ನಮನ-೦೪: ಕನ್ನಡಿಗರ ಉದಾರತೆ - ಬಗ್ಗೋ? ಫೀಚರ್ರೋ?

ನಮನ-೦೪: ಕನ್ನಡಿಗರ ಉದಾರತೆ - ಬಗ್ಗೋ? ಫೀಚರ್ರೋ?

ಏನ್ಗುರು‍ನಲ್ಲಿರೋ [:http://enguru.blogspot.com/2007/08/blog-post_16.html|ಒಂದು ಲೇಖನಕ್ಕೆ] ಬಂದಿರೋ ಮೊದಲನೆ ಕಮೆಂಟ್ನಲ್ಲಿ ಅನಿವಾರ್ಯ ಅನ್ನುವವರು ತಮ್ಮ ಸ್ವಂತ ಅನುಭವ ಬರೆದಿದ್ದಾರೆ, ಓದಿ ನನಗೆ ಅನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ.

"

......................................................................

ನಿಜ ಹೇಳ್ಬೇಕು ಅಂದ್ರೆ ನಂಗೆ ಹಿಂದಿ ಇಷ್ಟ, ಇದರ ಬಗ್ಗೆ ಸಾಕಷ್ಟ್ ವಾದ-ವಿವಾದ ಆಗಿದೆ ಇಲ್ಲಿ. ಅದಿರ್ಲಿ. ನನ್ನ ಮಗಳಿಗೆ ಹಿಂದಿ ಬರಲ್ಲ, ಬರೀ ಕನ್ನಡ ಮಾತಾಡ್ತಾಳೆ, ಅಲ್ಪಾ ಸ್ವಲ್ಪಾ ಆಂಗ್ಲಾನೂ ಹೊಡೀತಾಳೆ. ಈಗ ತಾನೆ, ಕೆಲವು ದಿನಗಳ ಮುಂಚೆ, ಪಕ್ಕದ ಮನೆಗೆ ಡೆಲ್ಹಿಯವರು ಬಾಡಿಗೆಗೆ ಬಂದ್ರು. ನನ್ನ ಮಗಳಿಗೆ ಹಿಂದಿ ಬರಲ್ಲ ಅಂತ ಅವರಿಗೆ ಆಶ್ಚರ್ಯ. ಇರ್ಲಿ. ಆದ್ರೆ "ಹೆದ್ರುಕೊ ಬೇಡಿ, ನಾವು ಅವಳ್ಗೆ ಹಿಂದಿ ಕಲ್ಸೇ ಕಲುಸ್ತೀವಿ, ನಮ್ ಜೊತೆ ಸ್ವಲ್ಪ ಇದ್ದ್ರೆ ಬೇಗ ಕಲ್ತ್ಕೋತಾಳೆ" ಅಂದ್ರು. ನಂಗೆ ನನ್ ಮಗ್ಳು ಹಿಂದಿ ಕಲೀಲಿ ಅಂತೇನೊ ಇದೆ, ನಿಜ. ಆದ್ರೆ ಸುಮ್ನೆ ತಮಾಷೆಗೆ, ನಾವು ಅವ್ರ್ ಮಗ್ಳುಗೆ ಕನ್ನಡ ಕಲಿಸ್ತೀವಿ ಬಿಡಿ ಅಂದ್ರೆ "ಬೇಡ ಬೇಡ confuse ಆಗೋಗುತ್ತೆ" ಅನ್ನೋ ತರ ನಕ್ಕೊಂಡ್ ಹೇಳುದ್ರು. ಸ್ವಲ್ಪ ಧುಃಖ ಆಯ್ತು. ಅಲ್ಲಾ, ನಮ್ಮ ಭಾಷೆಯನ್ನ ಬೇರೊಂದು ಭಾಷೆಯ ಹಾಗಾದ್ರೂ ಕಲೆತುಕೊಳ್ಳಕ್ಕೆ ಏನ್ ಕಷ್ಟ ಇವುರ್ಗೆ ಅಂತ ಅನ್ನಿಸ್ತು. ಇದು ಒಂದು mentality problem ಅನ್ನುಸ್ತು. ಈ ಮನೋಭಾವ ಎಲ್ಲಾರ್ಗೂ ಇರಲ್ಲ್ಲ ಗೊತ್ತು, ಆದ್ರೆ ಕೆಲವರಿಗೆ ಹೀಗೆ ಇರುತ್ತಲ್ಲ ಅಂತ ಬೇಸರ.

