ನಮ್ಮ ಪರಂಪರೆ-1
ಮನುಷ್ಯನಿಗೆ ಅಂತಿಮವಾಗಿ ಬೇಕಾಗಿರುವುದು ಏನು?
ಯಾರಿಗೆ ಈ ಪ್ರಶ್ನೆ ಕೇಳಿದರೂ ಸಿಗುವ ಉತ್ತರ ಸುಖವಾದ ಜೀವನ. ಹಾಗಾದರೆಸುಖದ ಕಲ್ಪನೆ ಏನು?
ಸ್ವಾಮಿ ಸುಖಬೋಧಾನಂದರು ಒಂದುಚಿಕ್ಕ ಕಥೆ ಹೇಳುತ್ತಾರೆ. ಶ್ರೀಮಂತರೊಬ್ಬರ ಮನೆಯಲ್ಲಿ ಸಾಕಿದ್ದ ನಾಯಿಯನ್ನು ವಾಯುವಿಹಾರಾರ್ಥ ರಸ್ತೆಗೆ ಬಿಟ್ಟಿರುತ್ತಾರೆ. ರಸ್ತೆಯಲ್ಲಿ ಹೋಗುತ್ತಿದ್ದ ನಾಯಿಯು ಒಂದುಒಣಮೂಳೆ ಕಂಡು ಅದನ್ನು ಬಾಯಲ್ಲಿ ಕಚ್ಚಿಕೊಳ್ಳುತ್ತದೆ. ಅದನ್ನು ಕಡಿದು ಕಡಿದು ವಸಡಲ್ಲಿ ರಕ್ತಸ್ರಾವವಾಗುತ್ತೆ. ಮೂಳೆಯಿಂದರಕ್ತ ಬರುತ್ತಿದೆ ಎಂದು ತಿಳಿದ ನಾಯಿಯು ಅದನ್ನು ಚಪ್ಪರಿಸುತ್ತಾಸಂತೋಷಪಡುತ್ತದೆ.ಶ್ರೀಮಂತನ ಮನೆಯ ಮೃಷ್ಟಾನ್ನ ವನ್ನು ಬಿಟ್ಟುಒಣಮೂಳೆಕಡಿಯುತ್ತಾ ತನ್ನ ಬಾಯಲ್ಲಿ ವಸರಿರುವ ರಕ್ತವನ್ನೇ ಚಪ್ಪರಿಸುವ ನಾಯಿಯಂತೆ ನಮ್ಮ ಸ್ಥಿತಿಯೂ ಆಗಿದೆ. ಸುಖದ ಭ್ರಮೆಯಲ್ಲಿ ನಾವು ಹುಡುಕುತ್ತಿರುವುದೆಲ್ಲಾ ಮುಂದೆ ನಮ್ಮನ್ನುನಾಶಮಾಡುತ್ತದೆಂಬ ಪರಿವೆ ನಮಗಿಲ್ಲ. ಮಧ್ಯಪಾನ,ಧೂಮಪಾನ , ವೇಶ್ಯಾಸಹವಾಸ ಎಲ್ಲವೂ ಇಷ್ಟೆ. ತತ್ಕಾಲದಲ್ಲಿ ಸುಖದ ಭ್ರಮೆಯಲ್ಲಿ ತೇಲುವ ನಾವು ಶಾಶ್ವತ ದು:ಖಕ್ಕೆ ನಮ್ಮನ್ನು ಬಲಿಗೊಟ್ಟುಕೊಳ್ಳುತ್ತೇವೆ. ಇದೇ ವೇಳೆನಮ್ಮಮನೆಯಲ್ಲೇ ಲಭ್ಯವಿರುವ ಸುಖವನ್ನುನಾವು ತಿರಸ್ಕರಿಸಿರುತ್ತೇವೆ.ಈ ಹಿನ್ನೆಲೆಯಲ್ಲಿ ಈಗ ನಾವು ನಮ್ಮ ಪರಂಪರೆ ಮತ್ತುಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಚಿಂತನ-ಮಂಥನ ನಡೆಸೋಣ.
