ನನ್ನ ಚಿತ್ರ.. ನಿಮ್ಮ ಕಲ್ಪನೆ.. !!!

ನನ್ನ ಚಿತ್ರ.. ನಿಮ್ಮ ಕಲ್ಪನೆ.. !!!

ಸಂಪದಿಗರೇ..

ಈ ಚಿತ್ರಕ್ಕೆ.. ನಿಮ್ಮ ಕಲ್ಪನೆ ಸೇರಿಸಿ.. ಒಂದಷ್ಟು ಬರಹ, ಶೀರ್ಷಿಕೆ ಅಥವಾ ಕವನ ನೀಡಬಹುದೇ?

ನಿಮ್ಮ ಪ್ರಯತ್ನಕ್ಕಾಗಿ ಕಾದಿರುವೆ.. :)

 

ಹಾಗೇ.. ಇದರ ಬಗ್ಗೆ ಒಂದೆರೆಡು ಮಾತು..

ಇದು ಒಂದು ಭಿನ್ನ ಕೋನದಿಂದ ತೆಗೆದ ಸಾಮಾನ್ಯ ನೋಟದ ಚಿತ್ರ.. ಇದರ ನೇರ ನೋಟದ ಚಿತ್ರವನ್ನ ಸದ್ಯದಲ್ಲೇ ಪ್ರಕಟಿಸುವೆ..

ಆಗ ನಿಮ್ಮ ಯೋಚನೆಗಳು ಇನ್ನೂ ಭಿನ್ನವಾಗಬಹುದು.. ಇದರ ನೇರ ನೋಟದಲ್ಲಿ ಅಂತಹ ಆಕರ್ಷಣೆ ಎನೂ ಇಲ್ಲ.. ಆದರೆ.. ನನಗೆ, ನನ್ನ ಮನಸ್ಸು.. ಇಲ್ಲ.. ಇಲ್ಲೇನೋ ಇದೆ ಅಂತ ಒತ್ತೊತ್ತಿ ಹೇಳಿದಾಗ.. ಅದರ ಬಳಿ ಸಾರಿ, ನಾ ತೆಗೆದ ವಿಭಿನ್ನ ಕೋನದ ಚಿತ್ರಗಳಲ್ಲಿ.. ಇದು ಒಂದು.. ಇದನ್ನ ಕಂಡವರೆಲ್ಲ.. ಇದನ್ನ ನೋಡಿದಾಗ ಒಂದೊಂದು ರೀತಿಯಲ್ಲಿ ತಮ್ಮ ಯೋಚನೆಗಳನ್ನ ವ್ಯಕ್ತಪಡಿಸಿದಾಗ.. ಇದನ್ನ ನಮ್ಮ ಸಂಪದ ಬಳಗದೊಂದಿಗೆ ಹಂಚಿಕೊಳ್ಳಲೇಬೇಕೆಂಬ ತುಡಿತ.. ಈ ಚಿತ್ರವನ್ನ ನಿಮ್ಮ ಮುಂದೆ ಇಡುವಂತೆ ಮಾಡಿದೆ.

 

ಕುತೂಹಲವಿದ್ದಲ್ಲಿ.. ತಡವೇಕೆ ಅನ್ನುವುದಾದಲ್ಲಿ.. ಈ ಕೆಳಕಂಡ ಕೊಂಡಿಯಲ್ಲಿ.. ಇದರ ಜೊತೆಯ ಚಿತ್ರಗಳು ಲಭ್ಯವಿದೆ..

  ಶಿವಮೊಗ್ಗ ಮತ್ತು ನಾನು..

 

ನಿಮ್ಮೊಲವಿನ,

ಸತ್ಯ.. :)

Rating
No votes yet

Comments