ದ್ರುಶ್ಯ ಸಿನಿಮಾ ವಿಮರ್ಶೆ

ದ್ರುಶ್ಯ ಸಿನಿಮಾ ವಿಮರ್ಶೆ

ದ್ರುಶ್ಯ ಸಿನಿಮಾ ಒಂದು ಸುಂದರವಾದ family oriented thriller ಸಿನಿಮಾ.

ಸಿನಿಮಾದ ಕೇಂದ್ರ ಬಿಂದು ಕೇಬಲ್ ಆಪರೇಟರ್ ರಾಜೇಂದ್ರ ಪೊನ್ನಪ್ಪನ ಕುಟುಂಬ. ರಾಜೇಂದ್ರ ಪೊನ್ನಪ್ಪನ ಕುಟುಂಬ ಒಂದು ಸುಂದರವಾದ ಪ್ರೇಮಲೋಕ. ಆ ಪ್ರೇಮಲೋಕದಲ್ಲಿ ರಾಜೇಂದ್ರ ಅವನ ಹೆಂಡತಿ ಮತ್ತವನ ಎರಡು ಹೆಣ್ಣು ಮಕ್ಕಳು ಅಷ್ಟೆ.ಅಂತ ಒಂದು ಸುಂದರವಾದ ಪ್ರೇಮಲೋಕಕ್ಕೆ ಕರೆಯದೆ ಬರುವ ಒಬ್ಬ ಅಥಿತಿಯ ಪ್ರವೇಶವಾಗುತ್ತೆ.ಆ ಅಥಿತಿಯ ಪ್ರವೇಶ ತಿಳಿ ನೀರಿನಂತೆ ಪ್ರಶಾಂತವಾಗಿದ್ದ ಸಂಸಾರದಲ್ಲಿ ಒಂದು ಸುನಾಮಿ ಅಲೆಯನ್ನ ಸ್ರುಷ್ಟಿ ಮಾಡುತ್ತೆ.ಆಗ ಅನಿರಿಕ್ಷಿತವಾಗಿ ಒಂದು ಅಸಂಭವವಾದ ಘಟನೆ ಕೂಡ ನಡೆಯುತ್ತದೆ. ಆ ಘಟನೆಯಿಂದ ಪಾರು ಆಗುವುದಕ್ಕೆ ತನ್ನ ಕುಟುಂಬವನ್ನ ರಕ್ಷಣೆ ಮಾಡೋಕೆ 4ನೇ ಕ್ಲಾಸ್ ಪಾಸ್ ಆದ ರಾಜೇಂದ್ರ ಪೊನ್ನಪ್ಪ ಮಾಡುವ ಉಪಾಯವೆ ಮರುಸ್ರುಷ್ಟಿ ಅದುವೆ ದ್ರುಶ್ಯ.

ಮರುಸ್ರುಷ್ಟಿ ಆಗೋದು ಇಲ್ಲಿ ಪಾತ್ರಗಳ/ಕೇಲ ದಿನಗಳ ಅಥವಾ ಎರಡು ನಾ? ಆ ಮರುಸ್ರುಷ್ಟಿ ದ್ರುಶ್ಯ ವೈಭವವನ್ನ ಒಮ್ಮೆ ಸಿನಿಮಾ ಪರದೆಯ ಮೇಲೆಯೆ ನೋಡಿದರೆ ಚೆಂದ.

ಆ ಅಥಿತಿ ಯಾರು? ಅವನ ಪ್ರವೇಶ ಪ್ರೇಮಲೋಕದಂತೆ ಇದ್ದ ರಾಜೇಂದ್ರನ ಕುಟುಂಬಕ್ಕೆ ಯಾಕೆ ಆಗುತ್ತೆ? ನಡೆದಂತಹ ಆ ಅಸಂಭವವಾದ ಘಟನೆ ಆದ್ರು ಏನು? ಆ ಘಟನೆಯಿಂದ ಸಂಕಷ್ಟಕ್ಕೊಳಗಾದ ರಾಜೇಂದ್ರನ ಕುಟುಂಬ ಹೇಗೆ ಪಾರಗುತ್ತೆ? ಇದೆಲ್ಲಾ ಹೇಳಿದ್ರೆ ಚೆನ್ನಾಗಿರೊಲ್ಲ ಒಮ್ಮೆ ಚಿತ್ರಮಂದಿರದಲ್ಲಿ ಹೋಗಿ ನೋಡಿ ಸವಿದರೆ ಚೆಂದ.

