ದ ಡೇ ಆಫ್ ದಿ ಜಕಾಲ್ -1971 (ಫ್ರಾನ್ಸ್ ರಾಷ್ಟ್ರಾದ್ಯಕ್ಷರ ಹತ್ಯೆ ಯತ್ನದ ಸುತ್ತ...)

ದ ಡೇ ಆಫ್ ದಿ ಜಕಾಲ್ -1971 (ಫ್ರಾನ್ಸ್ ರಾಷ್ಟ್ರಾದ್ಯಕ್ಷರ ಹತ್ಯೆ ಯತ್ನದ ಸುತ್ತ...)

ಚಿತ್ರ

ಕೆಲ ವರ್ಷಗಳ ಹಿಂದೆ ಎಸ್ಸೆಸ್ಸೆಲ್ಸಿಗೆ  ಪರೀಕ್ಷೆಗೆ  ತಯಾರಿ ನಡೆಸುತ್ತ  ಜೊತೆ ಜೊತೆಗೆ ಪೂರಕ ಓದಿಗಾಗಿ  ಲೈಬ್ರರಿಗೆ ಭೇಟಿ ಕೊಡುತ್ತಿದ್ದೆ. ಆಗೊಮ್ಮೆ ಹುಡುಕಾಡುವಾಗ  ಸಿಕ್ಕ   'ದ ಡೇ ಆಫ್ ದಿ ಜಕಾಲ್ ' ಹೆಸರಿನ  ಕನ್ನಡ ಪುಸ್ತಕ ಕಾಣಿಸಿ  ಅದೇನೋ ಚಂದಮಾಮ ತರಹದ  ಕಥೆಗಳ  ಪುಸ್ತಕ ಇರಬಹುದು ಎಂದು ಎಣಿಸಿ  ಓದಲು ಶುರು ಮಾಡಿ ಅದು ಫ್ರಾನ್ಸ್ನ ನೈಜ ಘಟನೆಯ ಸುತ್ತ ಸುತ್ತುವ  ಕಾದಂಬರಿಯ  ಕನ್ನಡ ಅನುವಾದದ  ಪುಸ್ತಕ ಎಂದು  ತಿಳಿಯಿತು.

ಅದರ ಅನುವಾದಕರು ಯಾರೆಂದು ನೆನಪಿಲ್ಲ..ಹಲವು ಆಂಗ್ಲ ಬರಹಗಳನ್ನು ಸಮರ್ಥವಾಗಿ ಕನ್ನಡೀಕರಿಸಿದ ಶ್ರೀಯುತ  ಎಚ್ ಆರ್ ಚಂದ್ರವದನರಾವ್ (ಮೈಸೂರು)ಅವರೇ ಇರಬಹದು ಎಂದು ನನ್ ಈಗಿನ ಎಣಿಕೆ. ಪುಸ್ತಕ ಕೈನಲ್ಲಿಡಿದು   ಎಸ್ಸೆಲ್ಸಿಗೆ  ಪರೀಕ್ಷೆಗೆ  ತಯಾರಿ  ಮರೆತು  ಸಂಜೆವರೆಗೆ  ಕೂತು ಕಾದಂಬರಿ ಓದಿ ಮುಗಿಸಿದೆ .
ಪ್ರತಿ ಘಟನೆ-  ಸನ್ನಿವೇಶ  ಜಕಾಲ್ ವ್ಯಕ್ತಿಯ  ಅಧ್ಯಕ್ಷರ ಹತ್ಯೆ ಗೆ  ತಯಾರಿ ಸಿದ್ಧತೆ  ಕಣ್ಣ ಮುಂದೆ  ಬರುತ್ತಿತ್ತು.
 
