ನಮ್ಮ ಸುತ್ತ ಮುತ್ತ ನಮ್ಮ ಪರಿಸರ
ಮಳೆಯ ಆರ್ಭಟದಿಂದ ಕೆಲವು ಮನೆಗಳಿಗೆ , ಮರಗಿಡಗಳಿಗೆ ಹಾನಿ ಉಂಟಾಗಿದೆ, ಹಲವಾರು ಜೀವಗಳು ಪ್ರಾಣ ಕಳೆದುಕೊಂಡಿದೆ.ಮಳೆಯು ಇಳೆಯ ಕೊಚ್ಚೆಯನ್ನು ತೊಳೆದುಕೊಂಡು ಹೋಗುತ್ತಿದೆ. ಮನುಷ್ಯ ಎಷ್ಟೇ ಜ್ಞಾನಿ ಎಣಿಸಿದರೂ ಅಷ್ಟೇ ಪೆದ್ದು ಕೂಡ ಅನೇಕ ತಂತ್ರಜ್ಞಾನದಿಂದ ಕಟ್ಟಡ ರಸ್ತೆಗಳ ನಿರ್ಮಾಣ ಮಾಡಿದರೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ , ಕಾಂಕ್ರೀಟ್ ರಸ್ತೆ ಮಾಡಿದರೂ ಚರಂಡಿ ಇಲ್ಲ, ಈ ರಸ್ತೆ ಬದಿಗಳಿಗೆ ಜೇಡಿ ಮಣ್ಣು ತುಂಬಿಸಿದ್ದು , ಮಳೆಗಾಲಕ್ಕೆ ಆ ಮಣ್ಣು ಕೊಚ್ಚಿ ಕೆಸರುಮಯವಾಗಿ ಬಿಡುತ್ತದೆ.ಕಾಂಕ್ರೀಟ್ ರಸ್ತೆ ಆದಲ್ಲಿ ಚರಂಡಿ ಮಾಡಲು ಜಾಗದ ತೊಂದರೆ ಇರುವುದರಿಂದ ಮಳೆಗಾಲದಲ್ಲಿ ನೀರು ಹೋಗಲು ಚರಂಡಿ ಇಲ್ಲದೆ ಮಾರ್ಗನೇ ಚರಂಡಿಯಾಗಿದೆ. ಇನ್ನು ಕೆಲವು ಕಡೆ ರಸ್ತೆ ಇದೆ ಚರಂಡಿ ಇದೆ ಆದರೆ ಮಳೆ ನೀರು ಚರಂಡಿಯಲ್ಲಿ ಹೋಗುವುದಿಲ್ಲ . ರಸ್ತೆಯ ಪಕ್ಕದ ಕಾಲು ದಾರಿ ಮೇಲೆ ನೀರು ಹರಿದು ನೀರೆ ಚರಂಡಿ ನಿರ್ಮಾಣ ಮಾಡಿದೆ.
ಚರಂಡಿಯಲ್ಲಿ ತುಂಬಿರುವ ಕಸ ಮಣ್ಣು ಇದನ್ನು ಸರಿಯಾದ ಸಮಯಕ್ಕೆ ತೆಗೆಯದೆ ಹಾಗೆನೇ ಬಿಟ್ಟು, ನೀರೆಲ್ಲ ಮಾರ್ಗಕ್ಕೆ ಹರಿದು ಅದರ ಮೇಲೆ ವಾಹನದ ಸಂಚಾರವಾಗಿ ಮಾರ್ಗದಲ್ಲಿ ನಡೆಯುವವರ ಮೇಲೆ ಕೊಳಕು ನೀರಿನ ಅಭಿಷೇಕವಾಗುತ್ತದೆ. ಕಸದ ಬುಟ್ಟಿ ಇದ್ದರೂ ಕಸವನ್ನು ಅದಕ್ಕೆ ಹಾಕದೆ ಮಾರ್ಗದ ಬದಿ ಸಿಕ್ಕ ಸಿಕ್ಕ ಜಾಗದಲ್ಲಿ ಕಸವನ್ನು ಹಾಕುವುದು.