ಸಿನಿಮಾದ first halfನಲ್ಲಿ ಅಷ್ಟೊಂದೊ ವೇಗವಿಲ್ಲ. ಪ್ರೇಕ್ಷಕ ಸೀಟ್ನಲ್ಲಿ ಆರಾಮಾಗಿ ವರಗಿಕೊಂಡು ಕೂತಿರ್ತಾನೆ. ಕ್ರಮೇಣ ಪಿಕಪ್ ತಗೋಂಡು second half ಶುರು ಆಗ್ತಿದ್ದಾಗೆ ದ್ರುಶ್ಯದಿಂದ ದ್ರುಶ್ಯಕ್ಕೆ ಸಿನಿಮಾದ ನಿರೂಪಣೆ ಬಿಗಿಯಾಗಿ ಪ್ರೇಕ್ಷಕನನ್ನ ಸೀಟಿನ ತುದಿಗೆ ಬಂದು ಕುಳಿತುಕೊಳ್ಳುವ ಹಾಗೆ ಮಾಡುತ್ತೆ.

ರವಿಚಂದ್ರನ್ ಅಂದರೆ Richness ರವಿಚಂದ್ರನ್ ಅಂದರೆ Romance ಅಂತ ಅಂದುಕೊಂಡಿದ್ವಿ ಆದರೆ ಇಲ್ಲಿ ಅದು ಯಾವುದು ಇಲ್ಲ. ರವಿಚಂದ್ರನ್ is a comman man here ತುಂಬಾ ಸರಳತೆ ಇದೆ ಅವರ ಪಾತ್ರದಲ್ಲಿ. ಇದು ರವಿಚಂದ್ರನ್ ಅವರ ಮೂದಲ ಸಿನಿಮಾ ಅನಿಸುತ್ತೆ ಇಷ್ಟೊಂದು ಪೆಟ್ಟು ತಿಂದಿರೋದು ಅನಿಸುತ್ತೆ.

ರವಿಚಂದ್ರನ್ ಕಥೆಗಳನ್ನ ಆಯ್ಕೆ ಮಾಡಿಕೊಳ್ಳುವುದರಲ್ಲಿ ತುಂಬಾ ಬದಲಾಗಿದ್ದಾರೆ ಅನ್ನೊದಕ್ಕೆ ಇತ್ತಿಚಿಗೆ ಬಿಡುಗಡೆಯಾದ ಅವರ ಮಾಣಿಕ್ಯ ಮತ್ತು ದ್ರುಶ್ಯ ಸಿನಿಮಾನೆ ಸಾಕ್ಷಿ.

ಈ ಸಿನಿಮಾದಲ್ಲಿ ಹೀರೊ ಅಂತ ಯಾರು ಇಲ್ಲ. ಕಥೆನೆ ಇಲ್ಲಿ ಹೀರೊ ಆಗಿರುವುದರಿಂದ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳು ಅಷ್ಟೆ ಮುಖ್ಯವಾದವು. ಎಲ್ಲಾ ಪಾತ್ರದಾರಿಗಳು ಸಹ ತಾವು ಮಾಡಿರುವ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಪೋಲಿಸ್ ಪೇದೆ ಸೂರ್ಯಕಾಂತನಾಗಿ ಅಚ್ಚುತ್ ರಾವ್ ಅವರ ಅಭಿನಯವಂತು ಸೂಪರ್.

ಒಟ್ಟಿನಲ್ಲಿ ಇದು ಒಂದು ಉತ್ತಮವಾದ ಸಿನಿಮಾ. ಈ ವರ್ಷಕ್ಕೆ ಉಗ್ರಂ ನಂತರ ಬಂದಿರುವ ಒಂದು ಉತ್ತಮವಾದ ಸಿನಿಮಾ ಅಂದ್ರು ತಪ್ಪಿಲ್ಲ.

ಇದು ರಿಮೇಕ್ ನಾನು ನೋಡಲ್ಲ ಅನ್ನುವ ಕನ್ನಡ ಅಭಿಮಾನಿಗಳು ತಮ್ಮ ದರ್ಪವನ್ನು ಸ್ವಲ್ಪ ಬದಿಗಿಟ್ಟು ಒಮ್ಮೆ ಹೋಗಿ ಸಿನಿಮಾವನ್ನು ನೋಡಿ. ಯಾಕೆ ಅಂದರೆ ಸಿನಿಮಾ ಉತ್ತಮವಾಗಿದೆ.

Rating
No votes yet