ದೇವರು, ದೆವ್ವ ಎಂಬ ನಮ್ಮೆಲ್ಲರ ಕನಸಿನ ಕಲ್ಪನೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೮

ದೇವರು, ದೆವ್ವ ಎಂಬ ನಮ್ಮೆಲ್ಲರ ಕನಸಿನ ಕಲ್ಪನೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೮

(೨೪೬) ಈ ಪೃಥ್ವಿಯ ಆಚೆ ದೇವರಿಲ್ಲ. ಪಂಜು ಇಲ್ಲದೆ ಕೃತಕ ಬೆಳಕು ಹೇಗೆ ಇರುವುದಿಲ್ಲವೋ ಹಾಗೆ ಮಾನವ ಪ್ರಾಣಿ ಇಲ್ಲದೆ ದೈವವಿರದು ಎಂಬುದನ್ನು ದೇವರೂ ಒಪ್ಪುತ್ತದೆ!


(೨೪೭) ವಿಶ್ವದ ಅಳಿಸಲಾಗದ ವಿಧಿನಿಯಮವೆಂದರೆಃ ಅದಕ್ಕೊಂದು ಭವಿಷ್ಯತ್ ಕಾಲವೆಂಬುದಿದೆ. ವಿಶ್ವದ ಭಾಗವಾದ ಭೂಮಿಯ ಹಣೆಯಬರಹವನ್ನು ಮಾನವ ನಿರ್ಧರಿಸಬಲ್ಲನಾದರೆ, ಸಮಗ್ರ ವಿಶ್ವದ ಒಪ್ಪಿಗೆಯಿಂದಾಗಿ ಮಾತ್ರ ಅದು ಸಾಧ್ಯವಾಗಿದೆ!


(೨೪೮) ವಿಧಿನಿಯಮಕ್ಕೆ ಇಚ್ಛಾಪೂರ್ವಕವಾಗಿ ಶರಣಾಗುವುದು ಮೋಕ್ಷಪಡೆದವರಿಗಿರುವ ಅನಿವಾರ್ಯ ಆಯ್ಕೆ!


(೨೪೯) ನಾವು ಪ್ರಶ್ನೆಗಳನ್ನು ಕೇಳುವುದು ನಿರ್ದಿಷ್ಟ ಉತ್ತರ ಪಡೆಯಲೆಂದೇನಲ್ಲ. ಯಾವುದೇ ಉತ್ತರವನ್ನು ಕೇಳಲು ನಾವು ಈಗ ಸಿದ್ಧರಿದ್ದೇವೆ ಎಂದದರ ಅರ್ಥ!


(೨೫೦) ಮಾಯೆಯ ಬಗೆಗಿನ ನಮ್ಮ ಭಯದ ಪರಿಣಾಮವೇ ದೆವ್ವ. ಎಂದೂ ಪೂರೈಕೆಯಾಗದ ನಮ್ಮಾಸೆಯ ಬೃಹತ್ ಕನಸೇ ದೇವರು!


 

Rating
No votes yet