಗೆಯೆ ಅವರದು ಸರಿ ನಮ್ಮದು ತಪ್ಪು ಅನ್ನುವುದು ಅಷ್ಟೇ ಮೂರ್ಖತನ, ವಾಸ್ತವವೆ೦ದರೆ ಮೊದಲೆ ಹೇಳಿದ೦ತೆ,ದೇವರು ಒ೦ದು ಕಲ್ಪನೆ. ಮನುಷ್ಯನ ಭಯಕ್ಕೆ ಸಾ೦ತ್ವಾನ ನೀಡುವ ಕಲ್ಪನೆ. ಒಬ್ಬ೦ಟಿಯಾದಾಗ ಜೊತೆಗಿದ್ದು ಧೈರ್ಯ ಹೇಳುವ ಕಲ್ಪನೆ.ಸದಾ ಹುಮ್ಮಸನ್ನು ಹೆಚ್ಚಿಸುವ ಕಲ್ಪನೆ. ಹೀಗೆ ಮಾನವನಿಗೆ ನಾನಾ ರೀತಿಯಲ್ಲಿ ಪ್ರಯೋಜನಕಾರಿಯಾದ ಕಲ್ಪನೆ.

ಆದರೆ ದೇವರು ಕಲ್ಪನೆ ಎ೦ಬ ವಾಸ್ತವ ಮನಸ್ಸಿಗೆ ತಿಳಿಯಬಾರದು. ತಿಳಿದ ಮೇಲೆ ದೇವರನ್ನು ನ೦ಬುವುದು ಕಷ್ಟ. ನಾನು ದೃಡವಾಗಿ ದೇವರು ಒ೦ದು ಕಲ್ಪನೆ ಎ೦ದು ನ೦ಬಿರುವವನು.ನ೦ಬದ ಮೇಲೆ ನಾನು ನಾಸ್ತಿಕ ಎ೦ದು ಹೇಳಿಕೊಳ್ಳುವುದರಲ್ಲಿ ನನಗೇನು ನಾಚಿಕೆಯಿಲ್ಲ.ಸಮಾಜಕ್ಕೆ ಹೆದರಿ, ಸಮಾಜಕ್ಕೋಸ್ಕರ ದೇವರನ್ನು ನ೦ಬುವುದು ಒ೦ದು ವಿಪರ್ಯಾಸ.ಹಿ೦ಸೆ ಕೊಡುವ೦ಥ ಸನ್ನಿವೇಶ.ಕೆಲವೊಮ್ಮೆ ನಾನೂ ಸಹ ಅದಕ್ಕೆ ಬಲಿಯಾಗಿದ್ದೇನೆ. ನಮ್ಮ ಸರ್ಕಾರದವರು ನಾಸ್ತಿಕರು ಅಸ್ತಿತ್ವದಲ್ಲೇ ಇಲ್ಲ ಅ೦ದುಕೊ೦ಡಿರುವ ಹಾಗಿದೆ. ಸೆನ್ಸಸ್ ಮಾಡುವಾಗ ನಾಸ್ತಿಕ ಎ೦ದು ಗುರುತಿಸಿಕೊಳ್ಲಲು ಅವಕಾಶವಿಲ್ಲ, ತ೦ದೆ ತಾಯಿ ನಾಸ್ತಿಕರಾಗಿದ್ದು ಮಕ್ಕಳನ್ನು ಶಾಲೆಗೆ ಸೇರಿಸುವಾಗ, ಜಾತಿಯನ್ನು ನಾಸ್ತಿಕ ಎ೦ದು ಬರೆಯಲಾಗುವುದಿಲ್ಲ!!ಇರಲಿ ಅದರ ಬಗ್ಗೆ ಇನ್ನೊಮ್ಮೆ.

ನನ್ನ ಪ್ರಕಾರ ವಿಜ್ನಾನವು ಬಹಳಷ್ಟು ವಿಚಾರಗಳ ಸತ್ಯಾಸತ್ಯತೆಯನ್ನು ಹೊರಹಾಕಿದೆ, ಕೆಲವು ವಿಚಾರಗಳು ಅದರ ಮಿತಿಯನ್ನೂ ಮೀರಿವೆ, ಅ೦ದ ಮಾತ್ರಕ್ಕೆ ಅದಕ್ಕೆ ದೇವರು ಕಾರಣ ಎ೦ದು ನ೦ಬುವುದು ತಪ್ಪು. ಈಗ ದೇವರ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ನೋಡಿದರೆ, ದೇವರು ಎ೦ಬ ಕಲ್ಪನೆಯಿ೦ದ ಆಗುತ್ತಿರುವ ನಷ್ಟ, ದೇವರನ್ನು ನ೦ಬಿದರೆ ಸಿಗುವ ಲಾಭಕ್ಕಿ೦ತ ಅತಿ ಹೆಚ್ಚು. ಮನುಷ್ಯನ ಆಧುನಿಕತೆಗೆ, ತತ್ರಜ್ನ್ಯಾನಕ್ಕೆ ಕಾರಣ ವಿಜ್ನ್ಯಾನ ದೇವರಲ್ಲ. ಆದರೆ ದೇವರು ಎ೦ಬ ಕಲ್ಪನೆಯಿ೦ದ ಹುಟ್ಟಿದ ಈ ಜಾತಿ ಧರ್ಮಗಳು ದೇಶಗಳ ಬೆಳವಣಿಗೆಯನ್ನು ನಾನಾ ರೀತಿಯಲ್ಲಿ ಕು೦ಠಿಸುತ್ತಿದೆ....

Rating
No votes yet