ಅದ್ಭುತ ಕಾದಂಬರಿ - ಅದ್ಭುತ ಚಿತ್ರ  
ಫ್ರೆಡರಿಕ್ ಫೋರ್ಸಿತ್  ನಾಮಧೇಯದ  ಲೇಖಕನ  ಕಾದಂಬರಿ  'ದ ಡೇ ಆಫ್ ದಿ ಜಕಾಲ್ ' ಆಧರಿಸಿ ತಯಾರಿಸಿದ ಈ ಚಿತ್ರದ ಕಥೆ  ಫ್ರಾನ್ಸ್ ರಾಷ್ಟ್ರಾಧ್ಯಕ್ಷ   'ಚಾರ್ಲ್ಸ್ ಡೇ ಗಾಲೆ'ಯ ಹತ್ಯಾ ಯತ್ನದ  ಕುರಿತಾದುದು.
ಇದು  ನೈಜ ಘಟನೆಯ ಕುರಿತಾದ ಸಿನೆಮ ಮತ್ತು ಈ ಹಿಂದೆ ಇದೆ ಹೆಸರಲ್ಲಿ ಬಂದ ಕಾದಂಬರಿ ಜನಪ್ರಿಯವಾಗಿ ಜಗತ್ತಿನ ಎಲ್ಲೆಡೆ  ಪ್ರಕಟಿತವಾಗಿ  ಜನಪ್ರಿಯವಾಗಿತ್ತು. ಆ   ಕಾದಂಬರಿಯನ್ನು ಆಧರಿಸಿ ತೆಗೆದ ಕಾರಣವಾಗಿ ಈ ಚಿತ್ರದ ಕುರಿತು  ಜನರ ನಿರೀಕ್ಷೆ ದುಪಟ್ಟಾಗಿತ್ತು. ಮತ್ತು ಚಿತ್ರ ಬಿಡುಗಡೆ ಆಗಿ ಯಶಸ್ವಿಯೂ ಆಯ್ತು.
ಕಥೆ:
ಅಲ್ಜೆರಿಯ ದೇಶವನ್ನು ಸ್ವತಂತ್ರ ದೇಶ ಎಂದು ಘೋಷಿಸಿದ  ರಾಷ್ಟ್ರಾಧ್ಯಕ್ಷ  'ಚಾರ್ಲ್ಸ್ ಡೇ ಗಾಲೆಯ'   ನಿರ್ಣಯದ  ವಿರುದ್ದ -ಫ್ರಾನ್ಸ್ಗೆ ಮೋಸ ಮಾಡಿದ  ಮೋಸಗಾರ  ಗಾಲೆ ಎಂದು   ಫ್ರಾನ್ಸ್ನಲ್ಲಿ ಕರ್ನಲ್- ಜೀನ್ ಮ್ಯಾರಿ ಬೀಸ್ಟನ್ -ಥಿರಿ  ನಾಯಕತ್ವದಲ್ಲಿ ಕೆಲವು ಜನ ಒಂದು  'ಆರ್ಗನೈಜೇಶನ್ ಅರ್ಮೀ ಸೀಕ್ರೆಟ್'  ಸಂಘಟನೆ ಮಾಡಿಕೊಂಡು ಫ್ರಾನ್ಸ್ ಅಧ್ಯಕ್ಷರನ್ನು ಹತ್ಯೆಗೆಯ್ಯಲು 2 ಸಾರಿ ಪ್ರಯತ್ನಿಸಿ  ವಿಫಲರಾಗಿ  ಮಿಲಿಟರಿ ಕೈಗೆ ಸಿಕ್ಕು  ಚಿತ್ರ ಹಿಂಸೆಗೆ ಈಡಾಗುವರು . ಕರ್ನಲ್- ಜೀನ್ ಮ್ಯಾರಿ ಬೀಸ್ಟನ್ -ಥಿರಿ ಯನ್ನು  ಸಾಯಿಸುವ ಮಿಲಿಟರಿಯವರು-ಸಾಧ್ಯವಾದಸ್ಟು  'ಆರ್ಗನೈಜೇಶನ್ ಅರ್ಮೀ ಸೀಕ್ರೆಟ್'  ಸಂಘಟನೆ ಯ  ಕೆಲವು ಜನರನ್ನು ಹಿಡಿದು ಅವರನ್ನು ಗಲ್ಲಿಗೆ ಏರಿಸುವರು .
 
'ಆರ್ಗನೈಜೇಶನ್ ಅರ್ಮೀ ಸೀಕ್ರೆಟೆ'  ಸಂಘಟನೆಯ  ಕೆಲವು ಜನ ಮಿಲಿಟರಿಯವರ ಕಣ್ಣು ತಪ್ಪಿಸಿ ಭೂಗತರಾಗಿ ಮತ್ತೊಮ್ಮೆ  ಅಧ್ಯಕ್ಷರ  ಹತ್ಯೆಗೆ  ಸಂಚು ನಡೆಸುವರು.
ತಮ್ಮ ಸಂಘಟನೆಯ  ಮೇಲೆ ಮಿಲಿಟರಿ -ಪೋಲೀಸರ ಕಣ್ಣು ಬಿದ್ದಿರುವುದು ಮತ್ತು ತಾವು ಈ ಕೆಲಸ ಮಾಡಲು ಆಗದು ಎಂದು ಯೋಚಿಸಿ -ಮೊದಲ 2 ಪ್ರಯತ್ನಗಳ ವಿಫಲತೆ ಕಾರಣವಾಗಿ  ಅತ್ಮ ಸ್ಥೈರ್ಯ ಕುಗ್ಗಿ   ಫ್ರಾನ್ಸ್ಗೆ  ಅಪರಿಚಿತ ವ್ಯಕ್ತಿ ಆಗಿರ್ವ  ಒಳ್ಳೆ ನುರಿತ  ಶೂಟರ್ನ ಹುಡುಕಾಟ ನಡೆಸಿ ಬ್ರಿಟನ್ನಿನಲ್ಲಿ  ಒಬ್ಬನನ್ನು ಕಂಡು(ಅವನ ಹೆಸರು ಕೊನೆಗೂ ತಿಳಿಯುವುದಿಲ್ಲ..!!) ಅವನಿಗೆ  ಈ ಬಗ್ಗೆ ತಿಳ್ಸಿ  ದೊಡ್ಡ ಭೇಟೆ ಎಂದು ಅವನು 5 ಲಕ್ಷ ಡಾಲರುಗಳಿಗೆ  ಅದ್ಯಕ್ಷರನ್ನು  ಶೂಟ್ ಮಾಡಲು ಒಪ್ಪಿಕೊಳ್ಳುವನು .
 