* ಎಲ್ಲರೂ ಸುಖವಾಗಿರಲಿ:
ಸರ್ವೇಪಿ ಸುಖಿನ: ಸಂತು
ಸರ್ವೇ ಸಂತು ನಿರಾಮಯಾ:
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದು:ಖ ಭಾಗ್ಭವೇತ್||
ಎಲ್ಲರೂ ಸುಖವಾಗಿರಲಿ, ಎಲ್ಲರೂನಿಶ್ಚಿಂತರಾಗಿರಲಿ,ಎಲ್ಲರೂಆರೋಗ್ಯವಾಗಿರಲಿ, ಯಾರಿಗೂ ದು:ಖ ಬರುವುದು ಬೇಡ. ಎಲ್ಲರೂ ಎಂದರೆಯಾರು? ನಮ್ಮ ಮನೆಯವರೇ? ನಮ್ಮೂರಿನವರೇ? ನಮ್ಮ ಜಾತಿಯವರೇ? ನಮ್ಮ ಧರ್ಮದವರೇ? ನಮ್ಮಭಾಷೆಯವರೇ? ಅಥವಾ ಕೇವಲ ಮನುಷ್ಯರೇ? ನಮ್ಮ ಪೂರ್ವಜರ ಚಿಂತನೆ ಅದೆಲ್ಲವನ್ನೂ ಮೀರಿದ್ದು. ಎರಡುಕಾಲಿನಮನುಷ್ಯರು, ನಾಲ್ಕು ಪ್ರಾಣಿಗಳಷ್ಟೇ ಅಲ್ಲ, ಸೃಷ್ಟಿಯ ಗಿಡಮರಬಳ್ಳಿಗಳು,ಜಲಚರಗಳು, ಕ್ರಿಮಿಕೀಟಗಳು, ಎಲ್ಲವೂ ಸುಖವಾಗಿರಲಿ, ಎಂಬುದು ಅವರ ನಿತ್ಯ ಸಂಕಲ್ಪವಾಗಿತ್ತು.ನಮ್ಮ ಚಿಂತನೆಇದೇ ಆದರೆ ಇನ್ನು ದೇಶದಲ್ಲಿ ಸಂಘರ್ಷವಿರಲು ಸಾಧ್ಯವೇ?
ಕಾಲೇ ವರ್ಷತು ಪರ್ಜನ್ಯ:
ಪೃಥ್ವೀ ಸಸ್ಯಶಾಲಿನೀ
ದೇಶೋಯಂ ಕ್ಷೋಭ ರಹಿತ:
ಸಜ್ಜನಾ ಸಂತು ನಿರ್ಭಯಾ:
ಕಾಲಕಾಲಕ್ಕೆ ಮಳೆಯಾಗಲಿ, ಭೂಮಿ ಸಸ್ಯಶಾಮಲೆಯಾಗಿರಲಿ, ದೇಶವುಕ್ಷೋಭರಹಿತವಾಗಿರಲಿ, ಪ್ರಜೆಗಳು ನಿರ್ಭಯದಿಂದ ಬಾಳಲಿ.
* ಹೆಣ್ಣು ಮಕ್ಕಳು ದೇವಿಯ ಸ್ವರೂಪ:
ದಿನಬೆಳಗಾದರೆ ದಿನಪತ್ರಿಕೆಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ನಾವು ಕಾಣುವುದೇನು? ಪತ್ನಿಯನ್ನು ಬೆಂಕಿಯಲ್ಲಿ ಸುಟ್ಟ ಪತಿ! ವರದಕ್ಷಿಣೆಗಾಗಿ ಹೆಣ್ಣಿಗೆ ಹಿಂಸೆ! ಅಪ್ರಾಪ್ತ ಬಾಲಕಿಯಮೇಲೆ ಅತ್ಯಾಚಾರ! ಮಗಳಿನಮೇಲೆಯೇ ತಂದೆಯ ಅತ್ಯಾಚಾರ!!
ಸುದ್ಧಿ ಓದುವಾಗ ತಲೆಸುತ್ತಿ ಬರುತ್ತದೆ. ಯಾಕೆ ಹೀಗೆಲ್ಲಾ? ಹೆಣ್ಣಿನ ಬಗ್ಗೆ ನಮ್ಮ ಪೂರ್ವಜರ ಕಲ್ಪನೆ ಏನಿತ್ತು?