ಕಸದ ಬುಟ್ಟಿ ತುಂಬಿದರೂ ಕಸವನ್ನು ಸರಿಯಾದ ಸಮಯಕ್ಕೆ ವಿಲೇ ಮಾಡದೇ ಇರುವುದರಿಂದ ಗಬ್ಬು ನಾರುವ ಸಮಸ್ಯೆ ಎದುರಾಗುತ್ತದೆ. ತ್ಯಾಜ್ಯ ವಲೇವಾರಿ ಘಟಕಗಳು ಇದ್ದರೂ ಸರಿಯಾದ ಸಂದರ್ಭದಲ್ಲಿ ವಿಲೇ ಮಾಡುವುದಿಲ್ಲ. ಅನೇಕ ಕಾರ್ಖಾನೆಗಳಿಂದ ಹೊರ ಬರುವ ಹೊಗೆ ಕೊಚ್ಚೆ ನೀರು , ರಸಾಯನಿಕ ಪದಾರ್ಥಗಳು ತುಂಬಿ ಪರಿಸರ ವಾಸನೆಯಿಂದ ಕೂಡಿರುತ್ತದೆ.ಅದರ ಜತೆ ಪ್ಲಾಸ್ಟಿಕ್ ವಸ್ತುಗಳಾದ ಬಾಟಳಿಗಳು ಕವರ್ ಗಳು ಎಲ್ಲಾ ಚರಂಡಿಯಲ್ಲಿ, ಕಾಲು ಸಂಕಗಳಲ್ಲಿ, ಕಿರು ಸೇತುವೆಗಳಲ್ಲಿ ತೇಲಿಕೊಂಡು ಹೋಗಿ ನೀರನ್ನು ಕಲುಷಿತಗೊಳಿಸುತ್ತದೆ. ಸರಿಯಾದ ಚರಂಡಿ ವ್ಯವಸ್ಥೆ ಕಸ ವಿಲೇ ಮಾಡುವ ಕಾರ್ಯ ನಡೆದರೆ ಈ ಸಮಸ್ಯೆ ಕಡೆಮೆಯಾಗ ಬಹುದೇನೊ.
ಪಂಚಾಯತ್ ಗಳ ಹಾಗೂ ಮಹಾನಗರ ಪಾಲಿಕೆಗಳ ಸಮಯ ಪ್ರಜ್ಞೆ ಹಾಗೂ ಸರಕಾರ ಇದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡುವುದರಿಂದ . ಈ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಲು ಸಾಧ್ಯ . ಸ್ವಚ್ಚ ಗ್ರಾಮ ಎಂದು ಪ್ರಶಸ್ತಿ ಪಡೆದ ಕೆಲವು ಗ್ರಾಮಗಳಲ್ಲಿ ಇಂತಹ ಪರಿಸ್ಥಿತಿ ಉಂಟಾಗಿದೆ.ವಾರದ ಸಂತೆ ನಡೆಯುವ ಜಾಗ ಹೆಚ್ಚಿನ ಮಾರಟ ಮಳಿಗೆಗಳು, ಮೀನು ಮೌಂಸ ಮಾರಾಟ ಮಾಡುವ ಜಾಗ ವಾಣಿಜ್ಯ ವ್ಯಾಪಾರ ಸ್ಥಳ. ಇತ್ಯಾದಿ . ಇಲ್ಲಿನ ತ್ಯಾಜ್ಯಗಳು ಸರಿಯಾಗಿ ವಿಲೇವಾರಿಯಾಗದೆ ಇರುವುದು. ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಮಾರಾಟಗಾರರೇ ಮಾರಟದ ತ್ಯಾಜ್ಯಗಳನ್ನು ವಿಲೇ ಮಾಡುವಂತೆ ಅಥವಾ ಅಧಿಕ ಕರ ವಿಧಿಸಿ ಪಂಚಾಯತನವರೇ ವಿಲೇ ಮಾಡುವಂತೆ ಮಾಡುವುದು.
