ನಕ್ಕು ಮರೆತು ಬಿಡಿ ...
ಶೀಮ ತನ್ನ ಹೊಸ ಮೆಟ್ರೋ ರೈಲಿನೊಡನೆ ಆಟವಾಡುತ್ತಿದ್ದ.
ಈಗ ಅವನು ತನ್ನ ರೈಲನ್ನು ನಿಲ್ಲಿಸಿ, ಹೀಗೆ ಪ್ರಕಟಣೆ ಮಾಡಿದ, 'ಪ್ರಯಾಣಿಕರ ಗಮನಕ್ಕೆ: ಯಾವೊನ್ ಗಾದ್ರೂ ಇಳೀಬೇಕಂದ್ರೆ ಇಲ್ಲೇ ಇಳ್ಕೊಂಡ್ ಸಾಯ್ರೋ. ನನ್ ಮಕ್ಳಾ, ಇದರ್ ನಂತ್ರಾ ಇನ್ಯಾವ ಸ್ಟೇಷನ್ನೂ ಇಲ್ಲಾ'.
ಇದನ್ನು ಕೇಳಿಸಿಕೊಂಡ ಅವನ ತಾಯಿಗೆ ಸಿಟ್ಟು ಬಂತು. ಅವಳು ಹೇಳಿದಳು, 'ಶೀಮ, ಈ ಥರದ ಅಸಭ್ಯ ಭಾಷೆ ಪ್ರಯೋಗ ಮಾಡಿದ್ದಕ್ಕೆ ನಿಂಗೆ ಶಿಕ್ಷೆ. ಕೊಡುತ್ತಿದ್ದೇನೆ. ಎರಡು ಘಂಟೆ ನಿನ್ನನ್ನು ಕೋಣೆಯಲ್ಲಿ ಕೂಡಿ ಹಾಕುತ್ತಿದ್ದೇನೆ. ನೀನು ಹೊರಬಂದ ಮೇಲೆ ರೈಲಿನ ಜೊತೆ ಆಟ ಆಡಬೇಕೆಂದರೆ ಸಭ್ಯ ಭಾಷೆ ಉಪಯೋಗಿಸಬೇಕು'.
ಎರಡು ಘಂಟೆಗಳ ನಂತರ ರೂಮಿನಿಂದ ಹೊರಬಂದ ಶೀಮ ಮತ್ತೆ ರೈಲಿನ ಆಟ ಆಡುತ್ತ ಪ್ರಕಟಣೆ ಮಾಡಿದ, 'ಪ್ರಯಾಣಿಕರ ಗಮನಕ್ಕೆ: ಇದು ಕೊನೆಯ ನಿಲ್ದಾಣವಾದ್ದರಿಂದ ಪ್ರಯಾಣಿಕರೆಲ್ಲರೂ ಇಳಿಯಬೇಕಾಗಿ ವಿನಂತಿ. ನಿಮ್ಮ ಪ್ರಯಾಣ ಸುಖಕರವಾಗಿತ್ತು ಎಂದು ಆಶಿಸುತ್ತೇವೆ. ನಿಮ್ಮ ಸೇವೆಗೆ ಇನ್ನೊಮ್ಮೆ ಅವಕಾಶ ಕೊಡಿ. ನಮಸ್ಕಾರ'.
ಇದನ್ನು ಕೇಳಿ ಖುಶಿಯಾದ ಶೀಮನ ಅಮ್ಮ ಅಡಿಗೆ ಮನೆಗೆ ತೆರಳುತ್ತಿದ್ದಂತೆ, ಶೀಮ ಮುಂದುವರಿಸಿದ. 'ಅಂದ ಹಾಗೇ, ನನ್ ಮಕ್ಳೆ, ಎರಡ್ ಘಂಟೆ ಲೇಟ್ ಆಯ್ತು ಅಂತ ಬೊಬ್ಬೆ ಹೊಡೆಯೋರ್ ಎಲ್ಲ ಈ ಹುಚ್ನಮ್ಮಮ್ಮನ್ನೇ ಕೇಳ್ಕೊಳ್ಳಿ. ನನ್ ಸುದ್ದಿಗ್ ಬಂದ್ರೆ ಬುರ್ಡೆ ಒಡೆದ್ ಬುಡ್ತೀನಿ'.
[ಆಧಾರಿತ]
Comments
ಉ: ನಕ್ಕು ಮರೆತು ಬಿಡಿ ...
In reply to ಉ: ನಕ್ಕು ಮರೆತು ಬಿಡಿ ... by kavinagaraj
ಉ: ನಕ್ಕು ಮರೆತು ಬಿಡಿ ...
ಉ: ನಕ್ಕು ಮರೆತು ಬಿಡಿ ...
In reply to ಉ: ನಕ್ಕು ಮರೆತು ಬಿಡಿ ... by partha1059
ಉ: ನಕ್ಕು ಮರೆತು ಬಿಡಿ ...