ನನ್ನ ಕಲ್ಪನೆಯ ಚೆಲುವೆ
ನನ್ನ ಮನದಾಳದಲ್ಲಿ ಸದಾ ಮಿಡಿಯುತ್ತಿರುವ ನನ್ನ ಕಲ್ಪನೆಯ ಚೆಲುವೆ. ಎಲ್ಲಿ ಅಡಗಿರುವಳೋ ತಿಳಿಯದು, ನಾನು ಅನೇಕರಲ್ಲಿ ನನ್ನ ಚೆಲುವೆಯನ್ನು ಹುಡುಕಲು ಪ್ರಯತ್ನಿಸಿದರೂ ಸಿಗುತ್ತಿಲ್ಲ. ಅಪ್ಪಟ ಕನ್ನಡತಿಯಾದ ನನ್ನ ಕನಸಿನ ಹುಡುಗಿ, ನನ್ನ ಮನದ ಕನ್ನಡಿಯಂತೆ ಪ್ರತಿಬಿಂಬವಾಗಿ ನಿಲ್ಲಬೇಕೆಂಬ ಬಯಕೆ. ಪ್ರೀತಿಯ ಜಗತ್ತಿನಲ್ಲಿ ದೃವತಾರೆಯಾಗಿ ಸದಾ ನಗು-ನಗುತ್ತಾ ಮಿನುಗುತ್ತಾ, ನೋವು ಪದವೇ ತಿಳಿಯದಂತೆ ದೇವಕನ್ಯೆಯಂತೆ ಕಂಗೊಳಿಸಬೇಕು. ನನ್ನ ಭಾವನೆಗಳ ಧ್ವನಿ ಅವಳಾಗಬೇಕು.
Rating
Comments
ಉ: ನನ್ನ ಕಲ್ಪನೆಯ ಚೆಲುವೆ
In reply to ಉ: ನನ್ನ ಕಲ್ಪನೆಯ ಚೆಲುವೆ by ಗಣೇಶ
ಉ: ನನ್ನ ಕಲ್ಪನೆಯ ಚೆಲುವೆ