ಅಷ್ಟು  ದೊಡ್ಡ ಮೊತ್ತದ ಹಣ ಹೊಂದಿಸಲು 'ಆರ್ಗನೈಜೇಶನ್ ಅರ್ಮೀ ಸೀಕ್ರೆಟೆ'  ಸಂಘಟನೆ ಯವರು ಹಲವು ಬ್ಯಾಂಕುಗಳನ್ನು ಲೂಟಿ ಮಾಡಿ ಮೊದಲ ಕಂತಿನ  ಹಣ ಹೊಂದಿಸಿ ಆ ಅನಾಮಧೇಯ ವ್ಯಕ್ತಿಯ ಸ್ವಿಜರ್ಲ್ಯಾಂಡ್   ಅಕೌಂಟಿಗೆ ವರ್ಗಾಯಿಸುವರು. ಸುಳ್ಳು ವ್ಯಕ್ತಿಯ ಹೆಸರಲ್ಲಿ ಪಾಸ್ಪೋರ್ಟ್ ಪಡೆದು ಯಾವುದಕ್ಕೂ ಇರಲಿ ಎಂದು ತನ್ನಂತೆ ಹೋಲುವ ಇಬ್ಬರು ಬ್ರಿಟಿಷ್ ಪ್ರಜೆಗಳ  ಪಾಸ್ಪೋರ್ಟ್ ಕದ್ದು  ಇಟಲಿಗೆ ಬಂದು ಸೇರುವ  ಈ ಜಕಾಲ್  ಕೋಡ್  ನಾಮದ ವ್ಯಕ್ತಿ ಅಲ್ಲಿ ನುರಿತ  ಶಸ್ತ್ರ ತಯಾರಕನಿಂದ ತನಗೆ ಬೇಕಾದಂತ  ಸೈಲನ್ಸರ್  ಅಳವಡಿಸಿದ  ಉದ್ದನೆಯ ಲಘು ಭಾರದ  ರೈಫಲ್  ತಯಾರಿಸಿಕೊಂಡು ಅದರ ಪರೀಕ್ಷೆಯನ್ನು ಮಾಡಿ ತೃಪ್ತಿಗೊಳ್ಳುವನು.
 
ಈ ಮಧ್ಯೆ ಇತ್ತ ಫ್ರಾನ್ಸ್ನಲ್ಲಿ  'ಆರ್ಗನೈಜೇಶನ್ ಅರ್ಮೀ ಸೀಕ್ರೆಟೆ'  ಸಂಘಟನೆಯ  ಬಹುಪಾಲು  ಸದಸ್ಯರ ಬ್ಯಾಂಕ್ ಲೂಟಿ -ಆ ಅಪಾರ ಪ್ರಮಾಣದ ಹಣದ ಕೊಳ್ಳೆಯ  ಹಿಂದೆ ಯಾವುದೋ  ಪೂರ್ವಯೋಜಿತ  ಸಂಚು ಇದೆ ಎಂದು ಊಹಿಸಿ  'ಆರ್ಗನೈಜೇಶನ್ ಅರ್ಮೀ ಸೀಕ್ರೆಟ್'  ಸಂಘಟನೆಯ  ಕೆಲ ಜನರನ್ನು ಹಿಡಿದು ಚಿತ್ರ ಹಿಂಸೆ ಕೊಟ್ಟು ವಿಚಾರಿಸಲಾಗಿ  ಫ್ರಾನ್ಸ್ ಅಧ್ಯಕ್ಷರ ಹತ್ಯೆಗೆ  ಸುಪಾರಿಯನ್ನು ಅನಾಮಧೇಯ -ಅಪರಿಚಿತ ಪರಿಪೂರ್ಣ ನಿಖರತೆಯ  ಶೂಟರ್ಗೆ  ನೀಡಿದ್ದು ಗೊತ್ತಾಗಿ -ಅವನ ಮುಖ ಚಹರೆ  ನಿಜ ನಾಮ  ತಿಳಿಯದೆ ಕೇವಲ  ಜಕಾಲ್ ಹೆಸರಿನ  ಕೋಡ್  ನೇಮ್ ತಿಳಿವದು. ಆದರೆ ಯಾವತ್ತು ಎಲ್ಲಿ ಹೇಗೆ ಅಧ್ಯಕ್ಷರ ಮೇಲೆ ಆಕ್ರಮಣ ನಡೆವುದು ಎಂದು ಸರಿಯಾಗಿ ತಿಳಿಯದು.
ಈ ಹತ್ಯ ಯತ್ನದ ಬಗ್ಗೆ ಅದ್ಯಕ್ಷರಿಗೆ  ವಿವರಿಸಿದರೂ  ಅವರು ತಮ್ಮ ಪೂರ್ವ ಯೋಜಿತ ಯಾವುದೇ ಕಾರ್ಯಕ್ರಮವನ್ನು ಬದಲಾಯಿಸಿಕೊಳ್ಳದೆ -ಆ ಅಪರಿಚಿತ ಅನಾಮಧೇಯ  ಶೂಟರ್ನನ್ನು ಹುಡುಕಿ ಕೊಲ್ಲಲು  ಪೊಲೀಸರಿಗೆ  ಮಿಲಿಟರಿಯವರಿಗೆ  ಹೇಳುವರು.
 
