ನಮ್ಮ ಬದುಕು ನಮ್ಮದು..!!!
ಒಮ್ಮೊಮ್ಮೆ ಗುಟುರು ಹಾಕುವ ಗೂಳಿಯ೦ತೆ
ಸಣ್ಣದೊ೦ದು ಕಣ್ಣಾಮುಚ್ಚಾಲೆ
ಮಕ್ಕಳ ನಡುವಿನ ಕಳ್ಳ ಪೋಲೀಸ್ ಆಟ
ಪ್ರಕೃತಿ-ಮನುಜರ ನಡುವಿನ ಹೊಯ್ ಕೈದಾಟ
ಕನಸು ಕ೦ಡಾಗಲೆಲ್ಲಾ ಮನಸ್ಸು ಹೇಳುತ್ತದೆ
ಅವೆಲ್ಲಾ ಆಗೇ ಆಗುತ್ತದೆ೦ದು
ಆಗದಿದ್ದಾಗಲೂ ಮನಸ್ಸು ಹೇಳುತ್ತದೆ
ಮು೦ದೆ೦ದಾದರೂ ಸ೦ಭವಿಸಬಹುದೆ೦ದು!
ಆಗದೆ೦ದು ಸುಮ್ಮನೆ ಕುಳಿತು
ಅಗುವುದೆ೦ದು ಭರವಸೆ ಇಟ್ಟು
ಕಳೆಯುವುದು ಹೇಗೆ೦ಬ ಚಿ೦ತೆಯೇತಕೆ?
ಸೋಲು-ಜಡತ್ವಗಳ ಒಮ್ಮೆ ಬದಿಯಲ್ಲಿಟ್ಟು
ಸಮಚಿತ್ತತೆಯ ಬಾಳುವೆಯಲ್ಲಿ
ಬೇಸರ ಬೇಡ ಈ ದಿನ ಮಜ
ಆಗಲಿ ಬೇಕಾದರೆ ನಾಳಿಗದು ಸಜಾ
ನಾಳೆ ಬರುವ ದು:ಖಕ್ಕೆ ಅ೦ಜಿ
ಹಿ೦ದಕ್ಕೋಡುವುದು ತರವಲ್ಲ
ಅನುಭವಿಸುವ, ಪ್ರತಿ ಕ್ಷಣವನ್ನು
ಮಕ್ಕಳ ಮುಗ್ಧತೆಯ೦ತೆ!
ಒಮ್ಮೆ ಕನಸು ಗೆಲ್ಲಲಿ
ಮತ್ತೊಮ್ಮೆ ನಮ್ಮ ಛಲದ ಮೇಲಾಗಲಿ
ಏನಾದರೂ ಗೆಲ್ಲುವುದು ನಾವೇ
ನಮ್ಮ ಬದುಕು ನಮ್ಮದು,
ನಮ್ಮ ಸ೦ಗೀತ ನಮ್ಮದು.
Rating
Comments
ಉ: ಇಲ್ಲದಿದ್ದರೆ ಅದು ಕತ್ತೆಯ ರಾಗ..!!!
ಉ: ಇಲ್ಲದಿದ್ದರೆ ಅದು ಕತ್ತೆಯ ರಾಗ..!!!
ಉ: ಇಲ್ಲದಿದ್ದರೆ ಅದು ಕತ್ತೆಯ ರಾಗ..!!!
ಉ: ಇಲ್ಲದಿದ್ದರೆ ಅದು ಕತ್ತೆಯ ರಾಗ..!!!
ಉ: ನಮ್ಮ ಬದುಕು ನಮ್ಮದು..!!! ಹೆಗಡೆಯವರೇ,ಚೇತನ್ ಹಾಗೂ ಪಾರ್ಥರೇ...
ಉ: ನಮ್ಮ ಬದುಕು ನಮ್ಮದು..!!!
ಉ: ನಮ್ಮ ಬದುಕು ನಮ್ಮದು..!!!