ಸಂಕ್ರಾಮಿಕ ರೋಗಗಳಿಗೆ ನಾವೇ ಅವಕಾಶ ಮಾಡಿಕೊಟ್ಟಂತಾಗಿದೆ ಮರ ಗಿಡಗಳನ್ನು ನಾಶ ಮಾಡಿ ಸರಿಯಾದ ವ್ಯವಸ್ಥೆ ಇಲ್ಲದೆ ದೊಡ್ಡ ದೊಡ್ಡ ಕಟ್ಟಡಗಳನ್ನು ಕಾರ್ಖಾನೆಗಳನ್ನು ಕಟ್ಟುವುದು. ಇದರಿಂದ ಸಾರ್ವಜನಿಕರು ತೊಂದರೆ ಪಡುವುದು. ವ್ಯವಸಾಯದ ಭೂಮಿಯನ್ನು ಬೇಸಾಯಗಾರರಿಂದ ಕಸಿದು, ಪರಿಸರ ನಾಶ ಪಡಿಸುವಂತ ಕಾರ್ಖಾನರಗಳನ್ನು ನಿರ್ಮಿಸುವುದು. ಇದರಿಂದ ತಾಪಮಾನ ಏರುವಂತೆ ಮಾಡುವುದು. ಇದೆಲ್ಲ ಮಾನವನ ಆಧುನಿಕ ತಂತ್ರಜ್ಞಾನದ ಪ್ರತಿಫಲ
ಇದು ನಮ್ಮ ಮನೆಯಿಂದಲೇ ಶುರುವಾಗಬೇಕು . ನಮ್ಮ ಮನೆಯ ಕಸವನ್ನು ಎಲ್ಲೇಂದರಲ್ಲಿ ಹಾಕದೆ ಪಕ್ಕದಲ್ಲಿ ಸುಟ್ಟು ಹಾಕುವುದು. ಅಥವಾ ಕಸ ವಿಲೇ ಮಾಡುವವರು ಬರುವಾಗ ಕೊಡುವುದು. ನಮ್ಮ ಮನೆಯ ತ್ಯಾಜ್ಯ ನೀರು ನಮ್ಮ ಸುತ್ತಲಿನ ಗಿಡಗಳಿಗೆ ಹೋಗುವ ವ್ಯವಸ್ಥೆ ಮಾಡುವುದು. ಅಥವ ಚರಂಡಿ ವ್ಯವಸ್ಥೆ ಇದ್ದರೆ ಅದಕ್ಕೆ ಹೋಗುವಂತೆ ಮಾಡುವುದ ನೀರು ನಿಲ್ಲದಂತೆ ಎಚ್ಚರವಹಿಸುವುದು.
ನಾವು ಎಷ್ಟೇ ಮುಂದುವರಿದರೂ ಭೀಕರ ಮಳೆ ಗಾಳಿ ಭೂಕಂಪಗಳು ನಡೆದರೆ ಅದರ ಮುಂದೆ ನಾವೂ ಏನೂ ಅಲ್ಲ. ಮನುಷ್ಯ ಎಷ್ಟೇ ಮುಂದುವರಿದರೂ ಪ್ರಕ್ರತಿ ಮುಂದೆ ಎಲ್ಲಾವೂ ಗೌನ. . . . . . . . .!!!!
Comments
ಉ: ನಮ್ಮ ಸುತ್ತ ಮುತ್ತ ನಮ್ಮ ಪರಿಸರ
ಉತ್ತಮ ಲೇಖನ ಮೇಡಂ.ಪ್ರಕ್ರತಿ ಮುಂದೆ ನಾವು ಶೂನ್ಯ....
ಉ: ನಮ್ಮ ಸುತ್ತ ಮುತ್ತ ನಮ್ಮ ಪರಿಸರ
ಇದರಲ್ಲಿ ಸಣ್ಣ ಪುಟ್ಟ ತಪ್ಪುಗಳು ಅಥವ ದೊಡ್ಡ ತಪ್ಪು ಇರಬಹುದು , ಅದಕ್ಕಾಗಿ ಕ್ಷಮೆ ಕೋರುತ್ತೆನೆ.
ಉ: ನಮ್ಮ ಸುತ್ತ ಮುತ್ತ ನಮ್ಮ ಪರಿಸರ
ನಾಗರಿಕ ಪ್ರಜ್ಞೆ ಮೂಡುವವರೆಗೆ ಪರಿಸ್ಥಿತಿ ಹೀಗೆಯೇ ಇರುತ್ತದೆ, ತಡವಾದರೆ ಮತ್ತಷ್ಟು ಹದಗೆಡುತ್ತದೆ.