.................................................................................

"

ಅನಿವಾರ್ಯ ಹೇಳಿದ 'ದಿಲ್ಲಿಯಿಂದ ಬಂದ ಪಕ್ಕದ ಮನೆಯವರ' ಪ್ರಸಂಗ ಬಹಳ ಯೋಚನೆಗೆ ಗುರಿ ಮಾಡಿತು.
ಇಲ್ಲಿ ಇವತ್ತು ಅನಿವಾರ್ಯ ಮಾಡಿರೋದನ್ನು (ಮಾಡ್ದೇ ಇರೋದನ್ನು), ನೀವು ನಾವು ಹೆಚ್ಚಿನ ಕನ್ನಡಿಗರೂ ಮಾಡಿರುತ್ತೇವೆ. ಯಾಕೆಂದ್ರೆ ಅದು 'ಕನ್ನಡಿಗರ ಫೀಚರ್ರು!'
"ನಿಮ್ಮ ಮಗಳಿಗೆ ಕನ್ನಡ ಕಲಿತರೆ ಕನ್‍ಫ್ಯೂಸ್ ಆಗುವುದಾದರೆ, ನನ್ನ ಮಗಳಿಗೆ ಕೂಡ ಕನ್‍ಫ್ಯೂಸ್ ಆಗುತ್ತದೆ, 'ತನ್ನ ಭಾಷೆ ದಿಲ್ಲಿಯವಳು ಕಲಿಯದಿದ್ದ ಮೇಲೆ, ತಾನೇಕೆ ಅವಳ ಭಾಷೆ ಕಲಿಯಬೇಕು?' ಅಂತ. ಆದ್ದರಿಂದ ನೀವು ಅವಳನ್ನು ಹಿಂದಿಯಲ್ಲಿ ಮಾತಾಡಿಸಬೇಡಿ." ಅಂತ ಅವರು ನೆರೆಯವರಿಗೆ ಹೇಳಬೇಕಿತ್ತು ಅಂತ ನನ್ನಾಸೆ.
ಆ ರೊಚ್ಚು, ಕಿಚ್ಚು ನಮ್ಮಲ್ಲಿ ಬರಬೇಕು, ಅಂತ ನನ್ನಾಸೆ.
'ಒಂದು ಹೊಸ ರಾಜ್ಯಕ್ಕೆ ಬರುವಾಗ ಅಲ್ಲಿ ಯಾವ ಭಾಷೆ ಎಷ್ಟು ಬಳಕೆಯಲ್ಲಿದೆ ಅಂತ ತಿಳಿದುಕೊಳ್ಳದೇ, ಅಲ್ಲಾಡಿಸಿಕೊಂಡು ಬಂದಿದ್ದೀರಾ! ನಿಮ್ಮನ್ನು ನೋಡಿದ್ರೆ ನನಗೆ ಆಶ್ಚರ್ಯ ಆಗುತ್ತೆ!' ಅಂತ ಅವರು ನೆರೆಯವರಿಗೆ ಹೇಳಬೇಕಿತ್ತು ಅಂತ ನನ್ನಾಸೆ.
ಅವರ ದಿಲ್ಲಿ-ನೆರೆಯವರ ಗುಣ 'ದುರಹಂಕಾರ' ಅಷ್ಟೆ.
ಆದರೆ ನಮ್ಮ ಕನ್ನಡಿಗರ ಗುಣ - 'ಉದಾರತೆ' ಎನ್ನುವುದನ್ನು ನಾನು ಒಪುವುದಿಲ್ಲ.
'ಕನ್ನಡಿಗರ ಉದಾರತೆ' ಎನ್ನುವುದನ್ನು ಕೇಳಿದಾಗಲೆಲ್ಲ 'ಬಗ್'‍ನ್ನು 'ಫೀಚರ್' ಎನ್ನೋ ಪ್ರೋಗ್ರಾಮರ್ ನೆನಪಾಗುತ್ತಾನೆ.

Rating
No votes yet

Comments