ಯತ್ರ ನಾರ್ಯಸ್ತು ಪೂಜ್ಯಂತೇ
ರಮಂತೇ ತತ್ರ ದೇವತಾ:||
ಎಲ್ಲಿ ಸ್ತ್ರೀಯರು ಪೂಜ್ಯಭಾವದಿಂದಕಾಣಲ್ಪಡುವರೋ ಅಲ್ಲಿ ದೇವತೆಗಳು ಸಂತೋಷವಾಗಿರುತ್ತಾರೆ. ಒಬ್ಬ ಕವಿ ಹೇಳಿದ " ಹರ್ ಬಾಲಾ ದೇವೀಕಿ ಪ್ರತಿಮಾ" ಎಲ್ಲಾ ಹೆಣ್ಣು ಮಕ್ಕಳು ದೇವಿಯ ಸ್ವರೂಪ. ಇಂತಹಾ ಚಿಂತನೆ ನಮ್ಮದಾದರೆ ಯಾವಹೆಣ್ಣು ದೌರ್ಜನ್ಯಕ್ಕೆ ಒಳಗಾಗಲು ಸಾಧ್ಯ? ಬದಲಿಗೆ ಅವಳು ಸಂತಸವಾಗಿದ್ದು ಉಳಿದವರಿಗೆ ತಾಯಿಯ ಪ್ರೀತಿಯನ್ನುಕೊಡಬಲ್ಲಳು .
* ಧರ್ಮದ ಹತ್ತು ಮುಖಗಳು:
ಧೃತಿ: ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹ: |
ಧೀರ್ವಿದ್ಯಾ ಸತ್ಯಮಕ್ರೋಧ: ದಶಕಂ ಧರ್ಮ ಲಕ್ಷಣಮ್||
ಧರ್ಮದ ಹತ್ತು ಲಕ್ಷಣಗಳನ್ನು ನೋಡೋಣ.
ಧೃತಿ: - ಏನೇ ಅಡ್ಡಿಬಂದರೂ ಎದೆಗುಂದದೆ ಮುಂದುವರೆಯುವ ಉತ್ಸಾಹ
ಕ್ಷಮಾ- ನಮ್ಮನ್ನು ಯಾರೇ ನಿಂದಿಸಿದರೂ ಅವರನ್ನು ಕ್ಷಮಿಸಿ ಪ್ರೀತಿಯಿಂದ ನೋಡುವಗುಣ
ದಮ: - ಹಿತಮಿತವಾಗಿ ಇಂದ್ರಿಯಗಳಿಂದಅನುಭವಿಸುವ ಕಲೆ
ಅಸ್ತೇಯಮ್- ಕಳ್ಳತನ ಮಾಡದಿರುವಿಕೆ
ಶೌಚಮ್- ಮನಸ್ಸನ್ನು ದೇಹವನ್ನು ಶುಚಿಯಾಗಿಟ್ಟುಕೊಳ್ಳುವುದು
ಇಂದ್ರಿಯನಿಗ್ರಹ: - ಹೊರಗಿನ ಆಸೆಗಳಿಗೆ ಬಲಿಯಾಗದಂತೆ ಹತೋಟಿ
ಧೀ: - ಬುದ್ಧಿಶಕ್ತಿ, ವಿವೇಚನೆ
ವಿದ್ಯಾ- ತಿಳುವಳಿಕೆ
ಸತ್ಯಮ್- ಸತ್ಯವನ್ನೇ ಹೇಳುವುದು
ಅಕ್ರೋಧ: - ಸಿಟ್ಟಾಗದಿರುವುದು
ಮೇಲಿನ ಹತ್ತು ಗುಣಗಳನ್ನು ಹೊಂದಿದ್ದರೆಅವನು ಧರ್ಮಮಾರ್ಗದಲ್ಲಿ ನಡೆದಂತೆ
* ಚತುರ್ವಿದ ಪುರುಷಾರ್ಥಗಳು
ಧರ್ಮ, ಅರ್ಥ,ಕಾಮ ಮೋಕ್ಷ: ಇದುನಾಲ್ಕು ಪುರುಷಾರ್ಥಗಳು.
ಮನುಷ್ಯ ಹೇಗೆ ಬಾಳಬೇಕೆಂಬುದಕ್ಕೆಇದೊಂದು ಸೂತ್ರ. ಧರ್ಮ ಮತ್ತು ಮೋಕ್ಷದ ಚೌಕಟ್ಟಿನಲ್ಲಿ ಅರ್ಥಕಾಮಗಳನ್ನು ಅನುಭವಿಸುವ ಸೂತ್ರ.
