ನನ್ನ ಕನಸು

ನನ್ನ ಕನಸು

ನನಗೆ ಬೆಟ್ಟದಷ್ಟು ಕನಸು ಅದರಲ್ಲಿ ಒಂದು ಈಡೇರಲಿಲ್ಲವಲ್ಲಾವೆಂಬ ಕೊರಗು ಇತ್ತೀಚಿಗೆ ಯಾಕೋ ನನ್ನ ಮನವು ಸಂಕಟ ಪಡುತ್ತಿದೆ. ತಾನು ಮಾಡಿದ ಕೆಲಸ / ಪರಿಶ್ರಮ / ಓದು ಎಲ್ಲಾ ನಿಷ್ಪ್ರಯೋಜಕವಾಗುತ್ತಿರುವುದು ಯಾರಿಗಾದರು ದುಃಖ ತರುವ ಸಂಗತಿಯೇ. ನಾನು ಬಯಸುವುದೊಂದು ಅದು ಆಗುವುದು ಇನ್ನೊಂದು ಕನಸ್ಸುಗಳು ಯಾವುದೇ ಅಡೆತಡೆಯಿಲ್ಲದೇ ಬೆಳೆದು ಹೆಮ್ಮರವಾಗಿ ಬಿಡುತ್ತವೆ ಅವಕ್ಕೆ ಯಾವುದೇ ರೀತಿಯ ಕಡಿವಾಣವಿಲ್ಲ. ಅವುಗಳ ಈಡೇರಿಕೆಗೆ ಮಾಡುವ ಪ್ರಯತ್ನ ವಿಪಲವಾದರೆ ಜೀವನವೇ ಅಪ್ರಯೋಜಕವೆನೆಸಿಬಿಡುತ್ತದೆ. ಆದರೆ ತಾಳ್ಮೆ ಕಳೆದುಕೊಂಡರೆ ಅನಾಹುತಗಳಿಗೆ ಆಹುತಿಯಾಗೆಬೇಕಾಗುತ್ತದೆ. ನನ್ನ ಜೀವನದಲ್ಲೇ ಯಾಕೇ ಹೀಗಾಗುತ್ತೇ ತಿಳಿಯದು ನನ್ನ ಹಣೆಬರಹವೇ ಸರಿಯಿಲ್ಲ ಅನಿಸುತ್ತೆ. ನಾನು ಚಿಕ್ಕಂದಿನಿಂದಲೂ ಬರೀ ನಿರಾಸೆ, ನೋವುಗಳೇ ತುಂಬಿರುವ ಮನಕ್ಕೆ ಒಂದಾದರೂ ಗೆಲವು, ಸಂತೋಷ ಬೇಕಲ್ಲವೇ, ಆ ಸುಂದರ ಕ್ಷಣಕೋಸ್ಕರ ನನ್ನ ಮನವು ಹಗಲು ರಾತ್ರಿಯೆನ್ನದೇ ಕಾಯುತ್ತಿದೆ. ಯಾವಾಗ ಬರುತ್ತದೋ, ಆದಷ್ಟು ಬೇಗಬರಲಿ ಮನವು ತಾಳ್ಮೆ ಕಳೆದುಕೊಳ್ಳುವ ಮುನ್ನ ಬಂದರೆ ಎಷ್ಟು ಚೆನ್ನ, ಎಲ್ಲಾ ನನ್ನ ಕನಸ್ಸು, ಕಲ್ಪನೆ ಅಷ್ಟೇ.

Rating
No votes yet

Comments