ತಮ್ಮವರಲ್ಲಿ ಸಶಕ್ತ-ಪ್ರಾಮಾಣಿಕ -ದಕ್ಷ  ಡಿಟೆಕ್ಟಿವ್   ಆದ ಕ್ಲಾಡೆ  ಲೇಬೆಲ್ ಹೆಸರಿನ ವ್ಯಕ್ತಿಗೆ ಈ  ಜಕಾಲ್ ಕೋಡ್ ನೇಮ್  ವ್ಯಕ್ತಿಯ ಹುಡುಕಾಟ ನಡೆಸಿ ಸಾಯಿಸುವ ಜವಾಬ್ಧಾರಿ ವಹಿಸುವರು.  ಇತ್ತ ಇಟಲಿಯಲ್ಲಿ ತನಗೆ ಬೇಕಾದ  ಊರುಗೋಲಾಗಿ ಬಳಸಬಹುದಾದ  ತೋಳಿನಲ್ಲಿ ಅಂಗಿ  ಒಳಗಡೆ ಇಡಬಹುದಾದ  ರೈಫಲ್ ತಯಾರಿಸಿಕೊಂಡು ಅದರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ  ತಾನು ಫ್ರಾನ್ಸ್ಗೆ ಹೋಗಲು ಕಳ್ಳ ಪಾಸ್ಪೋರ್ಟ್ ಮಾಡಿಸಲು ಕೊಟ್ಟ  ಫೋರ್ಜರ್ -ಈ ಜಕಾಲ್ ಹೆಸರಿನ ವ್ಯಕ್ತಿ ಯಾವುದೋ ದೊಡ್ಡ ಉದ್ದೇಶಕ್ಕೆ ಫ್ರಾನ್ಸ್ಗೆ ಹೊರಟಿರುವನು. ಅವನಿಗೆ ನಕಲಿ ಪಾಸ್ಪೋರ್ಟ್ ಅವಶ್ಯಕತೆ ಇದೆ. ಇದೇ ತಾನು ಹೆಚ್ಚು ಹಣ ಗಳಿಸಲು ಸಹಾಯಕ ಎಂದು  ದುರಾಶೆ ಪಟ್ಟು ಜಕಾಲ್ನನ್ನು ಬ್ಲಾಕ್ಮೇಲ್ ಮಾಡಲು ಹೋಗಿ  ಅವನ ಕೈನಲ್ಲಿ ಸಾಯುವನು.
ಅವನು ಅದಾಗಲೇ ತಯಾರಿಸಿದ ನಕಲಿ ಪಾಸ್ಪೋರ್ಟ್ಗಳನ್ನು ತೆಗೆದುಕೊಂಡು  ಆ ಫಾರ್ಜರ್ ದೇಹವನ್ನು ದೊಡ್ಡ  ಬಾಕ್ಸ ಒಂದರಲ್ಲಿ ಹಾಕಿ ಅದು ಬಹು ದಿನಗಳವೆರೆಗೆ ಯಾರ ಗಮನಕ್ಕೂ ಬಾರದೆ ಇರುವ ಹಾಗೆ ಇಡುವನು.
ಅಲ್ಲಿಂದ ಹೊರಟು  ಹಲವು ದೇಶಗಳನ್ನು  ಗಡಿಗಳನ್ನು ವಿಧವಿಧದ ಹೆಸರಲ್ಲಿ ನಕಲಿ ಪಾಸ್ಪೋರ್ಟ್ಗಳ ಮೂಲಕ  ಹಲವು  ವಿಭಿನ್ನ ಅವತಾರಗಳಲ್ಲಿ (ಕೂದಲ ಬಣ್ಣ ಬದಲು-ವಿಧ ವಿಧದ ವಿಗ್ -ಮೀಸೆ ಇತ್ಯಾದಿ )ಮಾರ್ಪಾಡಾಗಿ  ಪೋಲೀಸರ  ಏರ್ಪೋರ್ಟಿನವರ  ಕಣ್ಣು ತಪ್ಪಿಸಿ  ಫ್ರಾನ್ಸ್ಗೆ ಬಂದು ಸೇರುವನು.
 