ಧರ್ಮದಿಂದ ಗಳಿಸು , ಮೋಕ್ಷದಗಮನವಿಟ್ಟು ಕಾಮವನ್ನು ಅನುಭವಿಸು. ಹೀಗಾದಾಗ ಮನುಷ್ಯನು ತಾನು ಬದುಕಲುಬೇಕಾದಷ್ಟನ್ನು ಧರ್ಮಮಾರ್ಗದಲ್ಲಿಬೇರೆಯವರಿಗೆ ಅನ್ಯಾಯವಾಗದಂತೆಸಂಪಾದಿಸಿ ಅಂತಿಮವಾದ ಮೋಕ್ಷದಗಮನದಲ್ಲಿ ಹಿತಮಿತವಾದ ಕಾಮವನ್ನು ಅನುಭವಿಸುತ್ತಾ ಜೀವನ ಮಾಡಿದರೆಅದೊಂದು ಸ್ವರ್ಗ. ಅವನಿಗಷ್ಟೇ ಅಲ್ಲ ಸಮಾಜಕ್ಕೂ, ಅಲ್ಲವೇ?
ವಿವಾಹ ಬಂಧನ:
ಗೊರೂರು ರಾಮಸ್ವಾಮಿ ಅಯ್ಯಂಗಾರರಹೆಸರು ಕೆಳಿದ್ದೀರಿ. ಅವರೊಮ್ಮೆ ಅಮೇರಿಕಾಪ್ರವಾಸದಲ್ಲಿದ್ದಾಗ ಅವರ ಪಕ್ಕದಲ್ಲಿದ್ದ ಅವರ ಪತ್ನಿಯಕಡೆ ಕೈ ತೋರಿಸಿದ ಅಮೇರಿಕಾ ವ್ಯಕ್ತಿ ಕೇಳಿದ-
-ಇವರು ಯಾರು?
ಗೊರೂರರು ಹೇಳಿದರು- ಇವರು ನನ್ನಪತ್ನಿ.
ಅಮೇರಿಕಾ ವ್ಯಕ್ತಿ ಮತ್ತೆ ಕೇಳಿದ- ಎಷ್ಟುದಿನಗಳಿಂದ ಜೊತೆಯಲ್ಲಿದ್ದೀರಿ?
- ನಲವತ್ತು ವರ್ಷಗಳಿಂದ.
ನಲವತ್ತು ವರ್ಷಗಳಿಂದ ಜೊತೆಯಲ್ಲಿ ಜೀವನ ಮಾಡ್ತಾ ಇದೀರಾ!!? ಎಂದುಆಶ್ಚರ್ಯಚಕಿತನಾಗುತ್ತಾನೆ. ಅದಕ್ಕೆಗೊರೂರರು ಹೇಳುತ್ತಾರೆ. ಅಷ್ಟೇ ಅಲ್ಲ. ನಮ್ಮ ದೇಶದಲ್ಲಿ ಒಮ್ಮೆಮದುವೆಯಾದಮೇಲೆ ಸಾಯುವವರೆಗೂ ಪತಿಪತ್ನಿಯರಾಗೇ ಇರುತ್ತೇವೆ.
ಇದು ನಮ್ಮ ಭಾರತೀಯ ಪರಂಪರೆ. ನಮಗೆ ಈ ಬಗ್ಗೆ ಏನೂ ವಿಶೇಷವೆನಿಸುವುದಿಲ್ಲ. ಆದರೆ ಈಗ ಹೆಚ್ಚುತ್ತಿರುವ ಏಡ್ಸ್ ಅಂತ ಮಾರಣಾಂತಿಕಖಾಯಿಲೆಗಳ ಮೂಲ ಹುಡುಕಿದಾಗ ಅಡೆತಡೆಯಿಲ್ಲದ ನಿಯಮ ಬಾಹಿರ ಗಂಡು-ಹೆಣ್ಣಿನ ಸಂಪರ್ಕಗಳೇ ಕಾರಣವೆಂಬುದು ಸಾಬೀತಾಗಿದೆ. ಮದ್ದೇ ಇಲ್ಲದ ಮಾರಣಾಂತಿಕ ಖಾಯಿಲೆಗೆ ಮದ್ದೆಂದರೆ ನಮ್ಮ ಪರಂಪರೆಯ ವಿವಾಹ ಬಂಧನ ಮತ್ತು ಅದರ ಪಾಲನೆ.
ಮುಂದುವರೆಯುವುದು....