ಧರಮ್ ರಾಜೀನಾಮೆ
ಕಡೆಗೂ ಧರಮ್ ಸಾಹೇಬರು ಮುಖ್ಯಮಂತ್ರಿ ಕುರ್ಚಿಯನ್ನು ಬಿಟ್ಟಿದ್ದಾರೆ :-) .ಕಾಂಗ್ರೆಸ್ ಒಂದು ಸೋನಿಯ ಕೃಪಾಪೋಷಿತ ಭಜನಾ ಮಂಡಳಿ.ಅಲ್ಲಿ ಯಾರಾದ್ರೂ ಕುರ್ಚಿ ಮೇಲೆ ಕೂತ್ರೆ ಅದಕ್ಕೆ ಸೋನಿಯಾ ಗಾಂಧಿನೇ ಕಾರಣ,ಕುರ್ಚಿಯಿಂದ ಎದ್ರೆ ಹೈಕಮಾಂಡ್ ಆದೇಶವೇ ಕಾರಣ.ಅಲ್ಲಾ ಸ್ವಾಮಿ ವೋಟ್ ಹಾಕಿದ್ದು ನಾವು ,ಗೆದ್ದದ್ದು ನಮ್ಮ ವೋಟ್ ನಿಂದ!ಇವ್ರು ಯಾಕೆ ಕಲಿಯುವುದಿಲ್ಲ, "ಭಾಗುವುದನ್ನ,ಭಾಗದೇ ಸೆಟೆದು ನಿಲ್ಲುವುದನ್ನ"(ಅಡಿಗರ ಕವನ,ಸರಿಯಾಗಿ ನೆನಪಿಲ್ಲ.ತಪ್ಪಿದ್ದರೆ ತಿದ್ದಿ).
ಇನ್ನು ಮೇಲೆ ಕುಮಾರ ಸ್ವಾಮಿಯವರ ಆಡಳಿತ.ಹೆಚ್ಚಿನ ಭರವಸೆ ಎನೂ ಇಲ್ಲ.ಆದ್ರೆ ಒಂದಂತೂ ಮೆಚ್ಚಬೇಕು, 10 ವರ್ಷದ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ(ಇದಕ್ಕೆ ದೇಗೌ ಅವರ ಬೆಂಬಲ ಇಲ್ಲ ಎಂದು ನಂಬಿದ್ದೇನೆ.ಸತ್ಯ ದೇಗೌ ಮತ್ತು ಅವರ ಕುಮಾರನಿಗೆ ಮಾತ್ರ ಗೊತ್ತು).
Rating
Comments
ಕಾಂಗ್ರೆಸ್ ನ ಹೈಕಮಾಂಡ್ ಸಂಸ್ಕೃತಿ