ನನ್ನಾಕೆ

ನನ್ನಾಕೆ

ನನ್ನಾಕೆ ನಿಂತ ನೀರೋಳಗೊಂದು ಕಮಲ

ನನ್ನಾಕೆಯಿವಳು

ಊರು ತೀರ ಕೇರಿಯಲ್ಲ ಹುಡುಕಿ ಹುಡುಕಿ

ಬಂದವಳು ನನ್ನಾಕೆ

ನಮ್ಮಾವನ ಪ್ರೀತಿಯ ಸಾಕ್ಷಿಯಿವಳು

ನನ್ನಾಕೆ

ನನ್ನ ಕಂದನ ಅಮ್ಮನಿವಳು

ನನ್ನ ಪ್ರೀತಿಯ ಮುಡಿಪು ಇವಳು

ನನ್ನಾಕೆ

ದುರ್ಗದ ದುರ್ಗಿಯಿವಳು

ಸ್ವರ್ಗದ ರಾಣಿಯಿವಳು

ಬಯಕೆಯುಣಿಸಿ ತಂಪೆರೆವ

ಚಂದಿರನ ಊರಿನವಳು

ನನ್ನಾಕೆ

ನನ್ನ ಕಣ್ಣೀರಿಗೆ ಭೂಮಿಯಿವಳು

ನನ್ನ ತಾಪಕ್ಕೆ ಭೋರ್ಗರೆವ ಮಳೆಯಿವಳು

ನನ್ನಾಕೆ

ಚಿತ್ತದ ಪಿತ್ತವ ನೆತ್ತಿಗೇರಿಸಿ

ಕಿಲ ಕಿಲ ನಗುವ ಬೆಳದಿಂಗಳಿವಳು

ನನ್ನಾಕೆ.

 

ನನ್ನಾಕೆ , ನನ್ನನ್ನು ಮತ್ತು ಈ ಲೋಕವನ್ನು ಬಿಟ್ಟು ಬಾರದ ಊರಿಗೆ ತೆರಳಿ ಇಂದಿಗೆ ಎರಡು ವರ್ಷ, ಅವಳ "ನೆನಪಿನಲ್ಲಿ "

Rating
No votes yet

Comments