ನಗೆ! ಬಗೆ-ಬಗೆ !!!

ನಗೆ! ಬಗೆ-ಬಗೆ !!!

* ಹೆಂಡತಿ ಕೇಳಿದಳು : ಏನ್ರೀ, ನಮ್ ಸಿಂಗಾರಿಗೆ ಒಂದ್ ಗಂಡು ನೋಡಿದ್ವಲ್ಲಾ ಅದೇ ಸಾಫ್ಟ್ ವೇರ್ ಇಂಜಿನೀಯರ್ ಏನಾಯ್ತ್ರೀ ಅದು? ಆ ಮಧ್ಯಸ್ತ ಏನ್ ಹೇಳ್ದ?

ಗಂಡ : ಏನ್ ಹೇಳ್ದ ಅಂತ ಹೇಳ್ ಬಿಡ್ಲಾ? ಹೇಳೇ ಬಿಡ್ಲಾ?

ಹೆಂಡತಿ : ಹೇಳ್ರೀ, ಅದನ್ನೇ ಅಲ್ವಾ ಕೇಳ್ತಿರೋದು? ನಮ್ ಸಿಂಗಾರಿ ಏನಾಗಿದಾಳೆ? ತುಂಬಾ ಸುಂದರಿ.
ಗಂಡ : " ಅದು ಆಗ್ಲಿಲ್ಲ" ಕಣೆ.

ಹೆಂಡತಿ : ಯಾಕೇ ಅಂತ ಕೇಳ್ಲಿಲ್ಲವೇನ್ರೀ?

ಗಂಡ : ಕೇಳ್ದೇ ಬಿಡ್ತೀನೇನೆ? ನೀನೂ ಸರಿ.

ಹೆಂಡತಿ : ಏನ್ ಹೇಳಿದ್ರು ಇಷ್ಟಕ್ಕೂ?

ಗಂಡ : " ಅದೇ ನಿನ್ನ ಮಗಳು ಓದಿರೋದು ಎರಡಕ್ಷರ ( ಏ, ಬಿ.), ಅದೂ ತಳಕಂಬಳಕ (ಬಿ. ಏ.), ಆಗಲ್ಲ ಅಂದ್ರು."
ಹೆಂಡತಿ : ಹೌದೇ............? ಹೌದಲ್ಲವೇ?.......................

* * *

ಹೆಂಗಸು : ಗೊತ್ತೇನ್ರೀ? ಶಾಸ್ತ್ರಿಗಳ ಮಗಳ ಮದುವೆ ಮಾಡಿದ್ರಲ್ಲಾ, ಅವರ ಅಳಿಯ ಸಾಫ್ಟ್ ವೇರ್ ಇಂಜಿನೀಯರ್ ಅಂತ, ಅಲ್ವಂತೆ ಈಗ.
ಗಂಡಸು: ಯಾಕಂತೆ? ಶಾಸ್ತ್ರಿಗಳಿಗೆ ಹೇಗೆ ಮೋಸ ಆಯಿತು?
ಹೆಂಗಸು: ಅದೇ, "ಏನ್ ಕೆಲಸ? " ಅಂತ ಶಾಸ್ತ್ರಿಗಳು ಕೇಳಿದಾಗೆ, ಹುಡುಗ: "ಮಾರ್ಕೆಟಿಂಗ್ ಅಂದನಂತೆ". ಶಾಸ್ತ್ರಿಗಳು "ಏನ್ ಮಾರ್ಕೆಟಿಂಗ್ "? ಅಂತ ಕೇಳಿದಾಗ " ಶಾರ್ಟ್ ವೇರ್" ಅಂತ ಹೇಳಿದ್ದೂ ಶಾಸ್ತ್ರಿಗಳಿಗೆ "ಸಾಫ್ಟ್ ವೇರ್" ಅಂತ ಕೇಳಿಸ್ತಂತೆ.
ಗಂಡಸು: ಆ..ಆಮೇಲೆ?
ಹೆಂಗಸು: ಆಮೇಲಿನ್ನೇನು? ಈಗ ಹುಡುಗಿಯರ ಶಾರ್ಟ್ ವೇರ್ ಮಾರ್ಕೆಟಿಂಗ್ ನಲ್ಲಿ ಸೇಲ್ಸ್ ಏಜೆಂಟ್ ಆಗಿ ಕೆಲಸ ಮಾಡ್ತಿದ್ದಾನೆ.
ನೀವ್ ಸ್ವಲ್ಪ ಹುಶಾರಾಗಿರಿ, ನಮ್ಮ ನೀಲುಗೆ ಗಂಡು ನೋಡುವಾಗ, ಸಾಫ್ಟ್ ವೇರ್ ಅಂದ್ರೇ, ಸರಿಯಾಗೆ ಕೇಳ್ಕೊಳ್ಳಿ.

* * *

Rating
No votes yet