ನಗೆಹನಿಗಳ ಅನುವಾದ - 47 ನೇ ಕಂತು
ರಜಾದಿನಗಳಲ್ಲಿ ಪ್ರವಾಸ ಹೋಗುವ ಬಗ್ಗೆ ಇವತ್ತು ನನ್ನ ಹೆಂಡತಿ ಭಾರೀ ಜಗಳ ಮಾಡಿದಳು. ನನಗೆ ಪ್ಯಾರಿಸ್ ಗೆ ಹೋಗಬೇಕು ಅಂತ , ಅವಳಿಗೆ ನನ್ನ ಜತೆ ಬರಬೇಕು ಅಂತ.
----
ತಾಯಿ - ಪುಟ್ಟಾ, ಇವತ್ತು ಶಾಲೆಯಲ್ಲಿ ಏನು ಮಾಡಿದಿರಿ?
ಪುಟ್ಟ - ಇವತ್ತು ಸ್ಫೋಟಕಗಳನ್ನು ಮಾಡಿದಿವಿ
ತಾಯಿ - (ಶಾಲೆಯಲ್ಲಿ ಈಗ ಏನೇನೆಲ್ಲ ಕಲಿಸುತ್ತಾರೋ! ) ನಾಳೆ ಶಾಲೆಯಲ್ಲಿ ಏನು ಮಾಡುತ್ತೀರಿ ?
ಪುಟ್ಟ - ಶಾಲೆ ? ಯಾವ ಶಾಲೆ ?
-------
-------
ಪತ್ನಿ ತನ್ನ ತಾಯಿಗೆ ಫೋನ್ ಮಾಡಿದಳು: "ಇಂದು ನನ್ನ ಗಂಡನೊಂದಿಗೆ ತುಂಬಾ ಜಗಳ ಆಯಿತು, ನಾನು ನಿನ್ನೊಂದಿಗೆ ಬಂದು ಇರುತ್ತೇನೆ
ತಾಯಿ: ಇಲ್ಲ , ಅವನ ತಪ್ಪಿಗೆ ಶಿಕ್ಷೆ ಆಗಲೇಬೇಕು. ನಾನೇ ನಿನ್ನೊಂದಿಗೆ ವಾಸಿಸಲು ಬರುತ್ತೇನೆ.
-----------
'ರೀ, ನಾನು ನೀರಿಗೆ ಹಾರಿದರೆ ನನ್ನನ್ನು ಉಳಿಸುತ್ತೀರಾ?'
'ಚಿನ್ನಾ, ನಾನು ಹೌದು ಎಂದು ಹೇಳಿದರೆ, ನೀನು ನೀರಿಗೆ ಹಾರುತ್ತೀಯಾ?'
-----------
Rating