ನಗೆಹನಿಗಳು ( ಹೊಸವು ?) - ಇಪ್ಪತ್ತೊಂಬತ್ತನೇ ಕಂತು

ನಗೆಹನಿಗಳು ( ಹೊಸವು ?) - ಇಪ್ಪತ್ತೊಂಬತ್ತನೇ ಕಂತು

- 113 -

ಸಂಪಾದಕ - ಏನ್ರೀ , ಈ ಕತೆ ನೀವೇ ಬರೆದದ್ದೋ ?
ಕತೆಗಾರ - ಹೌದು .
ಸಂಪಾದಕ - ನಾನೇ ಧನ್ಯ , ಕಣ್ರೀ , ಸಣ್ಣ ಕತೆಗಳ ಜನಕ , ಕನ್ನಡದ ಆಸ್ತಿ , ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನ ಕಣ್ಣಾರೆ ಕಾಣ್ತೀನಿ ಅಂತ ಕನಸು ಮನಸಲ್ಲೂ ನೆನೆಸಿರಲಿಲ್ಲ !

- 114 -

-ನನ್ನ ಸಾಲವನ್ನು ಈಗಲೇ ವಾಪಸ್ ಮಾಡು
- ಈಗ ನನ್ನ ಬಳಿ ಹಣವೇ ಇಲ್ಲ
- ನನ್ನ ಹಣವನ್ನು ಈಗ ಕೊಡದಿದ್ದರೆ ನಿನ್ನ ಎಲ್ಲಾ ಸಾಲಗಾರರಿಗೆ ನೀನು ನನ್ನ ಸಾಲವನ್ನು ವಾಪಸ್ ಮಾಡಿದ್ದೀ ಅಂತ ಹೇಳಿ ಬಿಡುತ್ತೇನೆ ಅಷ್ಟೇ.

-115 -

ಉದ್ಯೋಗಿ - ಸರ್ , ನಾನು ಬೇಗ ಮನೆಗೆ ಹೋಗಲು ಅನುಮತಿ ಕೊಡಿ, ನಾನು ಹೆಂಡತಿಯೊಂದಿಗೆ ಪೇಟೆಗೆ ಹೊಗಿ ಬಟ್ಟೆ-ಬರೆ ಶಾಪಿಂಗ್ ಮಾಡಬೇಕು .
ಬಾಸ್ - ಸಾಧ್ಯವಿಲ್ಲ , ಎಷ್ಟೊಂದು ಕೆಲಸ ಬಿದ್ದಿದೆ ಇಲ್ಲಿ . ಕೂತು ಮುಗಿಸಿ.
ಉದ್ಯೋಗಿ - ತುಂಬಾ ಧನ್ಯವಾದಗಳು , ಸರ್ , ನಿಮ್ಮ ಈ ಉಪಕಾರ ಮರೆಯುವುದಿಲ್ಲ

- 116 -
- ನಾನು ಆ ಉದ್ಯೋಗ ಬಿಟ್ಟುಬಿಟ್ಟೆ
- ಏಕೆ ?
- ಅಲ್ಲಿ ಏನೂ ಭವಿಷ್ಯವೇ ಇರಲಿಲ್ಲ ; ಮಾಲಕನ ಮಗಳ ಮದುವೆ ಅದಾಗಲೇ ಆಗಿಬಿಟ್ಟಿತ್ತು.

Rating
No votes yet