ಅದಕ್ಕೂ ಮೊದಲು 'ಆರ್ಗನೈಜೇಶನ್ ಅರ್ಮೀ ಸೀಕ್ರೆಟ್'  ಸಂಘಟನೆಯ  ಸದ್ಯಸ್ಯನೊಬ್ಬ  ಮಿಲಿಟರಿಯವರ  ಸಂಚಿಗೆ ಸಿಕ್ಕು  ಜಕಾಲ್  ಬಗ್ಗೆ ಎಲ್ಲವನ್ನು ಹೇಳಬೇಕಾಗಿ ಬರುವುದು. ಆದರೂ ಜಕಾಲ್ ಎನ್ನ್ದುವುದು ಕೇವಲ ಕೋಡ್  ನೇಮ್  ಆಗಿದ್ದು ಅವನು ನಿಜವಾಗಿ  ಯಾವ ರೀತಿ ಇರುವನು  ನಿಜ ನಾಮಧೇಯ  ತಿಳಿಯದೆ ಕೊನೆಗೆ ಪೊಲೀಸರು ಬೇರೆ ಬೇರೆ ದೇಶಗಳ  ಪೋಲೀಸರ ಸಹಾಯ  ಪಡೆದು  ಕೊನೆಗೆ ಈ ತರಹದ ಚಾಣಾಕ್ಷ್ಯ   ಶೂಟರ್   ಒಬ್ಬ(ಚಾರ್ಲ್ಸ್ ಕಾಲ್ತ್ರೋಪ್ ಹೆಸರಿನ ವ್ಯಕ್ತಿ) ಹಿಂದೊಮ್ಮೆ  ಡೊಮಿನಿಕನ್ ರಿಪಬ್ಲಿಕ್ ದೇಶದ ಅದ್ಯಕ್ಷ ಟ್ರುಜಿಲೋ  ಹತ್ಯೆಗೆಯ್ದಿದ್ದ ಸಂಗತಿ ತಿಳಿವದು.
ಆದರೆ  ಈ ಹತ್ಯೆ ನಡೆದಾಗ ಆ ಹೆಸರಿನ ವ್ಯಕ್ತಿ ಬೇರೊಂದು ದೇಶದಲ್ಲಿ ಇದ್ದ ಸಂಗತಿ ತಿಳಿದು  ಡೊಮಿನಿಕನ್ ರಿಪಬ್ಲಿಕ್ ದೇಶದ  ಅದ್ಯಕ್ಷ ಟ್ರುಜಿಲೋ  ಹತ್ಯೆಗೂ ಈ ವ್ಯಕ್ತಿಗೂ ಸಂಬಂಧವಿಲ್ಲ  ಬೇರೊಬ್ಬ ವ್ಯಕ್ತಿ   ಹಿಂದೆ ಇರುವನು ಎಂದು ಗೊತ್ತಾಗಿ  ಈ ಜಕಾಲ್ ಹೆಸರಿನ ಶೂಟರ್ನನ್ನು  ಹಿಡಿಯುವುದೇ ದೊಡ್ಡ ಸವಾಲಾಗುವುದು!
 
