ದೊಡ್ಡವರಿಗಾಗಿ ಮಕ್ಕಳ ಕತೆಗಳು -೧೯೪೯ರ ಜುಲೈ ಚಂದಮಾಮಾ ದಿಂದ

ದೊಡ್ಡವರಿಗಾಗಿ ಮಕ್ಕಳ ಕತೆಗಳು -೧೯೪೯ರ ಜುಲೈ ಚಂದಮಾಮಾ ದಿಂದ

 ....ಈಗ ಸಿಪಾಯಿಯ ಮನಸ್ಸು ರಾಜಕುಮಾರಿಯತ್ತ ಹರಿಯಿತು . ನಾಯಿಯನ್ನು ಕರೆದು ತನ್ನ ಆಸೆ ತಿಳಿಸಿದ. ನಾಯಿಯು ಮಲಗಿದ ರಾಜಕುಮಾರಿಯನ್ನು ಹೊತ್ತು ತಂದಿತು. ರಾಜಕುಮಾರಿಯ ಅಂದ ಚೆಂದವನ್ನು ಸಿಪಾಯಿ ಕಣ್ಣಾರೆ ನೋಡಿ ಸಂತೋಷಪಟ್ಟ ಮತ್ತೆ ರಾಜಕುಮಾರಿಯನ್ನು ಅರಮನೆಯಲ್ಲಿ ಬಿಟ್ಟು ಬರುವಂತೆ ನಾಯಿಗೆ ಹೇಳಿದ....  

:)

 

ಇನ್ನೊಂದು ಕತೆಯಲ್ಲಿ ರಾಜನು ಮಂತ್ರಿಪದವಿಗೆ ಇಬ್ಬರಲ್ಲೊಬ್ಬನನ್ನು ಆಯ್ಕೆ ಮಾಡಬೇಕಿದೆ. ಅವರಿಗೆ ಎರಡು ಪರೀಕ್ಷೆ ಒಡ್ಡುತ್ತಾನೆ. ಒಂದು ಪರೀಕ್ಷೆಯಲ್ಲಿ ೫೦ ಚಕ್ಕುಲಿಗಳನ್ನು ಅವರ ಕೈಯಲ್ಲಿ ಕೊಟ್ಟು ಕೂಡಲೇ ಹೊರಟು ಒಂದು ಹಗಲು ಪ್ರಯಾಣದಷ್ಟು ದೂರದಲ್ಲಿರುವ ತನ್ನ ಮಕ್ಕಳಿಗೆ ಕೊಟ್ಟು ಬರಬೇಕೆಂದು ಕಳಿಸುತ್ತಾನೆ . ಒಬ್ಬ  ೪೫ ಚಕ್ಕುಲಿಯ ರಸೀತಿ ತರುತ್ತಾನೆ. ಹಸಿವೆ ಆದದ್ದಕ್ಕೆ ಐದು ತಿಂದೆ ಅಂತ ಒಪ್ಪಿಕೊಳ್ಳುತ್ತಾನೆ.  ಇನ್ನೊಬ್ಬ ೫೦ ಚಕ್ಕುಲಿಗಳ ರಸೀತಿ ತರುತ್ತಾನೆ.  ಅವನನ್ನು  ವಿಚಾರಿಸಿದರೆ ಎಲ್ಲಾ ಚಕ್ಕುಲಿಗಳಲ್ಲಿ ಚೂರು ಚೂರು ತಿಂದಿರುತ್ತಾನೆ , ನಮ್ಮ ಮಾಜೀ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಬಾಲ್ಯದಲ್ಲಿ ಮಾಡಿದ ತರಹ! ( ಬೆಳೆವ ಸಿರಿ ಮೊಳಕೆಯಲ್ಲಿ ನೋಡಬೇಕಂತೆ!). ಈ ಎರಡನೇಯವನನ್ನೇ ರಾಜ ಮಂತ್ರಿಯಾಗಿ ಮಾಡೋದು! ರಾಜ್ಯ / ರಾಜನ ಖಜಾನೆ ಗತಿ ?

Rating
No votes yet