'ಆರ್ಗನೈಜೇಶನ್ ಅರ್ಮೀ ಸೀಕ್ರೆಟ್'  ಸಂಘಟನೆಯ  ಸದಸ್ಯರಿಗೆ ಮಿಲಿಟರಿ ಮತ್ತು ಪೊಲೀಸರು  ಎಲ್ಲ ಕಡೆ ಈ ಜಕಾಲ್ ಗಾಗಿ ಹುಡುಕುತ್ತಿರುವುದು ತಿಳಿದು ಅದನ್ನು ಅವನಿಗೆ ತಿಳಿಸಿ ತಲೆ ಮರೆಸಿಕೊಳ್ಳುವಂತೆ -ಈ ಪ್ರಯತ್ನವನ್ನು ಸ್ವಲ್ಪ ದಿನ ಮುಂದಕ್ಕೆ ಹಾಕಲು ಅಥವಾ ಕೈ ಬಿಡಲೇ ಹೇಳುವರು-ಆದರೆ ಸವಾಲುಗಳಿಗೆ ಎದುರು ನೋಡುವ -ಅಪಾಯವನ್ನು ಮೈ ಮೇಲೆ ಎಳೆದುಕೊಂಡು ಆಟ ಆಡುವ ಸ್ವಭಾವದ ಜಕಾಲ್ ತಾ ಸುಪಾರಿ ತೆಗೆದುಕೊಂಡಿದ್ದು -ಮುಂದಿಟ್ಟ ಹೆಜ್ಜೆ ಹಿಂದಕ್ಕೆ ಇಡುವ  ಮಾತೇ  ಇಲ್ಲ -ಕೊಂದೇ  ತೀರುವೆ ,ನೀವು ಕೊನೆಯ ಕಂತಿನ ಹಣ ಹೊಂದಿಸಿ ಎಂದು ಹೇಳಿ ಫೋನ್  ಇಡುವನು . ಅವನು ಹೇಳಿದಂತೆ ಮಾಡುವ  ವ್ಯಕ್ತಿ  ಎಂದು  ತಿಳಿದೂ  ಈ ಫ್ರಾನ್ಸ್ ಮಿಲಿಟರಿ ಮತ್ತು  ಪೋಲೀಸರ  ದಕ್ಷತೆ -ಬಗ್ಗೆ ಅರಿವಿದ್ದ  'ಆರ್ಗನೈಜೇಶನ್ ಅರ್ಮೀ ಸೀಕ್ರೆಟ್'  ಸಂಘಟನೆಯವರು ಈ  ಜಕಾಲ್  ಅವರ ಕೈಗೆ ಸಿಗದೇ ಇರನು ಎಂದು  ಎಣಿಸಿ  ತಾವು  ಭೂಗತರಾಗಿ  ಮುಂದೆ ನಡೆಯುವ  ಚಟುವಟಿಕೆಗಳನ್ನು ನೋಡುವರು!
ತಮ್ಮ ಕಾರ್ಯಕ್ರಮಗಳನ್ನು ಬದಲಾಯಿಸಲು, ನಿಲ್ಲಿಸಲು, ಯಾವುದೇ ಮಾರ್ಪಾಡು ಮಾಡಲು, ತನ್ನ ಸ್ವ ರಕ್ಷಣೆಗೆ  ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಅದ್ಯಕ್ಷರು, ಅವರ ಭದ್ರತೆ ರಕ್ಷಣೆ  ಬಗ್ಗೆ ಚಿಂತಿತರಾದ ಪ್ರಧಾನಿ , ಸಂಪುಟ  ಸದಸ್ಯರು,  ಅಧಿಕಾರಿಗಳು, ಎಸ್ಟೆಲ್ಲ ಪ್ರಯತ್ನಗಳ ನಡುವೆಯೂ  ಜಕಾಲ್ ಹೆಸರಿನ ಶೂಟರ್ನ ನಿಜ ನಾಮಧೇಯ, ಮುಖ ಚಹರೆ  ಕಂಡು ಹಿಡಿಯಲು ಆಗದ ಪೋಲೀಸು, ಮಿಲಿಟರಿಯವರು ...
 
ದಕ್ಷ  ಪ್ರಾಮಾಣಿಕ  ಪೋಲೀಸ್  ಡಿಟೆಕ್ಟಿವ್  ಒಬ್ಬನಿಗೆ ಈ ಜಕಾಲ್ನನ್ನು ಹಿಡಿವ  ಜವಾಬ್ಧಾರಿ ಒಪ್ಪಿಸಿ  ಅವನಿಗೆ  ವಿಶೇಷ ಅಧಿಕಾರ  ಕೊಡುವರು.
ಇತ್ತ ಜಕಾಲ್- ಪೊಲೀಸರು ಮಿಲಿಟರಿಯವರು ತನ್ನ ಹಿಂದೆ ಬಿದ್ದಿರುವ ಹುಡುಕಿ ಕೊಲ್ಲುವ  ಅವರ ಯೋಚನೆ ಅರಿತೂ ಹಲವು ದೇಶಗಳನ್ನು ದಾಟಿ -ನಕಲಿ ಪಾಸ್ಪೋರ್ಟ್ ಮೂಲಕ  ಫ್ರಾನ್ಸ್ನೊಳಕ್ಕೆ ಕಾಲಿರಿಸಿ, ಅಧ್ಯಕ್ಷರ ಹತ್ಯೆಗೆ  ಜಾಗ ಹುಡುಕಿ - ದಿನವೂ ಗೊತ್ತು ಮಾಡಿ  ಆ ದಿನಕ್ಕಾಗಿ ಎದುರು ನೋಡುವನು .
 
ಆ ಅಧಿಕಾರಿಯ ಜಕಾಲ್ನನ್ನು ಹುಡುಕುವ -ಹಿಡಿಯುವ  ಯತ್ನ ಫಲಿಸಿತೆ ?
ಜಕಾಲ್  ಅಧ್ಯಕ್ಷರ ಹತ್ಯೆಗೆಯ್ಯುವನೆ?
ಅಂತ್ಯ ಏನು?
 
 (ಈ ಚಿತ್ರದ ಅಂತ್ಯ  ವೀಕ್ಷಕರನು  ಜೀವಮಾನದ ಅಚ್ಚರಿಗೆ ತಳ್ಳುವುದು!) 
ಇತ್ಯಾದಿಗಳಿಗಾಗಿ ಚಿತ್ರ ನೋಡಿ..
 
- ನೈಜ ಘಟನೆ ಆಧರಿಸಿ  ಬರೆದ  ಕಾದಂಬರಿ  ಮತ್ತು  ಈ ಸಿನೆಮ ಜಗತ್ ಪ್ರಸಿದ್ಧವಾಗಿವೆ .
-  ಕೊನೆಗೂ ಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯ ನೈಜ ಹೆಸರು-ಮತ್ತು ಹಿನ್ನಲೆ ಗೊತ್ತಾಗಿಲ್ಲ! 
ಅದೇ ಹೆಸರಿನ-ಮುಖ ಚಹರೆಯ  ವ್ಯಕ್ತಿಯೊಬ್ಬ(ಚಾರ್ಲ್ಸ್ ಕಾಲ್ತ್ರೋಪ್  ಹೆಸರಿನ ವ್ಯಕ್ತಿ) ಬ್ರಿಟನ್ನಲ್ಲಿ ಸಿಕ್ಕರೂ ಅವನು ಇವನಲ್ಲ ಎಂದೂ ಗೊತಾಯ್ತು!
-  ಈ ಶೂಟರ್ನನ್ನು  ಹೂಳಲು - ಮುಂದೆ ಅವನು  ಪ್ರಸಿದ್ಧಿಗೆ ಬರದೇ ಇರಲಿ ಎಂದು  ಹಲವು ಸಮಾಧಿಗಳನ್ನು  ತೋಡಿ ಒಂದರಲ್ಲಿ  ಈ ಜಕಾಲ್ ನನ್ನು  ಹೂತು ಹಾಕಿರುವರು..(ಇದು ಪಾತಕಿ  ಕಸಬ್ನನ್ನು ನಮ್ಮಲ್ಲಿ ಹೂಳಿದ ವಿಧಾನದ ಹಾಗಿದೆಯಲ್ಲ).
- ತಂತ್ರಜ್ಞಾನ-ಉಪಕರಣಗಳು  ತಕ್ಕ ಮಟ್ಟಿಗೆ ಇದ್ದ  ಆ ಸಮಯದಲ್ಲಿ ತೆಗೆದ ಚಿತ್ರವಾದ್ದರಿಂದ -ಈಗಿನ ಅಥವಾ ಆಗಲೇ ಬಂದಿದ್ದ ಚಿತ್ರಗಳಿಗೆ(ದಿ ಗುಡ್ ದಿ ಬ್ಯಾಡ್ ದಿ ಆಗಲಿ, ಮೆಕನೆಸ್ ಗೋಲ್ಡ್ ಇತ್ಯಾದಿ)  ಹೋಲಿಸಿದರೆ -ಇದರ ಹೆಸರಿನ  ಕಾದಂಬರಿಗೆ ಹೋಲಿಸಿದರೆ-ತುಲನೆ ಮಾಡಿದರೆ ಈ ಚಿತ್ರ ಪೇಲವ ಅನಿಸುವುದು.
 
 ಕಾದಂಬರಿ ಓದಿ ಚಿತ್ರ ನೋಡುವವರಿಗೆ ಹಾಗನ್ನಿಸಿದರೆ -ಇನ್ನೂ ಓದದೆ ಇರುವವರಿಗೆ ಇಷ್ಟ ಆಗುವ ಸಂಭವ ಇದೆ.
ಚಿತ್ರ ನೋಡಿ , ಎಂಜಾಯ್ ಮಾಡಿ..
 
ಚಿತ್ರ ಮೂಲ:
 
ಐ.ಎಂ .ಡೀ.ಬಿ :
 
ಐ.ಎಂ .ಡೀ.ಬಿ  ನನ್ನ ಬರಹ :
 
ವಿಕಿಪೀಡಿಯ:
 
ಟ್ರೈಲರ್ :
 
Rating
No votes yet

Comments

Submitted by partha1059 Fri, 01/18/2013 - 13:47

ಚಿತ್ರ ವಿಮರ್ಷೆ ಚೆನ್ನಾಗಿದೆ, ಆದರೆ ಕಡೆಗು ಅಂತ್ಯ ತಿಳಿಯಲಿಲ್ಲ. ಕನ್ನಡದಲ್ಲಿ ಡಾ||ರಾಜ್ ಕುಮಾರ್ ರವರು ’ಗುರಿ’ ಚಿತ್ರ ತೆಗೆದಾಗ ಅದನ್ನು ಜಾಕಲ್ಸ್ ಡೆ ಗೆ ಹೋಲಿಸುತ್ತಿದ್ದ ನೆನಪು ಆದರೆ ಎರಡು ಬೇರೆ ಬೇರೆ ಕತೆ ಹೌದು.

Submitted by venkatb83 Sat, 01/19/2013 - 19:45

In reply to by partha1059

ಗುರುಗಳೇ- ಡಾ" ರಾಜ್ ಅವರ ಗುರಿ ಚಿತ್ರವನ್ನು ನಾ ಹಲವು ಬಾರಿ ನೋಡಿರುವೆ..
ಅದರ ಕಥಾ ವಸ್ತು -ಮತ್ತು ಈ ಚಿತ್ರದ ಕಥಾ ವಸ್ತುವಿಗೆ ಭಲೇ ವ್ಯತ್ಯಾಸವಿದೆ ಮತ್ತು ಯಾವುದೇ ರೀತಿಯಲ್ಲಿ ಎರಡೂ ಚಿತ್ರಗಳ ಮಧ್ಯೆ ಸಾಮ್ಯತೆ ಇಲ್ಲ...
ನೀವು ಎಂದಾದರೂ ಸಮಯ ಸಿಕ್ಕಾಗ ಈ ಚಿತ್ರದ ಹೆಸರಿನ ಪುಸ್ತಕ ಸಿಕ್ಕರೆ ಓದಿ-ಚಿತ್ರಕ್ಕಿಂತ ಕಾದಂಬರಿಯೇ ಇಷ್ಟ ಆದೀತು...
ಹಾಗಂತ ಚಿತ್ರವೇನೂ ಕೆಟ್ಟದಾಗಿಲ್ಲ -ಆದರೆ ಕಾದಂಬರಿ ಓದಿ ಅದನು ಕಲ್ಪಿಸಿಕೊಂಡು ಚಿತ್ರವೂ ಹಾಗೇ ಎಂದು ನೋಡಿದರೆ ನಿರಾಶೆ ಆಗುತ್ತೆ...
ಅಸ್ಟು ದೊಡ್ಡ ಕಾದಂಬರಿಯ ಹಲವು ಅಧ್ಯಾಯಗಳನ್ನು ಸಿನೆಮ ಮಾಡುವದು ಕಸ್ಟಾನೆ ..!

ಈ ಚಿತ್ರದ ಅಂತ್ಯ: ಹೇಳಿದರೂ ನಸ್ಟ ಇಲ್ಲ...!!
ಕಾರಣ- ಅಂತ್ಯ ತಿಳಿದೂ (ನೈಜ ಘಟನೆ ಅಲ್ಲವೇ? ಹೀಗಾಗಿ )ಕಾದಂಬರಿ ಓದಿ ಸಿನೆಮ ನೋಡಿದ ಹಲವು ಜನ ಇರುವರು ..
ಅಂತ್ಯದಲ್ಲಿ ಪೊಲೀಸರು ಈ ವ್ಯಕ್ತಿಯನ್ನೇನೋ ಸಾಯಿಸುವರು-
ಅವನೂ ಅದ್ಯಕ್ಷರತ್ತ ಗುಂಡು ಹಾರಿಸುವನು ಆದರೆ ಅದ್ಯಕ್ಷರು ಯಾರೊಡನೆಯೋ ಮಾತಾಡಲು ಮುಂದಕ್ ಬಾಗಿದಾಗ ಗುರಿ ತಪ್ಪಿ ಗುಂಡು ಎಲ್ಲೋ ನುಗ್ಗುವುದು :(((
ಆಗಲೂ ಪೊಲೀಸರು ಖುಷಿ ಪಡುವಂತಿಲ್ಲ ..
ಕಾರಣ:
ಸತ್ತವನು -ಆ ಹೆಸರಿನವನಲ್ಲ -!
ಆ ಹೆಸರಿನವನು - ಇನ್ನು ಸತ್ತಿಲ್ಲ..!!
ಹಾಗಾದರೆ ಸತ್ತವನ್ಯಾರು?
ಬದುಕಿದವನು ಯಾರು?
ಇಬ್ಬರಲ್ಲಿ ಯಾರು ನಿಜವಾದ ಕೊಲೆಗಾರ???!!!

ಪ್ರತಿಕ್ರಿಯೆಗೆ ನನ್ನಿ

ಶುಭವಾಗಲಿ.

\|